ದೇಶದಲ್ಲಿಂದು 37,566 ಜನರಿಗೆ ಕೊರೊನಾ.. ರಿಕವರಿ ರೇಟ್ 96.87%

ದೇಶದಲ್ಲಿಂದು 37,566 ಜನರಿಗೆ ಕೊರೊನಾ.. ರಿಕವರಿ ರೇಟ್ 96.87%

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 37,566 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 102 ದಿನಗಳ ಬಳಿಕ ದೇಶದಲ್ಲಿ 40 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 3,02,79,331ಕ್ಕೆ ತಲುಪಿದೆ.

ಇಂದು 56,994 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,93,66,601ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 907 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,97,637 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ. ಸದ್ಯ ದೇಶದಲ್ಲಿ ರಿಕವರಿ ರೇಟ್​(ಸೋಂಕಿತರು ಗುಣಮುಖರಾಗ್ತಿರುವ ಪ್ರಮಾಣ) ಶೇಕಡ 96.87 ಇದೆ. 

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 3,03,16,897
ಒಟ್ಟು ಡಿಸ್ಚಾರ್ಜ್ ಆದವರು: 2,93,66,601
ಒಟ್ಟು ಸಾವುಗಳು: 3,97,637
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 5,52,659
ಈವರಗೆ ವ್ಯಾಕ್ಸಿನ್ ಪಡೆದವರು: 32,90,29,510

The post ದೇಶದಲ್ಲಿಂದು 37,566 ಜನರಿಗೆ ಕೊರೊನಾ.. ರಿಕವರಿ ರೇಟ್ 96.87% appeared first on News First Kannada.

Source: newsfirstlive.com

Source link