ಪವರ್ ಸ್ಟಾರ್ ‘ಜೇಮ್ಸ್​’ ಆ್ಯಕ್ಷನ್ ಸಿಕ್ವೇನ್ಸ್​​​ಗೆ ಮುಹೂರ್ತ ಫಿಕ್ಸ್

ಪವರ್ ಸ್ಟಾರ್ ‘ಜೇಮ್ಸ್​’ ಆ್ಯಕ್ಷನ್ ಸಿಕ್ವೇನ್ಸ್​​​ಗೆ ಮುಹೂರ್ತ ಫಿಕ್ಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಯುವರತ್ನ’ ಸಿನಿಮಾದ ನಂತರ ನಟಿಸುತ್ತಿರುವ ಸಿನಿಮಾ ‘ಜೇಮ್ಸ್​’. ‘ಬಹುದ್ದೂರ್’ ಸಿನಿಮಾ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಸಿನಿಮಾದ ಪೋಸ್ಟರ್, ಮೋಷನ್ ಪೋಸ್ಟರ್, ಸ್ಟಾರ್ ಕಾಸ್ಟ್​​​​ನಿಂದ ಸುದ್ದಿಯಲ್ಲಿರುವ ಸಿನಿಮಾ. 2ನೇ ಲಾಕ್ ಡೌನ್ ಕಾರಣದಿಂದ ಶೂಟಿಂಗ್​​​ಗೆ ಬ್ರೇಕ್ ಹಾಕಿದ್ದ ಚಿತ್ರತಂಡ ಈಗ ಮತ್ತೆ ಶೂಟಿಂಗ್​​ಗೆ ತೆರಳಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.

ಮುಂಬರುವ ಜುಲೈ 5ರಂದು ಜೇಮ್ಸ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾಗಿರುವ ರಾಮ್-ಲಕ್ಷ್ಮಣ್ ಸಾರಥ್ಯದಲ್ಲಿ ಚೇಸಿಂಗ್ ಸೀನ್ ಶೂಟ್ ಆಗಲಿದೆ.

ಮೈ ಜುಮ್ ಅನ್ನಿಸೋ ಬೈಕ್ ರೈಡಿಂಗ್ ದೃಶ್ಯಗಳನ್ನ ಸೆರೆ ಹಿಡಿಯಲು ಜೇಮ್ಸ್ ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ. ಈ ವರ್ಷದ ದೀಪವಾಳಿ ಹಬ್ಬದಂದು ಜೇಮ್ಸ್ ಸಿನಿಮಾವನ್ನ ತೆರೆಗೆ ತರುವ ಉದ್ದೇಶದಲ್ಲಿ ಚಿತ್ರತಂಡವಿದೆ.

The post ಪವರ್ ಸ್ಟಾರ್ ‘ಜೇಮ್ಸ್​’ ಆ್ಯಕ್ಷನ್ ಸಿಕ್ವೇನ್ಸ್​​​ಗೆ ಮುಹೂರ್ತ ಫಿಕ್ಸ್ appeared first on News First Kannada.

Source: newsfirstlive.com

Source link