ಗರ್ಭಿಣಿಯರು ಲಸಿಕೆ ಪಡೆಯಲು ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಗರ್ಭಿಣಿಯರು ಲಸಿಕೆ ಪಡೆಯಲು ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಗರ್ಭಿಣಿಯರು ಸಹ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಗರ್ಭಿಣಿಯರು ಲಸಿಕೆ ಪಡೆಯಲು ಕೆಲವೊಂದು ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಿದೆ.

ಲಸಿಕೆಗಾಗಿ ಕೋವಿನ್ ಪೋರ್ಟಲ್​ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯ ಮಾಡಲಾಗಿದೆ. ಆನಂತರ ಕೋವಿಡ್ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಸರ್ಕಾರ ಹೇಳಿದೆ. ಕೋವಿಡ್ ವೈರಸಸ್​ನಿಂದ ಗರ್ಭಿಣಿಯರನ್ನ ಲಸಿಕೆ ರಕ್ಷಿಸುತ್ತದೆ ಅಂತ ಆರೋಗ್ಯ ಸಚಿವಾಲಯ ಹೇಳಿದೆ.

  • ಈಗ ಲಭ್ಯವಿರುವ ಕೋವಿಡ್​ ಲಸಿಕೆಗಳು ಸುರಕ್ಷಿತವಾಗಿವೆ. ವ್ಯಾಕ್ಸಿನೇಷನ್ ಗರ್ಭಿಣಿಯರನ್ನು  ಕೊರೊನಾದಿಂದ  ಹಾಗೂ ಇತರ ರೋಗಗಳಿಂದ ರಕ್ಷಿಸುತ್ತದೆ.
  • ಹೆಚ್ಚಿನ ಗರ್ಭಿಣಿಯರು ರೋಗಲಕ್ಷಣರಹಿತರಾಗಿರುತ್ತಾರೆ. ಅಥವಾ ಕಡಿಮೆ ರೋಗಲಕ್ಷಣವನ್ನು ಹೊಂದಿರುತ್ತಾರೆ. ಆದರೆ ಅವರ ಆರೋಗ್ಯ ಶೀಘ್ರವಾಗಿ ಹದಗೆಡಬಹುದು ಮತ್ತು ಅದು ಭ್ರೂಣದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
  • ಒಂದು ವೇಳೆ ಗರ್ಭಿಣಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದ್ದರೆ, ಹೆರಿಗೆಯ ನಂತರ ಆಕೆಗೆ ಲಸಿಕೆ ನೀಡಬೇಕು.
  • ಲಸಿಕೆ ಚುಚ್ಚುಮದ್ದನ್ನು ಪಡೆದ ನಂತರ, ಸಣ್ಣ ಜ್ವರ, ಇಂಜೆಕ್ಷನ್ ಪಡೆದ ಸ್ಥಳದಲ್ಲಿ ನೋವು ಅಥವಾ 1-3 ದಿನಗಳವರೆಗೆ ಅನಾರೋಗ್ಯ ಇರಬಹುದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

The post ಗರ್ಭಿಣಿಯರು ಲಸಿಕೆ ಪಡೆಯಲು ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ appeared first on News First Kannada.

Source: newsfirstlive.com

Source link