ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು

ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು

ದಾವಣಗೆರೆ: ಕೊರೊನಾ ಸಮಯದಲ್ಲಿ ಜಿಲ್ಲೆಯಲ್ಲಿ ಶಾಸಕ ರೇಣುಕಾಚಾರ್ಯ ಮಾಡಿರೋ ಕೆಲಸಗಳು, ಸಹಾಯಗಳ ಲೆಕ್ಕ ಅಷ್ಟಿಷ್ಟಲ್ಲ. ತಾವೇ ಸ್ವತಃ ಹೋಗಿ ಕೊರೊನಾ ಸೋಂಕಿತರಿಗೆ ಸೇವೆ ಮಾಡಿದ್ರು. ಇದರ ಫಲಶೃತಿಯಾಗಿ ಕೋವಿಡ್ ಗುಣಮುಖರಾದವ್ರು ಶಾಸಕ ರೇಣುಕಾಚಾರ್ಯರ ಕಾಲಿಗೆ ಹೂ ಸುರಿದು ಧನ್ಯವಾದ ಹೇಳಿದ್ದಾರೆ.

ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೋವಿಡ್​ ಗುಣಮುಖರು ಈ ರೀತಿ ಮಾಡಿದ್ದಾರೆ. ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್​ನಲ್ಲಿ 27 ಜನ ಕೊರೊನಾದಿಂದ ಗುಣಮುಖರಾಗಿದ್ರು, ಈ ವೇಳೆ ಎಲ್ಲರ ಮೇಲೂ ಹೂ ಎರಚುವ ಮೂಲಕ ಶಾಸಕ ರೇಣುಕಾಚಾರ್ಯ ಬೀಳ್ಕೊಡುತ್ತಿದ್ದರು. ಈ ವೇಳೆ ಕೋವಿಡ್ ಗುಣಮುಖರು ಶಾಸಕರ ಪಾದಕ್ಕೆ ಹೂ ಸುರಿದು ನಮಸ್ಕಾರ ಮಾಡಿದ್ದಾರೆ. ಅಲ್ಲದೇ ಕೋವಿಡ್ ಕೇರ್ ಬಿಟ್ಟು ಹೋಗುವಾಗ ಗುಣಮುಖರು ಭಾವುಕರಾಗಿದ್ದರು.

The post ರೇಣುಕಾಚಾರ್ಯ ಸೇವೆಗೆ ಭಾವುಕರಾದ ಜನ: ಕಾಲಿಗೆ ಹೂ ಸುರಿದು ನಮಸ್ಕರಿಸಿದ್ರು appeared first on News First Kannada.

Source: newsfirstlive.com

Source link