ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕ ಚೋಪ್ರಾ

ವಾಷಿಂಗ್ಟನ್: ಬಾಲಿವುಡ್‍ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by SONA (@sonanewyork)

ಈ ಹೋಟೆಲ್‍ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ, ನನ್ನ ಕನಸು ಕೂಡ. ನಾನು ಸೋನಾದಲ್ಲಿದ್ದೇನೆ ಎಂಬುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. 3 ವರ್ಷದ ಪ್ಲ್ಯಾನಿಂಗ್‍ನಿಂದ ಈ ರೆಸ್ಟೋರೆಂಟ್ ಸಿದ್ಧಗೊಂಡಿದೆ. ಕಿಚನ್‍ಗೆ ತೆರಳಿ ತಂಡವನ್ನು ಮೀಟ್ ಮಾಡೋಕೆ ನಾನು ಉತ್ಸುಕಳಾಗಿದ್ದೇನೆ. ಸೋನಾ ಒಂದು ಅದ್ಭುತ ಅನುಭವ. ನನಗಾಗಿ ವಿಶೇಷ ಡೈನಿಂಗ್ ಹಾಲ್ ಮಾಡಿಕೊಂಡಿದ್ದೇನೆ. ಇಲ್ಲಿ ಅದ್ಭುತ ಆಹಾರ ಸಿಗಲಿದೆ ಸೋನಾದ ಅನುಭವ ಭಿನ್ನವಾಗಿರಲಿದೆ ಎಂದು ಬರೆದುಕೊಂಡು ಹೋಟೆಲ್ ಎದುರು ನಿಂತು ಫೋಟೋವನ್ನು ಕ್ಲಿಕ್ಕಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕದ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್‍ಗಿಂತಲೂ ಹೆಚ್ಚಾಗಿ ಹಾಲಿವುಡ್ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ. ಹಾಗೆಯೇ ಅಮೆರಿಕದ ಜನರ ಜೊತೆಗೆ ಅವರು ಬೆರೆತುಹೋಗಿದ್ದಾರೆ. ಈಗ ಅವರು ಹೋಟೆಲ್ ಕೂಡ ಆರಂಭಿಸಿದ್ದಾರೆ. ನಟ ಸೋನು ಸೂದ್ ಸೇರಿ ಸಾಕಷ್ಟು ಸ್ಟಾರ್‍ಗಳು ಹೋಟೆಲ್ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ.

The post ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ ಪ್ರಿಯಾಂಕ ಚೋಪ್ರಾ appeared first on Public TV.

Source: publictv.in

Source link