ಖಾಸಗಿ ಆಸ್ಪತ್ರೆಗಳ ವಸೂಲಿಗೆ ಬ್ರೇಕ್: ಬ್ಲಾಕ್ ಫಂಗಸ್​ ಸ್ಕ್ಯಾನಿಂಗ್​ ರೇಟ್ ಫಿಕ್ಸ್

ಖಾಸಗಿ ಆಸ್ಪತ್ರೆಗಳ ವಸೂಲಿಗೆ ಬ್ರೇಕ್: ಬ್ಲಾಕ್ ಫಂಗಸ್​ ಸ್ಕ್ಯಾನಿಂಗ್​ ರೇಟ್ ಫಿಕ್ಸ್

ಬೆಂಗಳೂರು: ಬ್ಲಾಕ್ ಫಂಗಸ್ ಸ್ಯ್ಯಾನಿಂಗ್ ಹೆಸರಲ್ಲಿ ಸುಲಿಗೆಗಿಳಿದಿದ್ದ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬ್ರೇಕ್ ಹಾಕಿದ್ದು.. ಕೊರೊನಾ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪರೀಕ್ಷೆಗೆ ರೇಟ್ ಫಿಕ್ಸ್ ಮಾಡಿದೆ. ರಾಜ್ಯ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಸಿ ಟಿ ಸ್ಕ್ಯಾನ್ & ಎಮ್​ಆರ್​ಐ ಸ್ಕ್ಯಾನ್‌ಗೆ ರೇಟ್ ಫಿಕ್ಸ್ ಮಾಡಲಾಗಿದ್ದು ಎಲ್ಲಾ ಖಾಸಗಿ ಆಸ್ಪತ್ರೆಗಳು & ಲ್ಯಾಬ್‌ಗಳು ಇದೇ ದರದಲ್ಲಿ ಟೆಸ್ಟ್ ‌ಮಾಡಬೇಕು ಎಂದು ಹೇಳಿದೆ. ಬಿಪಿಎಲ್​ ಹಾಗೂ ಎಪಿಎಲ್​ ಕಾರ್ಡ್ ಹೊಂದಿರುವವರಿಗೆ ಪ್ರತ್ಯೇಕ ರೇಟ್ ಫಿಕ್ಸ್ ಮಾಡಲಾಗಿದೆ.

ಬಿಪಿಎಲ್​ ಕಾರ್ಡ್ ಫಲಾನುಭವಿಗಳಿಗೆ ಎಷ್ಟು..?
ಬ್ರೈನ್ ​MRI – ₹3,000
ಪ್ಯಾರನೇಸಲ್ ಸೈನಸ್ MRI – ₹3,000
ಕಣ್ಣಿನ MRI – ₹3,000
3 ಒಟ್ಟಿಗೆ ಸೇರಿ MRI – ₹7,500

ಎಪಿಎಲ್​​ ಕಾರ್ಡ್ ಫಲಾನುಭವಿಗಳಿಗೆ ಎಷ್ಟು..?
ಬ್ರೈನ್ ​MRI – ₹4,000
ಪ್ಯಾರನೇಸಲ್ ಸೈನಸ್ MRI – ₹4000
ಕಣ್ಣಿನ MRI – ₹4,000
3 ಒಟ್ಟಿಗೆ ಸೇರಿ MRI – ₹10,000

ಈ ಮೊದಲು ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್​ಗಳು ಸ್ಕ್ಯಾನಿಂಗ್​ಗಾಗಿ ₹25,000 -₹28,000 ಪಡೆಯುತ್ತಿದ್ದವು. ಇದರಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರಿಗೆ ತೊಂದರೆಯಾಗುತ್ತಿತ್ತು. ಇನ್ನು ಈಗಾಗಲೇ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಸರ್ಕಾರ ನಡೆಸುವ ಲ್ಯಾಬ್ & ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತ ರೋಗ ಪತ್ತೆ ಹಾಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

The post ಖಾಸಗಿ ಆಸ್ಪತ್ರೆಗಳ ವಸೂಲಿಗೆ ಬ್ರೇಕ್: ಬ್ಲಾಕ್ ಫಂಗಸ್​ ಸ್ಕ್ಯಾನಿಂಗ್​ ರೇಟ್ ಫಿಕ್ಸ್ appeared first on News First Kannada.

Source: newsfirstlive.com

Source link