6 ಜಿಲ್ಲೆಗಳಲ್ಲಿ ಒಂದಂಕಿಗೆ ಕುಸಿದ ಸೋಂಕು

ಬೆಂಗಳೂರು: ದೇಶದಲ್ಲಿ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಕರ್ನಾಟಕದಲ್ಲಿ ಈಗ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಂಕು ಒಂದಂಕಿಗೆ ಕುಸಿದಿದೆ.

ಜೂನ್ 28ರಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ ರಾಜ್ಯದಲ್ಲಿ ಒಟ್ಟು 2,576 ಹೊಸ ಪ್ರಕರಣಗಳು ವರದಿಯಾಗಿದ್ದರೆ 93 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 6 ಜಿಲ್ಲೆಗಳಲ್ಲಿ ಸೋಂಕು ಬಹಳ ಕಡಿಮೆಯಾಗಿದೆ.

ಯಾದಗಿರಿ 2, ಬೀದರ್ 3, ಕಲಬುರಗಿ ಮತ್ತು ವಿಜಯಪುರದಲ್ಲಿ ತಲಾ 4, ಬಾಗಲಕೋಟೆ 8, ರಾಯಚೂರಿನಲ್ಲಿ 9 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರ 563, ಮೈಸೂರು 282, ದಕ್ಷಿಣ ಕನ್ನಡ 263, ಶಿವಮೊಗ್ಗ 194, ಕೊಡಗು 150, ಹಾಸನದಲ್ಲಿ 138 ಪ್ರಕರಣ ವರದಿಯಾಗಿದೆ.

ಇಲ್ಲಿಯವರೆಗೆ ಒಟ್ಟು 28,37,206 ಮಂದಿಗೆ ಕೊರೊನಾ ಬಂದಿದ್ದರೆ 27,04,755 ಮಂದಿ ಗುಣಮುಖರಾಗಿದ್ದಾರೆ. ಸದ್ಯ 97,592 ಸಕ್ರಿಯ ಪ್ರಕರಣಗಳಿದ್ದು, 34,836 ಮಂದಿ ಮೃತಪಟ್ಟಿದ್ದಾರೆ.

The post 6 ಜಿಲ್ಲೆಗಳಲ್ಲಿ ಒಂದಂಕಿಗೆ ಕುಸಿದ ಸೋಂಕು appeared first on Public TV.

Source: publictv.in

Source link