ಬಿಗ್​​ಬಾಸ್ ರಣಾಂಗಣ; ನನ್ನನ್ನ ಅಣ್ಣ ಅಂತ ಕರೆಯಲೇಬಾರದು ಅಂತ ಚಂದ್ರಚೂಡ್ ವಾರ್ನಿಂಗ್

ಬಿಗ್​​ಬಾಸ್ ರಣಾಂಗಣ; ನನ್ನನ್ನ ಅಣ್ಣ ಅಂತ ಕರೆಯಲೇಬಾರದು ಅಂತ ಚಂದ್ರಚೂಡ್ ವಾರ್ನಿಂಗ್

ಸೆಕೆಂಡ್‌ ಇನ್ನಿಂಗ್ಸ್‌ ಆರಂಭದಲ್ಲಿಯೇ ಜನ್ರು ಏನ್ ಅಂದುಕೊಂಡಿದ್ದರೋ ಅದರ ಗ್ಲಿಂಪ್ಸ್‌ ನಿನ್ನೆಯ ಎಪಿಸೋಡ್‌ನಲ್ಲೇ ಸಿಕ್ಕಿದೆ. ಸೀಸನ್‌ 8ರಲ್ಲಿ ನಡೆಯದಿದ್ದ ದೊಡ್ಡ ಕಾಳಗ ನಿನ್ನೆ ನಡೆದುಬಿಟ್ಟಿದೆ. ಅದು ದೊಡ್ಡ ಮಾತಿನ ಸಮರ. ಸಂಡೇ ವಿತ್‌ ಸುದೀಪ್ ಎಪಿಸೋಡ್‌ನಲ್ಲಿ ಕಿಚ್ಚ ಎಲ್ಲರಿಗೂ ಒಂದ್ ಟಾಸ್ಕ್ ಕೊಡ್ತಾರೆ. ನಿಮ್ಮ ಸಹ ಸ್ಪರ್ಧಿಗಳ ಬಗ್ಗೆ ನಿಮ್ಮ ಮನೆಯವರು ಏನಂದ್ರೂ ಅಂತಾ ಹೇಳಿ ಅಂತಾರೆ. ಅದಕ್ಕೆ ಒಬ್ಬೊಬ್ಬೊರು ಒಂದು ಆನ್ಸರ್ ಮಾಡಿದರು. ಆದ್ರೆ, ಕಿಡಿ ಹೊತ್ತಿಕೊಂಡಿದ್ದು ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್‌ ಅಭಿಪ್ರಾಯದ ನಂತರ.

ಲ್ಯಾಗ್​ ಮಂಜು ಮತ್ತು ದಿವ್ಯಾ ಸುರೇಶ್ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಬರ್ಗಿ ಬಗ್ಗೆ ಬೆಟ್ಟು ಮಾಡಿ ತೋರಿಸಿದ ಬಳಿಕ ಬಿಗ್​ ಬಾಸ್ ಮನೆಯ ವಾತಾವರಣವೇ ಬದಲಾಗಿ ಹೋಯ್ತು..

blank
ಮೊನ್ನೆ ಟಾಸ್ಕ್ ವೇಳೆ ಜಟಾಪಟಿ

ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್‌ ಇವರಿಬ್ಬರ ಮಾತುಗಳನ್ನ ಕೇಳೋವರೆಗೂ ಆರಾಮಾಗಿದ್ದ ಚಂದ್ರಚೂಡ್ ಆ ಮೇಲೆ ಡಿಸ್‌ಕಂಫರ್ಟ್ ಆದರು. ಕಿಚ್ಚ ಏನಾಯ್ತು ಅಂತಾ ಹೇಳಿದಾಗ ಮನಸ್ಸಿನಲ್ಲಿ ಕುದಿಯಿದೆ ಅದನ್ನ ಸಮಯ ಬರಲಿ ಹೊರಹಾಕ್ತೀನಿ ಎಂದರು. ಈಗ್ಲೇ ಮಾತನಾಡಿ ಎಂದರು ಅದಕ್ಕೆ ಚಂದ್ರಚೂಡ್ ಒಪ್ಪಲಿಲ್ಲ. ನಂತರ ಚಂದ್ರಚೂಡ್‌ ನಾರ್ಮಲ್ ಆಗಿ ಇರದ್ದನ್ನ ಗಮನಿಸಿದ ಕಿಚ್ಚ, ಹೇಳ್ಬಿಡಿ. ಇಲ್ಲದಿದ್ರೆ ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತೆ ಎಂದರು. ಅದಕ್ಕೊಪ್ಪಿ ಚಂದ್ರಚೂಡ್‌ ಮನಸ್ಸಿನಲ್ಲಿದ್ದ ಜ್ವಾಲೆಯನ್ನ ಎಲ್ಲರಿಗೂ ತೋರಿಸಿಬಿಟ್ಟರು.

ದಿವ್ಯಾ ಸುರೇಶ್‌ನ ನಾನು ಒಂದು ಸಲ ಮಗಳು ಅಂದ್ಮೇಲೆ ನಾನು ಒಂದು ಬಾರಿಯೂ ಅಪದ್ಧ ಮಾತನಾಡಿಲ್ಲ. ಒಳ್ಳೆ ಹೆಣ್ಮಕ್ಕಳಿಗೆ ಸೆಕ್ಯೂರಿಟಿ ಗಾರ್ಡ್ ಆಗಿರೋಕೇ ನಾನು ಇಷ್ಟಪಡ್ತೀನಿ. ಅವರ ತಂದೆ ತಾಯಿ ನನ್ನ ಜೊತೆ ಸೇರಬೇಡ ಅಂತಾ ಹೇಳಿದ್ಮೇಲೆ ನನ್ನನ್ನ ಅಣ್ಣ ಅಂತಾ ಕರೆಯಬಾರದು ಅಂತ ಕಿಡಿ ಕಾರಿದ್ರು.. ಜೊತೆಗೆ ಲ್ಯಾಗ್​ ಮಂಜುಗೂ ಸಹ ಸಖತ್ ಕ್ಲಾಸ್ ತೆಗೆದುಕೊಂಡ್ರು..!

ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್‌ ಹೇಳಿದ್ದೇನು? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: 

ಇದನ್ನೂ ಓದಿ: ಚಂದ್ರಚೂಡ್, ಪ್ರಶಾಂತ್ ಸಂಬರಗಿ ಸರಿ ಇಲ್ಲ ಅಂತ ನನ್ನ ತಾಯಿ ಹೇಳಿದ್ರು -ಲ್ಯಾಗ್ ಮಂಜು

The post ಬಿಗ್​​ಬಾಸ್ ರಣಾಂಗಣ; ನನ್ನನ್ನ ಅಣ್ಣ ಅಂತ ಕರೆಯಲೇಬಾರದು ಅಂತ ಚಂದ್ರಚೂಡ್ ವಾರ್ನಿಂಗ್ appeared first on News First Kannada.

Source: newsfirstlive.com

Source link