ಒಂದೇ ದಿನ 8 ಅಂಗಡಿಗಳ ಕಳ್ಳತನ: ಮೆಡಿಕಲ್​ ಶಾಪ್​ಗಳೇ ಇವ್ರಿಗೆ ಟಾರ್ಗೆಟ್​

ಒಂದೇ ದಿನ 8 ಅಂಗಡಿಗಳ ಕಳ್ಳತನ: ಮೆಡಿಕಲ್​ ಶಾಪ್​ಗಳೇ ಇವ್ರಿಗೆ ಟಾರ್ಗೆಟ್​

ಹಾವೇರಿ: ಒಂದೇ ದಿನ ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿದ್ದಾರೆ ಕಳ್ಳರು. ಮೆಡಿಕಲ್ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಹಣ ದೋಚಲು ಯತ್ನ ಮಾಡುತ್ತಿದ್ದ ಕಳ್ಳರ ಆಟಗಳು, ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಿಲ್ಲೆಯ ಹಾನಗಲ್ ಪಟ್ಟಣ ಹಾಗೂ ಅಕ್ಕಿಆಲೂರು ಗ್ರಾಮದಲ್ಲಿ ಈ ಸರಣಿ ಕಳ್ಳತನ ನಡೆದಿದೆ. ಎಂಟು ಅಂಗಡಿಗಳ ಪೈಕಿ ಎರಡು ಕಡೆ 1 ಸಾವಿರ ಹಾಗೂ 5 ಸಾವಿರ ಕದ್ದು ಎಸ್ಕೇಪ್​ ಆಗಿದ್ದಾರೆ ಖದೀಮರು. ಮಾಹಿತಿ ಸಿಕ್ಕ ಕೂಡಲೇ ಶ್ವಾನ ಹಾಗೂ ಬೆರಳಚ್ಚು ತಜ್ಞರಿಂದ ತಪಾಸಣೆ ನಡೆಸಲಾಗ್ತಾಯಿದ್ದು, ಮೂರರಿಂದ ನಾಲ್ಕು ಜನರು ಇದರಲ್ಲಿ ಭಾಗಿಯಾಗಿ‌ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗಿನ ಜಾವ 4 ಗಂಟೆಗೆ ಕಳ್ಳತನದ ಕೃತ್ಯ ಮಾಡಿ ಪರಾರಿಯಾಗಿದ್ದಾರೆ. ಸದ್ಯ, ಹಾನಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಹಾಗೂ ಪಿಎಸೈ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

The post ಒಂದೇ ದಿನ 8 ಅಂಗಡಿಗಳ ಕಳ್ಳತನ: ಮೆಡಿಕಲ್​ ಶಾಪ್​ಗಳೇ ಇವ್ರಿಗೆ ಟಾರ್ಗೆಟ್​ appeared first on News First Kannada.

Source: newsfirstlive.com

Source link