ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಇಂದು ಸಿಎಂ ಭೇಟಿಯಾಗಲಿರುವ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಸಂಪುಟಕ್ಕೆ ಸೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದು ಇಂದು ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇನ್ನು ಮಾತುಕತೆ ವೇಳೆ ಜಾರಕಿಹೊಳಿ ಸಿಡಿ ತನಿಖೆ ಚುರುಕುಗೊಳಿಸುವಂತೆ ಮನವಿ ಮಾಡಲಿದ್ದಾರೆ. ಶೀಘ್ರವಾಗಿ ಕೇಸ್ ಇತ್ಯರ್ಥ ಮಾಡಿ ಮತ್ತೆ ತಮ್ಮನ್ನು ಕ್ಯಾಬಿನೆಟ್​​ಗೆ ಸೇರಿಸಿಕೊಳ್ಳಲು ಬೇಡಿಕೆ ಮಂಡಿಸಲಿದ್ದಾರೆ ಎನ್ನಲಾಗಿದೆ.

2. ಗರ್ಭಿಣಿಯರು ಲಸಿಕೆ ಪಡೆಯಲು ಮಾರ್ಗಸೂಚಿ
ಗರ್ಭಿಣಿಯರು ಸಹ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.. ಗರ್ಭಿಣಿಯರು ಲಸಿಕೆ ಪಡೆಯಲು ಕೆಲವೊಂದು ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಿದೆ.. ಲಸಿಕೆಗಾಗಿ ಕೋವಿನ್ ಪೋರ್ಟಲ್ನಲ್ಲಿ ರಿಜಿಸ್ಟರ್ ಕಡ್ಡಾಯ ಮಾಡಲಾಗಿದೆ.. ಆ ನಂತರ ಕೋವಿಡ್ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಸರ್ಕಾರ ಹೇಳಿದೆ.. ಕೋವಿಡ್ ವೈರಸ್ನಿಂದ ಗರ್ಭಿಣಿಯರನ್ನ ಲಸಿಕೆ ರಕ್ಷಿಸುತ್ತದೆ ಅಂತ ಆರೋಗ್ಯ ಸಚಿವಾಲಯ ಹೇಳಿದೆ..

3. ತೆಲಂಗಾಣದಲ್ಲಿ ಜುಲೈ 1ರಿಂದ ಆನ್​ಲೈನ್ ಕ್ಲಾಸ್
ಕೊರೊನಾ ಕಾರಣದಿಂದಾಗಿ ತೆಲಂಗಾಣ ಸರ್ಕಾರ ಆನ್ಲೈನ್ ಕ್ಲಾಸ್ ಮೊರೆ ಹೋಗಿದೆ. ಜುಲೈ 1 ರಿಂದ, 1ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಆರಂಭ ಮಾಡಲಾಗ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಪಿ. ಸಬಿತ ಇಂದ್ರ ರೆಡ್ಡಿ, ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವುದಕ್ಕಾಗಿ ಆನ್ಲೈನ್ ಕ್ಲಾಸ್ ಆರಂಭದ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.

4. ಚೀನಾ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದ ಭಾರತ
ಎಲ್ಎಸಿಯಲ್ಲಿ ಭಾರತ ಮತ್ತೆ ಸೇನಾ ಜಮಾವಣೆ ಮಾಡಿದೆ. ಗಡಿಯಲ್ಲಿ ಸುಮಾರು 50,000 ಸೈನಿಕರನ್ನ ನಿಯೋಜಿಸಿದೆ. ಅಲ್ಲದೇ ಮೂರು ಫೈಟರ್ ಜೆಟ್​​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕಳುಹಿಸಿದೆ. ಸದ್ಯ ಚೀನಾ-ಭಾರತ ಗಡಿಯಲ್ಲಿ ಒಟ್ಟು 2 ಲಕ್ಷ ಟ್ರೂಪ್​ಗಳಿವೆ. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಲಾಗಿದೆ ಎನ್ನಲಾಗ್ತಿದೆ. ಈ ಮಧ್ಯೆ ಚೀನಾ ತನ್ನ ಗಡಿ ಪ್ರದೇಶದಲ್ಲಿ ಎಷ್ಟು ಸೈನಿಕರ ನಿಯೋಜನೆ ಮಾಡಿದೆ ಎಂಬುದು ರಹಸ್ಯವಾಗಿ ಉಳಿದಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ಇತ್ತೀಚೆಗೆ ಟಿಬೆಟ್​ನಿಂದ ಕ್ಸಿಂಜಿಯಾಂಗ್ ಮಿಲಿಟರಿ ಕಮಾಂಡ್​ಗೆ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದೆ ಅಂತಾ ತಿಳಿದುಬಂದಿದೆ.

5 ತೈಲ ದರ ಏರಿಕೆ ಖಂಡಿಸಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ
ತೈಲ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಸಾಮಾಜಿಕ ಕಾರ್ಯಕರ್ತನೋರ್ವ ದೂರು ದಾಖಲಿಸಿದ್ದಾನೆ. ಬಿಹಾರದ ಮುಜಾಫರ್​ಪುರ್ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ತಮನ್ನ ಹಶ್ಮಿ ಎಂಬಾತ ದೂರು ದಾಖಲಿಸಿದ್ದು, ಬೆಲೆ ಏರಿಕೆ ಜನರನ್ನ ಭಯಭೀತಗೊಳಿಸಿದೆ ಅಂತ ಹೇಳಿದ್ದಾನೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕಡಿಮೆ ಇದೆ. ಆದ್ರೆ, ದೇಶದಲ್ಲಿ ತೈಲಬೆಲೆ 100ರ ಗಡಿ ದಾಟಿದೆ. ಇದರ ಹಿಂದೆ ಪಿತೂರಿ ಇದೆ ಅಂತ ದೂರಿನಲ್ಲಿ ತಮನ್ನ ಹಶ್ಮಿ ಉಲ್ಲೇಖಿಸಿದ್ದಾನೆ.

6. ರಾಹುಲ್, ಪ್ರಿಯಾಂಕಾ ಭೇಟಿಯಾಗಲಿರುವ ಸಿಧು
ಪಂಜಾಬ್‌ ಕಾಂಗ್ರೆಸ್‌ನಲ್ಲಿ ಎದುರಾಗಿರುವ ಆಂತರಿಕ ಕಲಹ ಪರಿಸ್ಥಿತಿಯ ನಡುವೆ ನವಜೋತ್‌ ಸಿಂಗ್‌ ಸಿಧು ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. 2022ರಲ್ಲಿ ಪಂಜಾಬ್‌ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ರಾಹುಲ್‌ ಗಾಂಧಿ, ಪಕ್ಷದ ನಾಯಕರಿಂದ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೆ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನ ನವಜೋತ್‌ ಸಿಂಗ್‌ ಸಿಧು ಭೇಟಿಯಾಗಲಿದ್ದಾರೆ.

7 ‘ಅಲ್ಪಸಂಖ್ಯಾತರ ಜನಸಂಖ್ಯೆ ನಿಯಂತ್ರಣಕ್ಕೆ ಯೋಜನೆ’
ಬಡತನ ಮತ್ತು ಅನಕ್ಷರತೆ ನಿರ್ಮೂಲನೆಗೆ ಅಸ್ಸಾಂ ಸರ್ಕಾರ ವಿಭಿನ್ನ ಯೋಜನೆ ಹಾಕಿಕೊಳ್ತಿದೆ. ಅಲ್ಪಸಂಖ್ಯಾತರ ಜನಸಂಖ್ಯೆ ಬೆಳವಣಿಗೆಯನ್ನು ನಿಧಾನಗೊಳಿಸಲು ನಿರ್ದಿಷ್ಟ ನೀತಿ ಅಳವಡಿಸಿಕೊಳ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಆರೋಗ್ಯ, ಶೈಕ್ಷಣಿಕ ಉಪಕ್ರಮಗಳನ್ನು ವಿಸ್ತರಿಸುವುದು ಮತ್ತು ಮುಸ್ಲಿಂ ಜನಸಂಖ್ಯೆ ಬೆಳವಣಿಗೆ ಪರಿಶೀಲಿಸುವುದು ಸರ್ಕಾರದ ಪ್ರಾಥಮಿಕ ಉದ್ದೇಶ ಅಂತ ಹೇಳಿಕೊಂಡಿದ್ದಾರೆ.

8 ‘ಅಂಗವಿಕಲರಿಗೆ ಮೀಸಲಾತಿ ನಿರಾಕರಿಸುವಂತಿಲ್ಲ’
ಕ್ರಿಯಾತ್ಮಕತೆ ಅಥವಾ ಇತre ಕಾರಣ ನೀಡಿ ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸಲಾಗದು ಅಂತ ಸುಪ್ರೀಂಕೋರ್ಟ್‌ ಹೇಳಿದೆ. ಮೀಸಲಾತಿ ನಿರಾಕರಿಸಿದ್ರೆ ಇತರರು ಬಡ್ತಿ ಪಡೆದುಕೊಳ್ಳುವಾಗ ಅಂಗವಿಕಲರಲ್ಲಿ ಹತಾಶೆ ಉಂಟು ಮಾಡಬಹುದು ಅಂತ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರವು ಸಮಸ್ಯೆ ಪರಿಹರಿಸಲು ಮಾರ್ಗೋಪಾಯ ಕಂಡುಕೊಳ್ಳಬೇಕು. ಇತರರಂತೆ ಅಂಗವಿಕಲರನ್ನೂ ಬಡ್ತಿಗೆ ಪರಿಗಣಿಸಬೇಕು ಅಂತ ಪೀಠ ಹೇಳಿದೆ.

9 ವಸಾಯಿಯಲ್ಲಿ ತೃತೀಯ ಲಿಂಗಿಗಳಿಗಾಗಿ ಶಾಲೆ
ಶ್ರೀ ಮಹಾಶಕ್ತಿ ಚಾರಿಟೆಬಲ್ ಟ್ರಸ್ಟ್ ಮಹಾರಾಷ್ಟದ ವಸಾಯಿಯಲ್ಲಿ ತೃತೀಯ ಲಿಂಗಿಗಳಿಗಾಗಿ ಶಾಲೆಯನ್ನು ಆರಂಭಿಸಿದೆ. ಇಲ್ಲಿ ಸಂಪೂರ್ಣ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಅಂತಾ ಟ್ರಸ್ಟ್ ಹೇಳಿದೆ. ಸದ್ಯ ಈ ಶಾಲೆಯಲ್ಲಿ 25 ಮಂಗಳಮುಖಿಯರು ಮತ್ತು ಕೆಲವು ಮಕ್ಕಳು ಓದುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಉಚಿತ ಪುಸ್ತಕ ನೀಡಲಾಗ್ತಿದೆ. ಉದ್ಯೋಗ ಅವಕಾಶಗಳನ್ನು ಸಹ ಒದಗಿಸುವ ವಿಶ್ವಾಸವನ್ನ ಟ್ರಸ್ಟ್ ವ್ಯಕ್ತಪಡಿಸಿದೆ.

10. ಚಿನ್ನಕ್ಕೆ ಗುರಿಯಿಟ್ಟ ಶೂಟರ್ ರಾಹಿ ಸರ್ನೊಬತ್
ಶೂಟಿಂಗ್‌ ಸ್ಪೋರ್ಟ್ಸ್ ವಿಶ್ವಕಪ್‌ ಕೂಟದಲ್ಲಿ ಭಾರತದ ಶೂಟರ್‌ ರಾಹಿ ಸರ್ನೊಬತ್ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಮಹಿಳೆಯರ 25 ಮೀ. ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಸರ್ನೊಬತ್ 39 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ಸರ್ನೋಬತ್ ಅಮೋಘ ಪ್ರದರ್ಶನ ನೀಡಿದ್ರು. ಈ ಬಾರಿಯ ಶೂಟಿಂಗ್ ವಿಶ್ವಕಪ್​ನಲ್ಲಿ ಭಾರತ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link