ರೇಖಾ ಕದಿರೇಶ್​​​ ಹತ್ಯೆ ಪ್ರಕರಣ; ಜಮೀರ್ ಆಪ್ತನ ವಿರುದ್ಧ ಪೊಲೀಸ್​ ಆಯುಕ್ತರಿಗೆ ದೂರು

ರೇಖಾ ಕದಿರೇಶ್​​​ ಹತ್ಯೆ ಪ್ರಕರಣ; ಜಮೀರ್ ಆಪ್ತನ ವಿರುದ್ಧ ಪೊಲೀಸ್​ ಆಯುಕ್ತರಿಗೆ ದೂರು

ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಇಂದು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಪ್ರಕರಣದಲ್ಲಿ ಆತುಶ್ ಎಂಬಾತನನ್ನು ವಿಚಾರಣೆ ಮಾಡುವಂತೆ ಕೋರಿದ್ದಾರೆ.

ಕಳೆದ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಅತೂಶ್ ಪತ್ನಿ ರೇಖಾ ಕದಿರೇಶ್ ವಿರುದ್ಧ ಸ್ಪರ್ಧೆ ಮಾಡಿದ್ದರು. ಬಿಬಿಎಂಪಿ ಚುನಾವಣೆಯಲ್ಲಿ ಸೋಲಾಗಿದಕ್ಕೆ ಕೊಲೆಗೆ ಪ್ರಚೋದನೆ ನೀಡಿರುವ ಸಾಧ್ಯತೆ ಇದೆ. ಕಳೆದ ಬಾರಿ ಕದಿರೇಶ್ ಹತ್ಯೆ ಕೇಸ್ ನಲ್ಲೂ ಆತುಶ್ ವಿಚಾರಣೆ ಮಾಡಿಲ್ಲ. ಈ ಬಾರಿ ಆತುಶ್ ವಿಚಾರಣೆ ಮಾಡುವಂತೆ ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ.

blank

ಕಮಿಷನರ್​​ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್, ರೇಖಾ ಮತ್ತು ಕದಿರೇಶ್​ ಕೊಲೆಯಲ್ಲಿ ಆತುಶ್ ಕೈವಾಡ ಇರಬಹುದು. ಆತನ ಕೊಲೆಗೆ ಕುಮ್ಮಕ್ಕು ನೀಡಿ ಹಣದ ಸಹಾಯ ಕೂಡ ಮಾಡಿರಬಹುದು. ಈ ಹಿಂದೆ ಕದಿರೇಶ್ ಕೊಲೆ ಪ್ರಕರಣದಲ್ಲೂ ಆತುಶ್ ಕೈವಾಡವಿತ್ತು. ಆದರೆ ಆಗ ಅವರದ್ದೇ ಸರ್ಕಾರವಿದ್ದ ಕಾರಣ ಆತನನ್ನು ವಿಚಾರಣೆಗೆ ಕರೆದಿರಲಿಲ್ಲ. ನೂರಕ್ಕೆ ನೂರು ರೇಖಾ ಕೊಲೆ ಕೇಸ್ ನಲ್ಲಿ ಆತುಶ್ ಭಾಗಿಯಾಗಿದ್ದಾನೆ.

blank

ನಾವು ಕೂಡ ಕೊಲೆ ಪ್ರಕರಣದ ಸಂಬಂಧ ಹಲವು ಮಾಹಿತಿಗಳನ್ನ ಕಲೆಕ್ಟ್ ಮಾಡಿಕೊಂಡಿದ್ದೀವಿ. ಜಮೀರ್ ಅಹ್ಮದ್ ಅವರ ಪ್ರಭಾವಕ್ಕೆ ಒಳಗಾಗದೆ ಆತನನ್ನು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ.

ಕದಿರೇಶ್ ಸೋದರಿ ಮಾಲಾ ಪುತ್ರ ಅರುಳ್ ಈ ಹಿಂದೆ ನಮ್ಮ ಬಳಿ ಬಂದು ಟಿಕೆಟ್​ ಕೇಳಿದ್ದರು. ಈ ಬಾರಿ ತಮಗೆ ಚುನಾವಣೆ ಟಿಕೆಟ್​ ಬೇಕು ಎಂದಿದ್ದರು. ನಾವು ಆಗ ಅವರಿಗೆ ತಿಳಿ ಹೇಳಿದ್ದೇವು. ರೇಖಾ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದರು. ಹೀಗಾಗಿ ಅವರಿಗೆ ಟಿಕೆಟ್ ಕೊಡೊದು ಧರ್ಮ ಎಂದು ಹೇಳಿ ಕಳಿಸಿದ್ದೇವೆ. ರೇಖಾ ಕದಿರೇಶ್ ಪ್ರಕರಣದಲ್ಲಿ ಪೊಲೀಸರು ಅರೆಸ್ಟ್ ಮಾಡಿರೋದೆಲ್ಲವೂ ಸರಿ ಇದೆ. ತನಿಖೆ ಸರಿಯಾಗಿ ನಡೆಯುತ್ತಿದೆ. ಆದರೆ ಪ್ರಕರಣದಲ್ಲಿ ಆತುಶ್ ಕೈವಾಡ ಕೂಡ ಇದೆ. ಹೀಗಾಗಿ ಆತನನ್ನ ಕರೆಸಿ ವಿಚರಣೆ ನಡೆಸಲೇ ಬೇಕು ಒತ್ತಾಯ ಮಾಡಿದರು.

blank

The post ರೇಖಾ ಕದಿರೇಶ್​​​ ಹತ್ಯೆ ಪ್ರಕರಣ; ಜಮೀರ್ ಆಪ್ತನ ವಿರುದ್ಧ ಪೊಲೀಸ್​ ಆಯುಕ್ತರಿಗೆ ದೂರು appeared first on News First Kannada.

Source: newsfirstlive.com

Source link