ಡೆಲ್ಟಾ+ ಆಯ್ತು.. ಮತ್ತೆ 4 ಹೊಸ ತಳಿ ಹಾವಳಿ.. ಇದೇನಿದು ಇನ್​ಸ್ಟಾಲ್​ಮೆಂಟ್​ನಲ್ಲಿ ಬರ್ತಿದೆ ಕೊರೊನಾ?

ಡೆಲ್ಟಾ+ ಆಯ್ತು.. ಮತ್ತೆ 4 ಹೊಸ ತಳಿ ಹಾವಳಿ.. ಇದೇನಿದು ಇನ್​ಸ್ಟಾಲ್​ಮೆಂಟ್​ನಲ್ಲಿ ಬರ್ತಿದೆ ಕೊರೊನಾ?

ಕೊರೊನಾ ಮಹಾಮಾರಿ ಬಂದಿದ್ದೇ ಬಂದಿದ್ದು, ತಿಂಗಳಿಗೊಮ್ಮೆ ತನ್ನ ಅವತಾರಗಳನ್ನ ಚೇಂಜ್​ ಮಾಡ್ತಾಯಿದೆ. ಬ್ರಿಟನ್ ತಳಿ, ಆಫ್ರಿಕನ್​ ತಳಿ, ಡೆಲ್ಟಾ, ಡೆಲ್ಟಾ ಪ್ಲಸ್​ ಅಂತ ಇನ್​ಸ್ಟಾಲ್​ಮೆಂಟ್​ನಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ.. ಇಷ್ಟೇ ಅವತಾರಗಳಾದ್ರೂ ಕೂಡ, ತಜ್ಞರು ಇದೀಗ ಮತ್ತೆ ಎಚ್ಚರಿಕೆ ನೀಡಿದ್ದಾರೆ. ಅದೇನಂದ್ರೆ, ಇನ್ನೂ 4 ಹೊಸ ತಳಿಗಳು ಕಾಟ ಕೊಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಡೆಲ್ಟಾ+ ಹೊರತುಪಡಿಸಿ, B.1.617.3, B.1.1.318 ಹಾಗೂ ಲಾಂಬ್ಡಾ, ಕಪ್ಪಾ ತಳಿಗಳು ಕಾಣಿಸಿಕೊಳ್ಳಬಹುದು ಹೀಗಾಗಿ, ಇಂಥ ತಳಿಗಳ ಮೇಲೆ ನಿಗಾ ವಹಿಸಿಲು ಹೇಳಿದ್ದಾರೆ.  ಈಗಾಗ್ಲೇ, ದೇಶದಲ್ಲಿ ಡೆಲ್ಟಾ+ ಪ್ರಕರಣಗಳು ಹೆಚ್ಚುತ್ತಿವೆ. ಇದರ ಜೊತೆ ಈಗ ಹೊಸ ತಳಿಗಳು ಕಾಣೀಸಿಕೊಳ್ಳಬಹುದು, ಅದ್ರಲ್ಲೂ, ಈ  B.1.1.318, 14 ಬಾರಿ ರೂಪಾಂತರಗೊಳ್ಳುವ ಸಾಮರ್ಥ್ಯ ಹೊಂದಿದೆ ಅಂತ ಎಚ್ಚರಿಕೆಯ ಸಂದೇಶವನ್ನ ನೀಡಿದ್ದಾರೆ.

ಈಗಾಗಲೇ B.1.617.3, B.1.1.318 ಭಾರತದಲ್ಲಿ ಕಾಣಿಸಿಕೊಂಡಿವೆ. ದೇಶದಲ್ಲಿ ಲಾಂಬ್ಡಾ ರೂಪಾಂತರಿಯ ಪ್ರಕರಣಗಳು ಇದುವರೆಗೂ ಪತ್ತೆಯಾಗಿಲ್ಲ. ಆದರೆ ಅಂತಾರಾಷ್ಟ್ರೀಯ ವಿಮಾನಯಾನದಿಂದ ಕುತ್ತು ಬರಬಹುದು. ವಿದೇಶಗಳಿಂದ ಬರುವವರಿಂದಲೇ ಲಾಂಬ್ಡಾ ಹರಡುವ ಭೀತಿಯಿದೆ. ಹೆಚ್ಚೆಚ್ಚು ಜೀನೋಮ್​ ಸೀಕ್ವೆನ್ಸಿಂಗ್​​ ನಡೆಸಲು ತಜ್ಞರು ಸಲಹೆ ನೀಡಿದ್ದಾರೆ. ಸದ್ಯ 3 ರೂಪಾಂತರಿಗಳಿಗೆ ದಾರಿ ಮಾಡಿಕೊಟ್ಟಿದೆ B.1.617 (ಕಪ್ಪಾ ತಳಿ)

The post ಡೆಲ್ಟಾ+ ಆಯ್ತು.. ಮತ್ತೆ 4 ಹೊಸ ತಳಿ ಹಾವಳಿ.. ಇದೇನಿದು ಇನ್​ಸ್ಟಾಲ್​ಮೆಂಟ್​ನಲ್ಲಿ ಬರ್ತಿದೆ ಕೊರೊನಾ? appeared first on News First Kannada.

Source: newsfirstlive.com

Source link