ದಿನ ಭವಿಷ್ಯ 29-06-2021

ರಾಹುಕಾಲ : 3:38 ರಿಂದ 5:14
ಗುಳಿಕಕಾಲ : 12:26 ರಿಂದ 2:02
ಯಮಗಂಡಕಾಲ : 9:14 ರಿಂದ 10:50

ಮಂಗಳವಾರ, ಪಂಚಮಿ, ಶತಭಿಷ ನಕ್ಷತ್ರ
ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ,

ಮೇಷ: ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಅವಿವಾಹಿತರಿಗೆ ವಿವಾಹಯೋಗ, ಕಚೇರಿಯಲ್ಲಿ ಒತ್ತಡ ಜಾಸ್ತಿ.

ವೃಷಭ: ಬಂಧುಗಳ ಆಗಮನ, ಇಷ್ಟಾರ್ಥ ಸಿದ್ಧಿ, ಮಹಿಳೆಯರಿಗೆ ತೊಂದರೆ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.

ಮಿಥುನ: ನ್ಯಾಯಾಲಯದ ತೀರ್ಪಿಗಾಗಿ ಅಧಿಕ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಕಟಕ: ವ್ಯಾಪಾರದಲ್ಲಿ ಲಾಭಕ್ಕಿಂತ ನಷ್ಟಗಳು ಜಾಸ್ತಿ, ದಾಂಪತ್ಯದಲ್ಲಿ ಪ್ರೀತಿ, ಸಾಲ ಮಾಡುವ ಸಾಧ್ಯತೆ.

ಸಿಂಹ: ಕುಟುಂಬ ಸೌಖ್ಯ, ದಾನ ಧರ್ಮದಲ್ಲಿ ಆಸಕ್ತಿ, ವಾಹನದಿಂದ ತೊಂದರೆ, ವ್ಯಾಪಾರದಲ್ಲಿ ಮಂದಗತಿ.

ಕನ್ಯಾ: ಋಣ ವಿಮೋಚನೆ, ಆರೋಗ್ಯ ಭಾಗ್ಯ ಪ್ರಾಪ್ತಿ, ಕೃಷಿಯಲ್ಲಿ ಅಧಿಕ ಲಾಭ, ಮಾನಸಿಕ ಕಿರಿಕಿರಿ, ಮಿಶ್ರಫಲ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ಧನವ್ಯಯ, ಶತ್ರುಭಯ, ಆಕಸ್ಮಿಕ ಖರ್ಚು, ಎಲ್ಲಿ ಹೋದರು ಅಶಾಂತಿ ಪಾಪಬುದ್ಧಿ.

ವೃಶ್ಚಿಕ: ವಾಹನ ರಿಪೇರಿಯಿಂದ ಖರ್ಚು, ಇಲ್ಲಸಲ್ಲದ ತಕರಾರು, ದ್ರವ್ಯ ನಷ್ಟ, ಅತಿಯಾದ ಕೋಪ, ದುಃಖ ಪ್ರಸಂಗಗಳು.

ಧನಸ್ಸು: ಸೇವಕರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಸುಖ ಭೋಜನ, ಮನಶಾಂತಿ, ಸಾಲಭಾದೆ.

ಮಕರ: ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

ಕುಂಭ: ಅನಾರೋಗ್ಯ, ಹೊಸ ವ್ಯವಹಾರದಿಂದ ಲಾಭ, ಊರೂರು ಸುತ್ತಾಟ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ.

ಮೀನ: ಪ್ರಿಯ ಜನರ ಭೇಟಿ, ಸ್ತ್ರೀಯಿಂದ ಲಾಭ, ಹಣದ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಹಿತಶತ್ರುಗಳಿಂದ ತೊಂದರೆ.

 

The post ದಿನ ಭವಿಷ್ಯ 29-06-2021 appeared first on Public TV.

Source: publictv.in

Source link