‘ತಾಕತ್ತಿದ್ರೆ 2023 ರ ಚುನಾವಣೆಯಲ್ಲಿ ನೀನೇ ನಿಲ್ಲು’ ಅಂತ ಕಾಶಪ್ಪನವರ್ ಸವಾಲ್ ಹಾಕಿದ್ದು ಯಾರಿಗೆ..?

‘ತಾಕತ್ತಿದ್ರೆ 2023 ರ ಚುನಾವಣೆಯಲ್ಲಿ ನೀನೇ ನಿಲ್ಲು’ ಅಂತ ಕಾಶಪ್ಪನವರ್ ಸವಾಲ್ ಹಾಕಿದ್ದು ಯಾರಿಗೆ..?

ಬಾಗಲಕೋಟೆ: ತಾಕತ್ತಿದ್ರೆ 2023 ರ ಚುನಾವಣೆಯಲ್ಲಿ ನೀನೇ ನಿಲ್ಲು.. ಆಗ ನನ್ನ ತಾಕತ್ತು ಏನು ಅಂತ ತೋರಿಸ್ತೀನಿ ಎಂದು ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್​ಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲ್ ಹಾಕಿದ್ದಾರೆ. ಇಳಕಲ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹಾಲಿ ಶಾಸಕನ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ದೊಡ್ಡನಗೌಡ ಪಾಟೀಲ್ ಹಾಗೂ ಅವರ ಪುತ್ರ ರಾಜುಗೌಡ ಪಾಟೀಲ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.

2023 ರಲ್ಲಿ ನನ್ನ ವಿರುದ್ಧ ನೀನೇ ನಿಲ್ಲಬೇಕು.. ಅವರಿವರನ್ನು ನಿಲ್ಲಿಸುತ್ತೇನೆ ಅಂತ ಹೇಳ್ತೀರಿ ಯಾಕೆ.. ಕ್ಷೇತ್ರದಲ್ಲಿ ಅಪ್ಪ ಮಗ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನಿಮ್ಮ ಮಗನ ಕೈಯಲ್ಲಿ ಒಬ್ಬ ಅಧಿಕಾರಿ ಉಳಿದಿಲ್ಲ. ಕ್ಷೇತ್ರದಲ್ಲಿ ಒಂದು ಮರಳು ಪಾಯಿಂಟ್ ಉಳಿದಿಲ್ಲ.. ಕ್ಷೇತ್ರದಲ್ಲಿ ಗುಂಡಾಗಿರಿ ನಡೆದಿದೆ. ನಾನು ಮಾಜಿ ಶಾಸಕ.. ನನ್ನ ಮೇಲೆಯೇ ಹಲ್ಲೆ ಆಗ್ತದೆ. ಶಾಸಕ ಹಾಗೂ ಅವರ ಪುತ್ರನ ಕುಮ್ಮಕ್ಕಿನಿಂದ ನನ್ನ ಮನೆಗೆ ಬಂದು ಹಲ್ಲೆ ಮಾಡ್ತೇವಿ ಅಂತಾರೆ. ಊರಲ್ಲಿ ಹಫ್ತಾ ವಸೂಲಿ ನಡೆದಿದೆ. ಬಡವರಿಗೆ ಹತ್ತರ ಬಡ್ಡಿಯಲ್ಲಿ ದುಡ್ಡು ಕೊಡುವ ದಂಧೆ ಇಲ್ಲಿ ನಡೆಯುತ್ತದೆ. ಈ ಬಡ್ಡಿ ವ್ಯವಹಾರ ನಡೆಯಲು ಬಿಟ್ಟವರು ಯಾರು…? ಇದೇ ಶಾಸಕ ದೊಡ್ಡನಗೌಡ.

ಎರಡು ದಿನಗಳ ಹಿಂದಷ್ಟೇ, ಮನೆಗೆ ವಾರೆಂಟ್ ಕೊಡಲು ಬಂದಿದ್ದ ಪೊಲೀಸ್ ಅಧಿಕಾರಿಗಳೇ ಆವಾಜ್ ಹಾಕಿದ್ದ ಕಾಶಪ್ಪನವರ ಇಂದು ಶಾಸಕ ದೊಡ್ಡನಗೌಡ ಪಾಟೀಲ್ ವಿರುದ್ಧ ಕಿಡಿಕಿಡಿಯಾಗಿದ್ದಾರೆ.

The post ‘ತಾಕತ್ತಿದ್ರೆ 2023 ರ ಚುನಾವಣೆಯಲ್ಲಿ ನೀನೇ ನಿಲ್ಲು’ ಅಂತ ಕಾಶಪ್ಪನವರ್ ಸವಾಲ್ ಹಾಕಿದ್ದು ಯಾರಿಗೆ..? appeared first on News First Kannada.

Source: newsfirstlive.com

Source link