ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ ಪರಿಹಾರ ಮಂಜೂರು

ಬೆಂಗಳೂರು: ಇತ್ತೀಚೆಗೆ ಕೊರೊನದಿಂದ ಮೃತಪಟ್ಟಿದ್ದ ಪಬ್ಲಿಕ್ ಟಿವಿ ಚಿತ್ರದುರ್ಗ ಕ್ಯಾಮರಾಮೆನ್ ಬಸವರಾಜ ಕೋಟಿ ಮತ್ತು ಚನ್ನರಾಯಪಟ್ಟಣ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಹಿರಿಯ ಪತ್ರಕರ್ತ ಸ್ವಾಮಿಗೌಡ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ.

ಬಸವರಾಜ ಕೋಟಿ ಅವರಿಗೆ ಪರಿಹಾರ ನೀಡುವಂತೆ ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಸ್ವಾಮಿಗೌಡ ಅವರಿಗೆ ಪರಿಹಾರ ಮಂಜೂರು ಮಾಡುವಂತೆ ಚನ್ನರಾಯಪಟ್ಟಣ ತಾಲೂಕು ಮತ್ತು ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಗಳು ರಾಜ್ಯ ಸಂಘಕ್ಕೆ ಮನವಿ ಮಾಡಿದ್ದವು. ಇದನ್ನೂ ಓದಿ: 6 ಜಿಲ್ಲೆಗಳಲ್ಲಿ ಒಂದಂಕಿಗೆ ಕುಸಿದ ಸೋಂಕು

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಪರಿಗಣಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಮಂಜೂರು ಮಾಡಿದ್ದಾರೆ.

The post ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ ಪರಿಹಾರ ಮಂಜೂರು appeared first on Public TV.

Source: publictv.in

Source link