ಈಗ ಬರ್ತೀನಂತ ಹೋದ ಮಗ ಸಿಕ್ಕಿದ್ದು ಶವವಾಗಿ: ನಟ್ಟ ನಡುರಾತ್ರಿ ನಡೆದಿದ್ದಾದ್ರೂ ಏನು..?

ಈಗ ಬರ್ತೀನಂತ ಹೋದ ಮಗ ಸಿಕ್ಕಿದ್ದು ಶವವಾಗಿ: ನಟ್ಟ ನಡುರಾತ್ರಿ ನಡೆದಿದ್ದಾದ್ರೂ ಏನು..?

ಕಲಬುರಗಿ: ಆತ ಹೋಟೆಲ್‌ಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಆದ್ರೆ ಕಳೆದ ರಾತ್ರಿ ಬಂದ ಆ ಒಂದು ಫೋನ್ ಕರೆಯಿಂದ ಆತ ಮನೆಯಿಂದ ಹೊರಹೋದವನು ಮರಳಿ ವಾಪಾಸ್ ಬರಲೇ ಇಲ್ಲ. ಅಷ್ಟಕ್ಕೂ ಅಲ್ಲಿ ನಡೆದ ಘಟನೆಯನ್ನ ನೋಡಿದ್ರೆ ನೀವು ಒಂದು ಕ್ಷಣ ಬೆಚ್ಚಿಬೀಳುವಂತಿದೆ.

ಆ ‌ಯುವಕನ ಹೆಸರು ಸಂತೋಷ ಪೂಜಾರಿ. ವಯಸ್ಸು (29). ಕಲಬುರಗಿ ನಗರದ ರಾಮನಗರ ನಿವಾಸಿಯಾದ ಸಂತೋಷ ಪೂಜಾರಿ, ಕಡು ಬಡತನ ಕಾರಣ ಕುಟುಂಬ ನಿರ್ವಹಣೆಗಾಗಿ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ ನಿನ್ನೆ ಬೆಳಗ್ಗೆ ಸುಮಾರು 11 ಗಂಟೆಗೆ ಸ್ನೇಹಿತರು ಸಂತೋಷ್‌ಗೆ ಕರೆ ಮಾಡಿ ಕಲಬುರಗಿ ತಾಲ್ಲೂಕಿನ ಅವರಾದ್ ಬಳಿ ಕರೆಸಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದ ನಂತ್ರ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರು ಮತ್ತು ಸಂತೋಷ ಮಧ್ಯೆ ಗಲಾಟೆಯಾಗಿದೆ ಎನ್ನಲಾಗಿದೆ.‌ ಸಂತೋಷ್ ಬರ್ಬರವಾಗಿ ಕೊಲೆಯಾಗಿದ್ದು ಸ್ನೇಹಿತರು ಸಂತೋಷ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಗೈದು ಎಸ್ಕೇಪ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಹತ್ಯೆಯಾದ ಸಂತೋಷ್ ಒಬ್ಬನೇ ಮಗ. ಬೆಳೆದು ನಿಂತಿರುವ ಮಗನಿಗೆ ಮದುವೆ ಮಾಡಿ ಸಣ್ಣ ವ್ಯಾಪಾರ ಮಾಡಿಕೊಡುವ ಆಲೋಚನೆಯಲ್ಲಿದ್ದ ಪೋಷಕರು ಇದೀಗ ಇರೋ ಓರ್ವ ಮಗನನ್ನ ಕಳೆದುಕೊಂಡು ದಿಗ್ಭ್ರಾಂತರಾಗಿದ್ದಾರೆ. ಸ್ನೇಹಿತರ ಬಳಿ ಅಲ್ಪ ಹಣ ಸಾಲ ಪಡೆದಿದ್ದ ಸಂತೋಷ್, ಸಾಲ ತೀರಿಸಲಾಗದೇ ಪರದಾಡ್ತಿದ್ದ. ಇದೆ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಜಗಳವಾಗ್ತಿತ್ತು ಎನ್ನಲಾಗಿದೆ. ಈ ಹಿಂದೆ ಸಂತೋಷ್ ಸಾಲ ಮಾಡಿದಾಗ ಆತನ ತಾಯಿ ಸಾಲ ತೀರಿಸಿದ್ದರು. ಆದರೆ ಅದಾದ ನಂತರ ಮತ್ತೆ ಸಾಲ ಮಾಡಿದ್ದ ಸಂತೋಷ್, ಸಾಲ ವಾಪಾಸ್ ಕೊಡುವಂತೆ ಸ್ನೇಹಿತರು ಪೀಡಿಸುತ್ತಿದ್ದರಂತೆ. ಸಾಲದ ವಿಚಾರಕ್ಕೆ ಸಂತೋಷ ಕೊಲೆಯಾಗಿದೆ ಎನ್ನಲಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಡಿಸಿಪಿ ಅಡೂರು ಶ್ರೀನಿವಾಸುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಸಂತೋಷ ಸ್ನೇಹಿತರಾದ‌ ಶಿವು ಮತ್ತು ಅರುಣನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

The post ಈಗ ಬರ್ತೀನಂತ ಹೋದ ಮಗ ಸಿಕ್ಕಿದ್ದು ಶವವಾಗಿ: ನಟ್ಟ ನಡುರಾತ್ರಿ ನಡೆದಿದ್ದಾದ್ರೂ ಏನು..? appeared first on News First Kannada.

Source: newsfirstlive.com

Source link