ಕೊರೊನಾ ಸೋಂಕಿನಿಂದ ಮೃತರಾದವರಿಗೆ ಮೇಣದ ಬತ್ತಿ ಬೆಳಗಿ ನಮನ

ನೆಲಮಂಗಲ: ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಮೃತಪಟ್ಟವರಿಗೆ ಇಮದು ಮೇಣದ ಬತ್ತಿ ಬೆಳಗಿ ನಮನ ಸಲ್ಲಿಸಲಾಯಿತು.

ಎರಡನೇ ಅಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಸಾಕಷ್ಟು ಯುವಕರು, ವಯಸ್ಕರು ಹಾಗೂ ಮಹಿಳೆಯರು ವೃದ್ಧರು ಸೇರಿದಂತೆ 280 ಜನ ಬಲಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಕೊರೋನಾ ಮುಕ್ತ ನೆಲಮಂಗಲ ಟೀಮ್ ಹಾಗೂ ಜನರ ತಂಡ ಸಂಜೆ ಮೃತರ ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿ, ಮೇಣದ ಬತ್ತಿ ಹಚ್ಚಿ ಬೆಳಗುವ ಮೂಲಕ ನಮನವನ್ನ ಸಲ್ಲಿಸಿದ್ದಾರೆ.

ನೆಲಮಂಗಲ ತಾಲೂಕು ಕಚೇರಿ ಮುಂದೆ ಬಸವನಹಳ್ಳಿ ಮಠದ ಶಿವಾನಂದ ಸ್ವಾಮೀಜಿ, ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ತಂಡದ ಸದಸ್ಯ ಪ್ರದೀಪ್, ಜಗದೀಶ್ ಚೌದರಿ, ಕನಕರಾಜು, ಉಮೇಶ್, ಲೋಕೇಶ್, ಬಾಬು, ದೀಪಕ್, ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯನ್ನೇ ಕೊಲೆ ಮಾಡಿಸಿದ ಸೊಸೆ

The post ಕೊರೊನಾ ಸೋಂಕಿನಿಂದ ಮೃತರಾದವರಿಗೆ ಮೇಣದ ಬತ್ತಿ ಬೆಳಗಿ ನಮನ appeared first on Public TV.

Source: publictv.in

Source link