ಖಾರ ಖಾರ ಎಗ್ ಮಂಚೂರಿ ಮಾಡುವ ವಿಧಾನ

ಮೊಟ್ಟೆ ಮಂಚೂರಿಯನ್ನು ಒಮ್ಮೆ ತಿಂದರೆ ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ. ಹೊರಗೆ ಹೋಟೆಲ್‍ಗೆ ಹೋಗಿ ತರುವ ಬದಲು, ಮನೆಯಲ್ಲೇ ಮೊಟ್ಟೆ ಮಂಚೂರಿಯನ್ನು ಮಾಡಿ ಸವಿಯಿರಿ. ಹೋಟೆಲ್‍ನಲ್ಲಿ ಎಗ್ ಮಂಚೂರಿ ಟೇಸ್ಟ್ ನೋಡಿರುವ ನೀವು ನಿಮ್ಮ ಕೈಯಾರೆ ಸಿದ್ಧಮಾಡುವುದಕ್ಕೆ ಒಮ್ಮೆ ಟ್ರೈ ಮಾಡಲು ಇಲ್ಲಿದೆ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು: ಮೊಟ್ಟೆ- 4
* ಹಾಲು- 1ಕಪ್
* ಉಪ್ಪು-ರುಚಿಗೆ ತಕ್ಕಷ್ಟು
* ಕಾಳು ಮೆಣಸಿನ ಪುಡಿ- ಚಿಟಿಕೆಯಷ್ಟು
* ಈರುಳ್ಳಿ- 2
* ಕಡಲೆಹಿಟ್ಟು- 2 ಟೀ ಸ್ಪೂನ್
* ಜೋಳದ ಹಿಟ್ಟು- 2 ಟೀ ಸ್ಪೂನ್
* ಮೈದಾ ಹಿಟ್ಟು- 2 ಟೀ ಸ್ಪೂನ್
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್
* ಎಣ್ಣೆ – 1ಕಪ್
* ಕ್ಯಾಪ್ಸಿಕಂ- 1
* ಸೋಯಾ ಸಾಸ್- 1 ಟೀ ಸ್ಪೂನ್
* ಚಿಲ್ಲಿ ಸಾಸ್- 1 ಟೀ ಸ್ಪೂನ್
* ಟೊಮೆಟೊ ಸಾಸ್-1 ಟೀ ಸ್ಪೂನ್
* ವಿನೇಗರ್- 1 ಟೀ ಸ್ಪೂನ್

ಮಾಡುವ ವಿಧಾನ:

* ಮೊದಲು ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಉಪ್ಪು, ಮೆಣಸಿನ ಪುಡಿ, ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

* ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ನೀರು ಕುದಿಯುವ ವೇಳೆ ಮೊಟ್ಟೆಯ ಮಿಶ್ರಣ ಇದ್ದ ಪಾತ್ರೆಯನ್ನು ಅದರಲ್ಲಿಟ್ಟು ಆವಿಯಲ್ಲಿ ಮೊಟ್ಟೆಯನ್ನು ಬೇಯಿಸಬೇಕು. ಬೆಂದ ಈ ಮೊಟ್ಟೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.

blank

* ನಂತರ ಮತ್ತೊಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಉಪ್ಪು, ಸ್ವಲ್ಪ ಅಚ್ಛ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ತುಂಡರಿಸಿದ ಮೊಟ್ಟೆಗಳನ್ನು ಇದರಲ್ಲಿ ಅದ್ದಿ, ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಕರಿಯಬೇಕು.

* ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರು ಈರುಳ್ಳಿ, ಉಪ್ಪು ಹಾಗೂ ಎಲ್ಲಾ ಸಾಸ್, ವಿನೇಗರ್ ಹಾಕಿ ಮಿಶ್ರಣ ಮಾಡಬೇಕು. ನಂತರ ನೀರು ಹಾಕಿ ಕುದಿಯಲು ಬಿಟ್ಟು ಗ್ರೇವಿ ಗಟ್ಟಿಯಾದ ಬಳಿಕ ಈಗಾಗಲೇ ಎಣ್ಣೆಯಲ್ಲಿ ಕರಿದ ಮೊಟ್ಟೆಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.

The post ಖಾರ ಖಾರ ಎಗ್ ಮಂಚೂರಿ ಮಾಡುವ ವಿಧಾನ appeared first on Public TV.

Source: publictv.in

Source link