ಇಲ್ಲಿ ಮತ್ತ್ಯಾರಿಗೂ ಡಿವೋರ್ಸ್ ಆಗಿಲ್ವಾ?: ನಿಧಿಯನ್ನ ಎಳೆದು ತಂದ ಚಂದ್ರಚೂಡ್‌

ಇಲ್ಲಿ ಮತ್ತ್ಯಾರಿಗೂ ಡಿವೋರ್ಸ್ ಆಗಿಲ್ವಾ?: ನಿಧಿಯನ್ನ ಎಳೆದು ತಂದ ಚಂದ್ರಚೂಡ್‌

ಮಂಜು ಪಾವಗಡ ಹಾಗೂ ಚಕ್ರವರ್ತಿ ಚಂದ್ರಚೂಡ್‌ ನಡುವಿನ ಸಮರ ಈಗ ಇನ್ನೊಂದು ಹಂತಕ್ಕೆ ಹೋಗಿದೆ. ಇಲ್ಲಿಯವರೆಗೂ ಇದು ಮಂಜು ಪಾವಗಡ, ಚಂದ್ರಚೂಡ್, ಪ್ರಶಾಂತ್ ನಡುವೆ ಮಾತ್ರ ಇತ್ತು. ಈಗ ಚಂದ್ರಚೂಡ್ ಹಾಗೂ ಪ್ರಶಾಂತ್ ನಿಧಿಸುಬ್ಬಯ್ಯರನ್ನ ಎಳೆದು ತಂದಿದ್ದಾರೆ. ಅವರೇ ಹೆಸರು ಪ್ರಸ್ತಾಪ ಮಾಡದೆಯೇ ಮಾತನಾಡಿದ್ದಾರೆ. ನಿಧಿಸುಬ್ಬಯ್ಯ ಡಿವೋರ್ಸ್‌ ಬಗ್ಗೆ ಮಾತನಾಡಿಬಿಟ್ಟಿದ್ದಾರೆ.

ಪ್ರಶಾಂತ್‌ ಸಂಬರಗಿ ಇನ್‌ವಿಸಿಬಲ್ ಟಾಸ್ಕ್ ಕಂಪ್ಲೀಟ್ ಆದ್ಮೇಲೆ ಚಂದ್ರಚೂಡ್‌ ಜೊತೆ ಬೆಡ್‌ರೂಮ್‌ನಲ್ಲಿ ಮಾತುಕತೆ ಶುರುವಾಯ್ತು. ಭಾನುವಾರ ನಡೆದ ವಾಕ್ಸಮರದ ಕುರಿತು ಇಬ್ಬರು ಮಾತನಾಡಿದರು. ಆಗ ನಿಧಿ ಸುಬ್ಬಯ್ಯ ಡಿವೋರ್ಸ್‌ ಬಗ್ಗೆ ಪ್ರಸ್ತಾಪವಾಯ್ತು.

blank

ಚಂದ್ರಚೂಡ್‌: ಅವರು ನನ್ನ ಬಿಟ್ಟೇ ಹೋಗಿರಬಹುದು. ಆದ್ರೆ, ಅವರ ಮೇಲೆ ಗೌರವವಿದೆ. ಸಮಾಜದಲ್ಲಿ ಗೌರವವಿದೆ. ಅವರ ಬಗ್ಗೆ ಮಾತನಾಡೋ ಯೋಗ್ಯತೆ ಇವನಿಗಿಲ್ಲ. ಅವರ ಕಾಲಿನ ಧೂಳಿಗೂ ಸಮನಲ್ಲ ಇವನು. ಅವರ ಹೆಸರೇಕೆ ಇವನು ತೆಗೆದುಕೊಳ್ಳುತ್ತಾನೆ. ಇವನ ಜೊತೆಯಿರೋ ಹುಡುಗಿಯರ ಕಥೆ ಶುರು ಮಾಡ್ಲಾ ಪರ್ಸನಲ್‌. ಈ ಮನೆಯಲ್ಲಿ ಯಾರಿಗೂ ಡಿವೋರ್ಸ್ ಆಗಿಲ್ವಾ?
ಪ್ರಶಾಂತ್‌: ಆಗಿದೆಯಪ್ಪಾ! ಅವರ ಕ್ಲೋಸ್ ಫ್ರೆಂಡ್‌ಗೆ ಆಗಿದೆ.
ಚಂದ್ರಚೂಡ್‌: ಯಾರಾದ್ರೂ ಬಂದು ನನಗೆ ಬುದ್ಧಿವಾದ ಹೇಳೋಕೆ ಬಂದ್ರು ಅಂತಾ ಇಟ್ಕೋ, ನಿನಗೆ ಡಿವೋರ್ಸ್ ಆಗಿದೆ ಶುರು ಮಾಡ್ಲಾ ಅಂತಾ ಕೇಳ್ತೀನಿ. ನಿನಗೆ ಡಿವೋರ್ಸ್ ಆಗಿದೆ. ನೀನು ಗಂಡನ ಬಿಟ್ಟು ಬಂದಿದ್ಯಾ? ನಿನಗೂ ನಿನ್ನ ಜೀವನದಲ್ಲಿ ಹೀಗೆಲ್ಲಾ ಆಗಿದೆ. ನಾನು ಮಾತನಾಡಿದ್ದೀನಾ? ನಿನಗೆ ಅಗೌರವ ತೋರಿದ್ದೀನಾ? ಅವನಿಗೆ ಮೊದಲು ಬೂಟ್‌ನಲ್ಲಿ ಹೊಡಿಬೇಕಿತ್ತು.
ಪ್ರಶಾಂತ್‌: ಅಲ್ಲಾ ನಾನು ಚರಿತ್ರೆ ಅಂತಾ ಮಾತಾಡಿದ್ದಕ್ಕೆ ನೀವೆಲ್ಲಾ ಮಾತನಾಡಿದ್ರಿ. ಅವ್ಳಿಗೆ ನೀನೇ ಸಪೋರ್ಟ್ ಮಾಡಿದ್ಯಾ?
ಚಂದ್ರಚೂಡ್‌: ಹಂಗಲ್ಲಾ ನೀನು ರಾಂಗ್ ಪದ ಬಳಸಿದ್ಯಾ?
ಪ್ರಶಾಂತ್‌: ಅದು ಬಿಡು ರಾಂಗ್..
ಚಂದ್ರಚೂಡ್‌: ಅದನ್ನ ಬಿಡು ನೀನು ಅಲ್ಲಿಗೆ ಹೋಗ್ಬೇಡಾ. ನೀನು ಮತ್ತೆ ಫ್ಲಿಪ್‌ಫಾಪ್ ಆಗ್ಬೇಡಾ. ಏನ್ ಗೊತ್ತಾ ಗುರು ನೀನು 2 ಸೆಕೆಂಡ್‌ಗೆ ಹೋಗಿ ಮಂಜಣ್ಣ ಅಂತಾ ಹೇಳೋದು.
ಪ್ರಶಾಂತ್‌: ಏ.. ಅವನ್ಯಾವನಲೇ.. ಮಂಜಣ್ಣಲೇ ಥೂ.. ನಾನ್ ಹೇಳೋದು ಪೂರ್ತಿ ಕೇಳಿಸಿಕೋ..

ಇದು ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ನಡುವೆ ನಡೆದ ಮಾತುಕತೆಯ ವಿವರ. ಬಹುಶಃ ಈ ವಿಷಯ ಇಲ್ಲಿಗೆ ಮುಗಿಯೋ ಥರಾ ಕಾಣ್ತಿಲ್ಲ. ಕಂಟ್ಯೂನ್ ಆಗೋ ಎಲ್ಲಾ ಸಾಧ್ಯತೆಗಳು ಇವೆ.

The post ಇಲ್ಲಿ ಮತ್ತ್ಯಾರಿಗೂ ಡಿವೋರ್ಸ್ ಆಗಿಲ್ವಾ?: ನಿಧಿಯನ್ನ ಎಳೆದು ತಂದ ಚಂದ್ರಚೂಡ್‌ appeared first on News First Kannada.

Source: newsfirstlive.com

Source link