ವಿದೇಶದಲ್ಲಿ ಟೀಮ್ ಇಂಡಿಯಾ ಸೂಪರ್​ಸ್ಟಾರ್ ಬ್ಯಾಟ್ಸ್​ಮನ್​​​​ ಫ್ಲಾಪ್ ಆಗ್ತಿರೋದ್ಯಾಕೆ..?

ವಿದೇಶದಲ್ಲಿ ಟೀಮ್ ಇಂಡಿಯಾ ಸೂಪರ್​ಸ್ಟಾರ್ ಬ್ಯಾಟ್ಸ್​ಮನ್​​​​ ಫ್ಲಾಪ್ ಆಗ್ತಿರೋದ್ಯಾಕೆ..?

ಕಳೆದೆರಡು ವರ್ಷಗಳಿಂದ ದೇಶ-ವಿದೇಶಗಳಲ್ಲಿ ಟೀಮ್​ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಹೋದ ಕಡೆಯಲ್ಲೆಲ್ಲಾ ಸರಣಿ ಗೆಲ್ತಿರುವ ವಿರಾಟ್​ ಪಡೆ, ಇದೀಗ ಇಂಗ್ಲೆಂಡ್​ ಸರಣಿ ಮೇಲೆ ಕಣ್ಣಿಟ್ಟಿದೆ. ಸ್ವದೇಶ ಮಾತ್ರವಲ್ಲ, ವಿದೇಶದಲ್ಲೂ ನಾವು ಹುಲಿಗಳೇ ಅನ್ನೋದನ್ನ ಭಾರತ ಸಾಬೀತುಪಡಿಸಿದೆ. ಆದರೆ ಟೀಮ್​ ಇಂಡಿಯಾದ ಈ ಐವರು ಮಾತ್ರ, ತವರಿನಲ್ಲೇ ಘರ್ಜಿಸಿದ್ರೆ, ವಿದೇಶದಲ್ಲಿ ಮಾತ್ರ ಅವರ ಆಟ ಮಂಕಾಗಿದೆ. ಅದರಲ್ಲೂ 2019ರಿಂದ ಈಚೆಗೆ ಈ ಘಟಾನುಘಟಿಗಳ ಪ್ರದರ್ಶನ ತೀರಾ ಕೆಟ್ಟದಾಗಿದೆ.

2020ರಲ್ಲಿ ನ್ಯೂಜಿಲೆಂಡ್​ನಲ್ಲಿ ಟೆಸ್ಟ್​ ಸೋತ ನಂತರ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯದಲ್ಲಿ ಭಾರತ ಸೋತಿದೆ.. ಇದನ್ನು ಬಿಟ್ಟರೆ ಉಳಿದೆಲ್ಲಾ ಸರಣಿಗಳಲ್ಲೂ, ಅಂದ್ರೆ 2019ರ ಬಳಿಕ ಭಾರತ, ಫಾರಿನ್​ ಪಿಚ್​​​ಗಳಲ್ಲಿ ಹಿಡಿತ ಸಾಧಿಸಿದೆ. ಇದೀಗ ಆಗಸ್ಟ್​ 4ರಿಂದ ಶುರುವಾಗುವ ಇಂಗ್ಲೆಂಡ್​ ಸರಣಿಯನ್ನೂ ಗೆಲ್ಲೋದಕ್ಕೆ ಕೊಹ್ಲಿ ಪಡೆ ಸಜ್ಜಾಗ್ತಿದೆ. ಆದರೆ ಐವರ ಕಳೆಪೆಯಾಟ ಟೀಮ್​ ಮ್ಯಾನೇಜ್​ಮೆಂಟ್​ ಅನ್ನ ಚಿಂತೆಗೆ ದೂಡಿದೆ. ತಂಡದ ಆಧಾರ ಸ್ಥಂಭ ಅಂತಿದ್ದವರೇ ಕೈ ಕೊಡ್ತಿರೋದ್ರಿಂದ, ಇಂಗ್ಲೆಂಡ್ ಟೆಸ್ಟ್​​ ಸಿರೀಸ್​ನಲ್ಲಿ ಹಿಡಿತ ಸಾಧಿಸ್ತಾರಾ ಅನ್ನೋ ಪ್ರಶ್ನೆ ಹುಟ್ಟು ಕೂಡ ಹಾಕಿದೆ.

ಕಿಂಗ್​​ ಕೊಹ್ಲಿ, ನ್ಯೂವಾಲ್​ ಪೂಜಾರ, ರೋಹಿತ್ ಫೇಲ್​ ಫೇಲ್!
2019ರ ನಂತರ ಫಾರಿನ್​​​​​ ಸರಣಿಗಳಲ್ಲಿ ಟೀಮ್​ ಇಂಡಿಯಾವೇನೋ ಗೆದ್ದಿದೆ. ಆದರೆ ಈ ಪಿಚ್​​ಗಳಲ್ಲಿ ಈ ಐವರ ಕೆಟ್ಟ ಪ್ರದರ್ಶನ ಮರೀಚಿಕೆಯಾಗಿದೆ. ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ನ್ಯೂ ವಾಲ್​ ಎಂದೇ ಖ್ಯಾತಿ ಪಡೆದ ಚೇತೇಶ್ವರ್​ ಪೂಜಾರ, ರೋಹಿತ್​ ಶರ್ಮಾ ಅಟ್ಟರ್​​ ಫ್ಲಾಪ್​ ಪ್ರದರ್ಶನ ತೋರಿರೋದು ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವು ತರಿಸಿದೆ. ಇವರ ಜೊತೆಗೆ ಕನ್ನಡಿಗರಾದ ಕೆ.ಎಲ್​.ರಾಹುಲ್​, ಮಯಾಂಕ್​ ಅಗರ್​ವಾಲ್​ ಕೂಡ ಈ ಸಾಲಿನಲ್ಲಿದ್ದಾರೆ. ಈ ಐವರು ಘಟಾನುಘಟಿಗಳ ಫೈಲ್ಯೂರ್​ನಿಂದಾಗಿ ಇದೀಗ ಟೀಮ್​ ಇಂಡಿಯಾಗೆ ಆತಂಕ ಹೆಚ್ಚಿಸಿದೆ. ಅದಕ್ಕೆ ಕಾರಣ 2019ರ ನಂತರ ಅವರ ಪ್ರದರ್ಶನ ಹೀಗಿದೆ ನೋಡಿ..!

ವಿದೇಶಿ ಪಿಚ್​​​ಗಳಲ್ಲಿ ಕೈಕೊಟ್ಟಿದ್ದಾರೆ ತಂಡದ ಆಪತ್ಬಾಂಧವರು!
​ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ.! ಅದರಲ್ಲೂ ಚೇಸಿಂಗ್​ ಮಾಸ್ಟರ್​​ರ 2019ರ ಬಳಿಕ ಪ್ರದರ್ಶನ ನೋಡಿದ್ರೆ, ವಿರಾಟ್​​ ಕೊಹ್ಲಿ ಆಟವೇನಾ ಅನಿಸುತ್ತೆ. 2019ರ ನಂತರ ಫಾರಿನ್​ ಪಿಚ್​​ಗಳಲ್ಲಿ ಫ್ಲಾಪ್​ ಮೇಲೆ ಫ್ಲಾಪ್​ ಶೋ ತೋರಿಸುತ್ತಿರುವ ಕೊಹ್ಲಿಯಿಂದ, ಒಂದೇ ಒಂದು ಶತಕ ಕೂಡ ಮೂಡಿ ಬರದಿರೋದೆ ಅದಕ್ಕೆ ಎಕ್ಸಾಂಪಲ್​..! ಇನ್ನು ಚೇತೇಶ್ವರ್​​ ಪೂಜಾರ..! ಟೀಮ್​ ಇಂಡಿಯಾದ ಗೋಡೆಯೆಂದೇ ಖ್ಯಾತಿ ಪಡೆದಿದ್ದಾರೆ. ಎಂತಹ ಒತ್ತಡದಲ್ಲಾದ್ರು ತಡೆಗೋಡೆಯಂತೆ ತಂಡಕ್ಕೆ ಗೆಲುವಿನ ಕೊಡುಗೆ ನೀಡ್ತಿದ್ದ ಆಪತ್ಬಾಂಧವ.. ಆದರೆ 2019ರ ನಂತರ ವಿದೇಶಿ​​ಗಳಲ್ಲಿ ಪೂಜಾರ ತೋರಿರೋದು ಕೆಳಮಟ್ಟದ ಪ್ರದರ್ಶನ.

ವಿದೇಶದಲ್ಲಿ ಕೊಹ್ಲಿ-ಪೂಜಾರ ಪ್ರದರ್ಶನ (2019-21)
ಕೊಹ್ಲಿ                                  ಪೂಜಾರ​
06                ಪಂದ್ಯ              09
275                ರನ್​​               624
25.53             ಸರಾಸರಿ         36.70
76                   ಬೆಸ್ಟ್​​            193

ಹಿಟ್​​ಮ್ಯಾನ್ ರೋಹಿತ್​ರಿಂದ​ ತೀರಾ ಕಳಪೆ ಪ್ರದರ್ಶನ!
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಟೂರ್ನಿಯಲ್ಲಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ ರೋಹಿತ್​​ ಶರ್ಮಾ 6ನೇ ಆಟಗಾರ. ಜೊತೆಗೆ ಆರಂಭಿಕನಾಗಿ ಕೂಡ ಉತ್ತಮ ಅಡಿಪಾಯ ಹಾಕ್ತಿದ್ರು. ಆದರೆ ಅಷ್ಟರಮಟ್ಟಿಗೆ ಭರವಸೆ ಮೂಡಿಸಿದ್ದ ರೋಹಿತ್​, 2019ರ ಬಳಿಕ ವಿದೇಶಿ ಪಿಚ್​​​ಗಳಲ್ಲಿ ಹಳಿ ತಪ್ಪಿದ್ದಾರೆ. ಟೀಮ್​ ಇಂಡಿಯಾ ಮ್ಯಾನೇಜ್​​ಮೆಂಟ್​ ಕೂಡ, ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ಅನ್ನೋ ಆಶಾಕಿರಣಗೆ ಏನಾಗಿದೆ ಅಂತ, ತಲೆಮೇಲೆ ಕೈಹೊತ್ತು ಕೂತಿದೆ.

ವಿದೇಶದಲ್ಲಿ ರೋಹಿತ್​​ ಪ್ರದರ್ಶನ (2019-21)
ಪಂದ್ಯ             02
ರನ್             ​​ 129
ಸರಾಸರಿ       32.25
ಬೆಸ್ಟ್​​              52

ಫಾರಿನ್​ ಪಿಚ್​​​ಗಳಲ್ಲಿ ನಡೆಯದ ಮಯಾಂಕ್​-ರಾಹುಲ್​​ ಆಟ!
ಟೀಮ್​ ಇಂಡಿಯಾ ಟೆಸ್ಟ್​​ ತಂಡದಲ್ಲಿ ಕಾಂಪಿಟೇಷನೇನೋ ಹೆಚ್ಚಾಗಿದೆ. ಆದರೆ ಸಿಕ್ಕ ಅವಕಾಶಗಳಲ್ಲಿ ಸದುಪಯೋಗಪಡಿಸಿಕೊಳ್ಳುವಲ್ಲಿ ರಾಹುಲ್​-ಮಯಾಂಕ್​ ಎಡವಿದ್ದಾರೆ. 2019ರ ನಂತರ ಕನ್ಸಿಸ್ಟೆನ್ಸಿ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ, ಕೆ.ಎಲ್.ರಾಹುಲ್- ಮಯಾಂಕ್ ಅಗರ್ವಾಲ್​​ ಬೆಂಚ್​​ಗೆ ಸೀಮಿತವಾಗಿದ್ದಾರೆ. ಯಾಕಂದರೆ ಇಬ್ಬರು 2019ರ ಬಳಿಕ ವಿದೇಶಿ ಪಿಚ್​​​ಗಳಲ್ಲಿ ನೀಡಿರುವ ಪ್ರದರ್ಶನ ಹಾಗಿದೆ.

ವಿದೇಶದಲ್ಲಿ ಮಯಾಂಕ್​-ರಾಹುಲ್​​ ಪ್ರದರ್ಶನ (2019-21)
ಮಯಾಂಕ್​                     ರಾಹುಲ್​
08           ಪಂದ್ಯ           03
337          ರನ್​​            110
22.46       ಸರಾಸರಿ       22.00
77            ಬೆಸ್ಟ್​​            44

ಟೀಮ್​ ಇಂಡಿಯಾದ ಆಟಗಾರರ ಈ ಕಳಪೆ ಪ್ರದರ್ಶನ, ಇಂಗ್ಲೆಂಡ್​​ ಸರಣಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಂಡದ ಆಧಾರ ಸ್ಥಂಭಗಳೆಂದೇ ಬಿಂಬಿತವಾಗಿರುವ ಕೊಹ್ಲಿ, ಪೂಜಾರ, ರೋಹಿತ್​​, ರಾಹುಲ್​ ಮತ್ತು ಮಯಾಂಕ್​ ಕಳಪೆ ಪ್ರದರ್ಶನ, ತಂಡಕ್ಕೆ ಲಾಭವಾಗುತ್ತಾ ಅನ್ನೋ ಪ್ರಶ್ನೆ ಕೂಡ ಹುಟ್ಟು ಹಾಕಿದೆ.

ಸದ್ಯ ಈ ಆಟಗಾರರು ವಿದೇಶಿ ಪಿಚ್​ಗಳಲ್ಲಿ ಫ್ಲಾಪ್​ ಶೋ ತೋರಿಸುತ್ತಿದ್ದಾರೆ. ಅದಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ತೋರಿದ ಕಳಪೆ ಪ್ರದರ್ಶನ ಮತ್ತು ತೋರಿಸಿದ ಅಂಕಿ-ಅಂಶಗಳೇ ಸಾಕ್ಷಿ. ಒಟ್ನಲ್ಲಿ ಇದೇ ಕಳಪೆ ಫಾರ್ಮ್​​ ಇಂಗ್ಲೆಂಡ್​ ಸರಣಿಯಲ್ಲೂ ಮುಂದುವರೆದ್ರೆ, ತಂಡಕ್ಕೆ ಭಾರೀ ಹಿನ್ನಡೆಯಾಗೋದ್ರಲ್ಲಿ ಅನುಮಾನವೇ ಇಲ್ಲ.

The post ವಿದೇಶದಲ್ಲಿ ಟೀಮ್ ಇಂಡಿಯಾ ಸೂಪರ್​ಸ್ಟಾರ್ ಬ್ಯಾಟ್ಸ್​ಮನ್​​​​ ಫ್ಲಾಪ್ ಆಗ್ತಿರೋದ್ಯಾಕೆ..? appeared first on News First Kannada.

Source: newsfirstlive.com

Source link