ಕೊಪ್ಪಳದಲ್ಲಿ 3,000 ವರ್ಷಗಳ ಹಿಂದಿನ ಗವಿಚಿತ್ರ, ಶಾಸನಗಳು ಪತ್ತೆ

ಕೊಪ್ಪಳದಲ್ಲಿ 3,000 ವರ್ಷಗಳ ಹಿಂದಿನ ಗವಿಚಿತ್ರ, ಶಾಸನಗಳು ಪತ್ತೆ

ಕೊಪ್ಪಳ: ತಾಲೂಕಿನ ಗುನ್ನಳ್ಳಿ ಗ್ರಾಮದ ಚಿಲಕನಮಟ್ಟಿ ಬೆಟ್ಟದಲ್ಲಿ ಶಿಲಾಯುಗ ಕಾಲದ ಗವಿಚಿತ್ರಗಳು ಮತ್ತು ಚಾರಿತ್ರಿಕ ಕಾಲದ ಶಾಸನಗಳು ಪತ್ತೆಯಾಗಿವೆ. ಇವುಗಳನ್ನು ಜಿಲ್ಲೆಯ ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನೆ ಮಾಡಿದ್ದಾರೆ.

blank

ನಗರದಿಂದ ನೈರುತ್ಯಕ್ಕೆ ಸುಮಾರು 10 ಕಿ.ಮಿ.‌ದೂರದಲ್ಲಿ ಗುನ್ನಳ್ಳಿ ಗ್ರಾಮದ ಚಿಲಕಮಟ್ಟಿ ಹೆಸರಿನ ಬೆಟ್ಟದ ಉತ್ತಮದರ್ಜೆಯ ಕಪ್ಪು ಚುಕ್ಕೆ ಮಿಶ್ರಿತ ಬಿಳಿ ಗ್ರಾನೈಟ್ , ಕಪ್ಪು ಚುಕ್ಕೆ ಮಿಶ್ರಿತ ಪಿಂಕ್ ಗ್ರಾನೈಟ್ ಮತ್ತು ಗಷ್ಟು ಶಿಲೆಯಿಂದ ರಚನೆಯಾದ ಬೆಟ್ಟವಿದು. ಸುಮಾರು 400 ಮೀಟರ್ ಎತ್ತರದ ಈ ಬೆಟ್ಟದಲ್ಲಿ ಅಪರೂಪದ ಶಿಲೆಗಳಿವೆ ಜೊತೆಗೆ ಸಸ್ಯಕಾಶಿಗಳು ಇದೆ. ಬೆಟ್ಟದ ಮೇಲ್ಭಾಗದ ಎರಡು ಕಲ್ಲಾಸರೆಗಳಲ್ಲಿ  ಪ್ರಾಕ್ಚಾರಿತ್ರಿಕ ಕಾಲದ ವರ್ಣಚಿತ್ರಗಳು, ಬಿಡಿಬರಹಗಳು ದೊರೆತಿವೆ. ಅವುಗಳಿಗೆ ಡಾ.ಕೋಲ್ಕಾರರವರು ಜಿಸಿಪಿಆರ್ ಎಸ್ 1 ಮತ್ತು ಜಿಸಿಪಿಆರ್ ಎಸ್ 2 ಅಂತಾ ಹೆಸರಿಸಿದ್ದಾರೆ.

blank

ಮೊದಲ ಕಲ್ಲಾಸರೆಯು ಬೆಟ್ಟದಲ್ಲಿ  ಸುಮಾರು 300 ಮೀಟರ್ ಎತ್ತರದ ಭಾಗದಲ್ಲಿದ್ದು, ದಕ್ಷಿಣಾಭಿಮುಖಿಯಾಗಿದೆ. 5 ಫೀಟ್ ಅಗಲ 7ಫೀಟ್ ಉದ್ದದ ಒಳ ವಿಸ್ತಾರವನ್ನು ಹೊಂದಿದೆ. ದ್ವಿಬದಿ ಇಳಿಜಾರು ಛಾವಣಿಯಿದ್ದು ಅದರ ವಿನ್ಯಾಸಕ್ಕನುಗುಣವಾಗಿ ಛಾವಣಿಯ ಎರಡು ಕಡೆ ಅಲಂಕಾರಿಕ ತೋರಣದ ಕೆಂಪುವರ್ಣದ ಚಿತ್ರ ಗಮನಸೆಳೆಯುತ್ತದೆ. ಪರಸ್ಪರ ಕೈ ಕೈ ಹಿಡಿದುಕೊಂಡು ನರ್ತಿಸುತ್ತಿರುವ ಆದಿ ಮಾನವರ ಚಿತ್ರಗಳನ್ನು ಹೋಲುವ ಇದು ಆ ದೃಷ್ಟಿಯಿಂದ ವಿಶೇಷ ರಚನೆ ಎನಿಸುತ್ತದೆ. ಅದೀಮ ಕಲಾಕಾರನ ಕಲಾಕೌಶಲ್ಯಕ್ಕೆ ಇದು ಸಾಕ್ಷಿ ಎನ್ನಲಾಗುತ್ತಿದೆ.

blank

ಅವುಗಳಲ್ಲಿ ಪರಸ್ಪರ ಎದರುಬದುರಾಗಿ ನಿಂತ ಎತ್ತುಗಳು, ಅಲಂಕೃತವಾದ ಎತ್ತು, ಬಲಿಷ್ಠ ಗೂಳಿ, ಕವಲುಕೋಡಿನ ಗಂಡು ಜಿಂಕೆ, ಸಮವಿನ್ಯಾಸ ವೃತ್ತಗಳು, ರಂಗೋಲಿ ಚಿತ್ರಗಳಿವೆ.ಈ ಚಿತ್ರ ಗಳ ಶೈಲಿ ಮತ್ತು ಕಲ್ಲಾಸರೆಯಲ್ಲಿ ದೊರೆತ ಮಡಕೆ ಚೂರುಗಳ ಆದಾರದ ಮೇಲೆ ಇವು ಇಂದಿಗೆ 3,000ವರ್ಷಗಳ ಹಿಂದಿನವು ಅಂತಾ ಗುರುತಿಸಬಹುದು. ಅಂದ್ರೆ, ಪ್ರ.ಶ.ಪೂ(ಕ್ರಿಸ್ತ ಶತಕ )1200 ರಿಂದ ಪ್ರ.ಶ.ಪೂ.‌200ರ ವರೆಗೆ ಈ ಬೆಟ್ಟ ಪರಿಸರದಲ್ಲಿ ವಾಸವಾಗಿದ್ದ ಕಬ್ಬಿಣಯುಗ- ಬೃಹತ್ ಶಿಲಾಯುಗದ ಪಶುಪಾಲಕ ಸಮುದಾಯದವರು ಈ ಚಿತ್ರಗಳ ರಚನೆಕಾರರು ಎಂದು ಅಂದಾಜಿಸಲಾಗಿದೆ. ತಮ್ಮ ಬದುಕಿನ ‌ಅನುಭವಗಳನ್ನು ಚಿತ್ರ ಸಂಕೇತಗಳ ಮೂಲಕ ಅಭಿವ್ಯಕ್ತಿಸುತ್ತಿದ್ದರು ಎನ್ನಲಾಗಿದೆ.

The post ಕೊಪ್ಪಳದಲ್ಲಿ 3,000 ವರ್ಷಗಳ ಹಿಂದಿನ ಗವಿಚಿತ್ರ, ಶಾಸನಗಳು ಪತ್ತೆ appeared first on News First Kannada.

Source: newsfirstlive.com

Source link