ಕೋವಿಡ್ ಪರಿಸ್ಥಿತಿ: ಹೆಚ್ಚುವರಿ ಆರ್ಥಿಕ ಪರಿಹಾರ ಘೋಷಿಸಿದ ಕೇಂದ್ರ ಹಣಕಾಸು ಸಚಿವಾಲಯ

ಕೋವಿಡ್ ಪರಿಸ್ಥಿತಿ: ಹೆಚ್ಚುವರಿ ಆರ್ಥಿಕ ಪರಿಹಾರ ಘೋಷಿಸಿದ ಕೇಂದ್ರ ಹಣಕಾಸು ಸಚಿವಾಲಯ

ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಇಂದು ಕೆಲವು ನೆರವು ಪರಿಹಾರಗಳನ್ನ ಘೋಷಿಸಿದೆ. ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ ಕೇಂದ್ರ ಹಣಕಾಸು ಸಚಿವಾಲಯ.. ಈ ಹಿಂದೆಯೂ ಕೆಲವು ನೆರವು ಪರಿಹಾರಗಳನ್ನ ಘೋಷಿಸಲಾಗಿತ್ತು.. ಇಂದು ಮತ್ತಷ್ಟು ಆರ್ಥಿಕ ಪರಿಹಾರಗಳನ್ನು ಘೋಷಿಸಲಾಗುತ್ತಿದೆ ಎಂದರು.

8 ಆರ್ಥಿಕ ನೆರವು ಪರಿಹಾರಗಳನ್ನ ಘೋಷಿಸಿದ ಹಣಕಾಸು ಸಚಿವಾಲಯ..

  • 2 ರಿಂದ 3 ನಗರಗಳಿಗೆ ಆರೋಗ್ಯ ಮೂಲ ಸೌಕರ್ಯವನ್ನು ವಿಸ್ತರಣೆ
  • ಕೋವಿಡ್​ನಿಂದ ಸಂಕಷ್ಟಕ್ಕೆ ಸಿಲುಕಿದ ವಲಯಗಳಿಗೆ ಹೆಚ್ಚುವರಿ 1.1ಲಕ್ಷ ಕೋಟಿ ತುರ್ತು ಸಾಲ ಗ್ಯಾರಂಟಿ ಸ್ಕೀಮ್
  • ಆರೋಗ್ಯ ವಲಯಕ್ಕೆ ₹50,000 ಕೋಟಿ
  • ಸಣ್ಣ ಸಾಲಗಾರರಿಗೆ ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಸಾಲ. ಗರಿಷ್ಠ 1.25 ಲಕ್ಷ ರೂ. ಸಾಲ
  • ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ 25 ಲಕ್ಷ ವ್ಯಕ್ತಿಗಳಿಗೆ ಸಾಲ ಖಾತರಿ ಯೋಜನೆ
  • ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಆರ್ಥಿಕ ಪರಿಹಾರ
  • 5,00,000 ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ
  • ಆತ್ಮನಿರ್ಭರ್ ಭಾರತ್ ರೋಜ್​ಗಾರ್​ ಯೋಜನೆ ವಿಸ್ತರಣೆ- 58.50 ಲಕ್ಷ ಅಂದಾಜು ಫಲಾನುಭವಿಗಳು

The post ಕೋವಿಡ್ ಪರಿಸ್ಥಿತಿ: ಹೆಚ್ಚುವರಿ ಆರ್ಥಿಕ ಪರಿಹಾರ ಘೋಷಿಸಿದ ಕೇಂದ್ರ ಹಣಕಾಸು ಸಚಿವಾಲಯ appeared first on News First Kannada.

Source: newsfirstlive.com

Source link