ಟೀಮ್ ಇಂಡಿಯಾಕ್ಕೆ ಬೇಕೇ ಬೇಕು ಫಾಸ್ಟ್ ಬೌಲಿಂಗ್ ಆಲ್​ರೌಂಡರ್​..!

ಟೀಮ್ ಇಂಡಿಯಾಕ್ಕೆ ಬೇಕೇ ಬೇಕು ಫಾಸ್ಟ್ ಬೌಲಿಂಗ್ ಆಲ್​ರೌಂಡರ್​..!

2 ಪ್ರತ್ಯೇಕ ಸರಣಿಗಳು, 2 ಪ್ರತ್ಯೇಕ ಜಂಬೋ ತಂಡಗಳು… ಒಂದು ತಂಡ ಇಂಗ್ಲೆಂಡ್​​ನಲ್ಲಿದ್ರೆ, ಇನ್ನೊಂದು ತಂಡ ಇಂದು ಶ್ರೀಲಂಕಾ ಪ್ರಯಾಣಿಸಲಿದೆ. ಈ ಎರಡೂ ತಂಡಗಳನ್ನ ಹೊರತುಪಡಿಸಿ ಇನ್ನೊಂದು ಸಮರ್ಥ ತಂಡವನ್ನ ಆಯ್ಕೆ ಮಾಡೋ ಅಷ್ಟು ಆಟಗಾರರ ದಂಡು ಭಾರತದಲ್ಲಿದೆ. ಆದ್ರೆ, ಈ ಒಂದು ರೋಲ್​ ಪ್ಲೇ ಮಾಡಬಲ್ಲ ಆಟಗಾರನ ಕೊರತೆ ಕಳೆದ 2-3 ದಶಕಗಳಿಂದಲೇ ಇಡೀ ತಂಡವನ್ನ ಕಾಡ್ತಿದೆ.

ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಸೋಲಿನ ಬಳಿಕ ಅತಿ ಹೆಚ್ಚು ಚರ್ಚೆ ಆದ ವಿಚಾರ ಅಂದ್ರೆ ಅದು ಟೀಮ್​ ಕಾಂಬಿನೇಷನ್​..! ಇಬ್ಬರು ಸ್ಪಿನ್​ ಆಲ್​ರೌಂಡರ್​​ಗಳೊಂದಿಗೆ ಕಣಕ್ಕಿಳಿದಿದ್ದು ಯಾಕೆ ಅನ್ನೋ ಪ್ರಶ್ನೆ ವಿಶ್ಲೇಷಕರ ಕಡೆಯಿಂದ ತೂರಿ ಬಂದಿತ್ತು. ಪಂದ್ಯದ ಬಳಿಕ ನಾಸೀರ್​ ಹುಸೈನ್​ ಕೇಳಿದ ಪ್ಲೇಯಿಂಗ್​ ಇಲೆವೆನ್​ ಬ್ಯಾಲೆನ್ಸ್​​ ಹೇಗಿತ್ತು ಎಂಬ ಪ್ರಶ್ನೆಗೆ ಕೊಹ್ಲಿ ಉತ್ತರವನ್ನೂ ನೀಡಿದ್ರು.

‘ನಿಜವಾಗಿಯೂ ಅಲ್ಲ.. ಆದ್ರೆ, ನೀವು ಒಬ್ಬ ಫಾಸ್ಟ್​​ ಬೌಲಿಂಗ್​ ಆಲ್​ರೌಂಡರ್​ ಬೇಕಿತ್ತು. ನಾವು ಆಡಿದ ಈ ಕಾಂಬಿನೇಷನ್​ನಲ್ಲಿ ವಿಶ್ವದ ಹಲವೆಡೆ ವಿವಿಧ ಕಂಡೀಷನ್​ನಲ್ಲಿ ಯಶಸ್ಸನ್ನ ಕಂಡಿದ್ದೇವೆ. ಹೀಗಾಗಿ ನಾವು ಇದು ಉತ್ತಮ 11ರ ಬಳಗ ಎಂಬ ನಿರ್ಧಾರಕ್ಕೆ ಬಂದು ಕಣಕ್ಕಿಳಿದೆವು. ಇದು ಬ್ಯಾಟಿಂಗ್​ಗೂ ಸಹಾಯಕವಾಗಿತ್ತು. ಹಾಗಾಗಿ ಎಲ್ಲಾ ವಿಭಾಗಗಳನ್ನೂ ಒಳಗೊಂಡು ಆಯ್ಕೆ ಮಾಡಿದೆವು. ಪಂದ್ಯದ ಸಮಯ ಇನ್ನೂ ಹೆಚ್ಚಿದ್ದು, ಪಿಚ್​ ಇನ್ನೂ ಹೆಚ್ಚು ಸಹಾಯಕವಾಗಿದ್ರೆ, ಸ್ಪಿನ್ನರ್​​ಗಳು ಪಂದ್ಯದಲ್ಲಿ ಕೀ ರೋಲ್​ ಪ್ಲೇ ಮಾಡ್ತಿದ್ರು’ 

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ

ಯೆಸ್​​..! ಕೊಹ್ಲಿ​ ಹೇಳಿದಂತೆ ಟೀಮ್​ ಇಂಡಿಯಾವನ್ನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಕಾಡಿದ್ದು, ಫಾಸ್ಟ್​ ಬೌಲಿಂಗ್​ ಆಲ್​ರೌಂಡರ್​ ಕೊರತೆ. ಈ ಒಂದು ವಿಭಾಗದ ಹಿನ್ನಡೆಯಿಂದಾಗಿ ಟೀಮ್​ ಬ್ಯಾಲೆನ್ಸ್​​ ಇರಲಿಲ್ಲ ಅನ್ನೋದು ಕೊಹ್ಲಿಯ ಮಾತಾಗಿದೆ. ಅದು ನಿಜ ಕೂಡ..! ಕೈಲ್​ ಜೆಮಿಸನ್​, ಕಾಲಿನ್​ ಡಿ ಗ್ರಾಂಡ್​ಹೋಮ್​ರಂತಹ ಆಲ್​ರೌಂಡರ್​ಗಳ ಸಂಯೋಜನೆಯಲ್ಲಿ ಕಣಕ್ಕಿಳಿದು ಯಶಸ್ಸು ಕಂಡ ನ್ಯೂಜಿಲೆಂಡ್​​ನ ತಾಜಾ ಉದಾಹರಣೆ ಎದುರೇ ಇದೇಯಲ್ವಾ…?

ಎರಡು ದಶಕಗಳಿಂದ ಕಾಡ್ತಿದೆ ಪೇಸ್​ ಆಲ್​​ರೌಂಡರ್​​ ಕೊರತೆ..!
ಟೀಮ್​ ಇಂಡಿಯಾ ಈ ಒಂದು ವಿಭಾಗದಲ್ಲಿ ತೀವ್ರ ಕೊರತೆಯನ್ನ ಎದುರಿಸುತ್ತಿರೋದು ಇಂದು ನಿನ್ನೆಯಿಂದಲ್ಲ.. ಸುಮಾರು ಎರಡು ದಶಕಗಳಿಂದಲೇ ಈ ಸಮಸ್ಯೆ ಟೀಮ್​ಇಂಡಿಯಾದ ಬೆನ್ನು ಬಿದ್ದಿದೆ. 1994ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಕಪಿಲ್​ ದೇವ್​ ಗುಡ್​ ಬೈ ಹೇಳಿದ ಬಳಿಕ ಭಾರತ ಪೇಸ್​​ ಆಲ್​ರೌಂಡರ್​ ಕೊರತೆಯನ್ನ ಎದುರಿಸುತ್ತಲೇ ಬಂದಿದೆ.

ಕಪಿಲ್​ ದೇವ್​ ಬಳಿಕ ಟೀಮ್​ಇಂಡಿಯಾದಲ್ಲಿ ಕಾಣಿಸಿಕೊಂಡ ಪ್ರಮುಖ ಪೇಸ್​ ಆಲೌರೌಂಡರ್​ ಅಂದ್ರೆ ಅದು ಇರ್ಫಾನ್​ ಪಠಾಣ್​. 2003ರ ದಶಕದಲ್ಲಿ ಟೀಮ್​ಇಂಡಿಯಾಗೆ ಎಂಟ್ರಿ ಕೊಟ್ಟ ಪಠಾಣ್​ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದ್ರೆ, ಇಂಜುರಿ ಹಾಗೂ ಇನ್​ಕನ್ಸಿಸ್ಟೆನ್ಸಿ ಇರ್ಫಾನ್​ಗೆ ಹೆಚ್ಚು ದಿನಗಳ ಕಾಲ ಆಡೋ ಅವಕಾಶವನ್ನೇ ನೀಡಲಿಲ್ಲ.

ಇತ್ತಿಚೀನ ದಿನಗಳಲ್ಲಿ ಟೀಮ್​ಇಂಡಿಯಾದಲ್ಲಿ ಕಾಣಿಸಿಕೊಂಡ ವಿಜಯ್​ ಶಂಕರ್​ ಹಾಗೂ ಶಿವಂ ದುಬೆ ಕೂಡ ಇದೇ ಕೋಟಾದಲ್ಲಿ ಸ್ಥಾನ ಪಡೆದಿದ್ರು. ವಿಜಯ್​ ಶಂಕರ್​ಗೆ ವಿಶ್ವಕಪ್​ ಟೂರ್ನಿಯಲ್ಲೂ ಸ್ಥಾನ ನೀಡಲಾಗಿತ್ತು. ಆದ್ರೆ, ಸಿಕ್ಕ ಅವಕಾಶಗಳನ್ನ ಇಬ್ಬರೂ ಕೈ ಚೆಲ್ಲಿದ್ರು. ಇವರು ನೀಡಿದ ನಿರಾಶಾದಾಯಕ ಪ್ರದರ್ಶನ ಆಯ್ಕೆ ಸಮಿತಿ ಗೇಟ್​ಪಾಸ್​ ನೀಡುವಂತೆ ಮಾಡಿತು.

ಭಾರತದ ಏಕೈಕ ಭರವಸೆ ಹಾರ್ದಿಕ್​ ಪಾಂಡ್ಯ..!
ಇವರೆಲ್ಲರಿಗಿಂತ ಹೆಚ್ಚು ನಿರೀಕ್ಷೆ ಇದ್ದದ್ದು ಹಾರ್ದಿಕ್​ ಪಾಂಡ್ಯ ಮೇಲೆ…! ಸ್ಥಾನ ಗಿಟ್ಟಿಸಿಕೊಂಡ ಆರಂಭದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ಸಾಲಿಡ್​​ ಪರ್ಫಾಮೆನ್ಸ್​ ನೀಡ್ತಿದ್ರು. ಕಪೀಲ್​ ದೇವ್​ ಬಳಿಕ ಟೀಮ್​ಇಂಡಿಯಾಗೆ ಕಾಡ್ತಿದ್ದ ಸಮರ್ಥ ಪೇಸ್​ ಆಲ್​ರೌಂಡರ್​ ಸಮಸ್ಯೆ ನೀಗಿತು ಎಂದೇ ವ್ಯಾಖ್ಯಾನಿಸಲಾಗಿತ್ತು. ಈಗ ನೋಡಿದ್ರೆ ಫಿಟ್​ನೆಸ್​ ಸಮಸ್ಯೆ ಎದುರಿಸ್ತಾ ಇರೋ ಪಾಂಡ್ಯ ಬೌಲಿಂಗ್​ ಮಾಡ್ತಿಲ್ಲ. ಈ ಒಂದು ವೀಕ್​ನೆಸ್​ಯೇ ​​ಇದೀಗ ಹಾರ್ದಿಕ್​ಗೆ ಟೆಸ್ಟ್​ ತಂಡದಿಂದ ಕೊಕ್​ ನೀಡಿದೆ.

ಯುವ ಆಟಗಾರರು ಹಾಗೂ ಟ್ಯಾಂಲೆಂಟ್​ ಹಂಟ್​ಗೆಂದು ಬಿಸಿಸಿಐ ಕೋಟಿ-ಕೋಟಿ ಹಣವನ್ನೇ ಮೀಸಲಿಡ್ತಿದೆ. ಆದ್ರೂ ಈವರೆಗೆ ಸಮರ್ಥ ಪೇಸ್​​ ಆಲ್​ರೌಂಡರ್​​ ಹುಟ್ಟು ಹಾಕುವಲ್ಲಿ ಬಿಸಿಸಿಐ ವಿಫಲವಾಗಿದೆ. ಇದೀಗ ಇರೋ ಏಕೈಕ ಭರವಸೆ ಅಂದ್ರೆ ಅದು ಹಾರ್ದಿಕ್ ಪಾಂಡ್ಯ. ಮುಂಬರುವ ಟಿ20 ವಿಶ್ವಕಪ್​ ಟೂರ್ನಿಯ ವೇಳೆಯಾದ್ರೂ ಪಾಂಡ್ಯ ಬೌಲಿಂಗ್​ ಫಿಟ್​ನೆಸ್​ ಕಂಡುಕೊಳ್ತಾರಾ..? ಕಾದು ನೋಡಬೇಕಿದೆ.

The post ಟೀಮ್ ಇಂಡಿಯಾಕ್ಕೆ ಬೇಕೇ ಬೇಕು ಫಾಸ್ಟ್ ಬೌಲಿಂಗ್ ಆಲ್​ರೌಂಡರ್​..! appeared first on News First Kannada.

Source: newsfirstlive.com

Source link