ಸ್ಟಾರ್​​ಗಳ ಸ್ಥಾನ ತುಂಬುವರಾ ಯಂಗ್​​​ಸ್ಟರ್ಸ್? ಸೂಪರ್ ಕಾಂಬಿನೇಷನ್​​ನಿಂದ ಕೂಡಿದೆ ಯಂಗಿಸ್ತಾನ್

ಸ್ಟಾರ್​​ಗಳ ಸ್ಥಾನ ತುಂಬುವರಾ ಯಂಗ್​​​ಸ್ಟರ್ಸ್? ಸೂಪರ್ ಕಾಂಬಿನೇಷನ್​​ನಿಂದ ಕೂಡಿದೆ ಯಂಗಿಸ್ತಾನ್

ಒಂದೆಡೆ ಪ್ರಮುಖ ಆಟಗಾರರ ತಂಡ ಇಂಗ್ಲೆಂಡ್​ನಲ್ಲಿದೆ. ಇತ್ತ ಯುವ ಆಟಗಾರರ ತಂಡ, ಲಂಕಾ ಪ್ರವಾಸಕ್ಕೆ ತೆರಳಿದೆ. ಆದ್ರೆ ಶಿಖರ್ ಧವನ್​ ನೇತೃತ್ವದ ಲಂಕಾಗೆ ತೆರಳಿರುವ ಟೀಮ್ ಇಂಡಿಯಾದಲ್ಲಿ, ಅನುಭವಿ ಹಾಗೂ ಬಿಗ್​ ಸ್ಟಾರ್​ಗಳಿಲ್ಲ. ಇದು ಲಂಕಾ ಪ್ರವಾಸದ ಮೇಲೆ ಇಂಪ್ಯಾಕ್ಟ್​ ಆಗುತ್ತಾ? ಇಲ್ಲಿದೆ ನೋಡಿ ಉತ್ತರ.

ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ ಬಳಿಕ, ಕ್ರಿಕೆಟ್​ ಅಭಿಮಾನಿಗಳ ಚಿತ್ತ ಶ್ರೀಲಂಕಾ ಸರಣಿ ಮೇಲೆ ನೆಟ್ಟಿದೆ. ಒಂದೆಡೆ ಸೂಪರ್ ಸ್ಟಾರ್ ಆಟಗಾರರನ್ನೇ ಹೊಂದಿರುವ ವಿರಾಟ್​ ನೇತೃತ್ವದ ಪಡೆ, ಇಂಗ್ಲೆಂಡ್ ಎದುರಿನ ಕಾದಾಟಕ್ಕೆ ಸಜ್ಜಾಗುತ್ತಿದೆ. ಇತ್ತ ಶ್ರೀಲಂಕಾ ಪ್ರವಾಸಕ್ಕೆ ನ್ಯೂ ಯಂಗ್ ಇಂಡಿಯಾ ರೆಡಿಯಾಗಿದೆ. ಬಹುತೇಕ ಯುವ ಹಾಗೂ ಹೊಸ ಆಟಗಾರರಿಂದಲೇ ತುಂಬಿರುವ ಯಂಗ್ ಇಂಡಿಯಾ, ಸಿಂಹಳೀಯರನ್ನ ನಾಡಿಗೆ ತರೆಳಿರೋದು ವಿಶ್ವ ಕ್ರಿಕೆಟ್​​​ಲೋಕದ ಗಮನ ಸೆಳೆದಿದೆ. ಇದಕ್ಕೆ ಕಾರಣ ಲಂಕಾ ಪ್ರವಾಸದಲ್ಲಿ ಬಿಗ್​ ಸ್ಟಾರ್​ಗಳು ಗೈರು.

blank

ಹೌದು, ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿ ಸ್ಟಾರ್​ ಆಟಗಾರರದ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಬೂಮ್ರಾ ಬ್ಯೂಸಿಯಾಗಿದ್ದಾರೆ. ಕೋವಿಡ್ ಪ್ರೋಟೋಕಾಲ್​​​​​, ಕ್ವಾರಂಟೀನ್​ ಇನ್ನಿತರ ಕಾರಣಗಳಿಂದಾಗಿ ಬಿಸಿಸಿಐ, ಬಿಗ್​ಬಾಸ್​ಗಳು ದೇಶಿ ಕ್ರಿಕೆಟ್​ ಸ್ಟಾರ್​ಗಳಿಗೆ ಮಣೆಹಾಕಿ ದ್ವೀಪ ರಾಷ್ಟ್ರದ ದಂಡೆಯಾತ್ರೆಗೆ ಕಳುಹಿಸಿ ಕೊಟ್ಟಿದೆ. ಆದ್ರೆ ಬಿಗ್​​ಸ್ಟಾರ್​ಗಳನ್ನ ಹೊಂದಿದ್ದ ವಿರಾಟ್​ ನೇತೃತ್ವದ ಟೆಸ್ಟ್​​ ತಂಡ ಫೈನಲ್​​ನಲ್ಲಿ ಸೋತ ಬಳಿಕ, ಯುವ ಆಟಗಾರರ ತಂಡ ಲಂಕನ್ನರ ನಾಡಿನಲ್ಲಿ ಸಿಂಹಳೀಯರನ್ನ ಬೇಟೆಯಾಡುತ್ತಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದಕ್ಕೆ ಉತ್ತರ ಹೌದು.. ಅನ್ನೋದೆ ಆಗಿದೆ.

ಅನುಭವಿಗಳ ಸ್ಥಾನ ತುಂಬುವರ ಯುವ ಆಟಗಾರರು!
ಶಿಖರ್ ಧವನ್ ನೇತೃತ್ವದ ತಂಡ ಯುವ ಹಾಗೂ ಅನುಭವಿಗಳ ಸಮಿಶ್ರಣದಿಂದ ಕೂಡಿದೆ. ಇದರಲ್ಲಿ ಬಿಗ್​​​ಸ್ಟಾರ್​ ಆಟಗಾರರ ಅನುಪಸ್ಥಿತಿ ಕಾಣಬಹುದು. ಆದ್ರೆ ಆ ಸ್ಟಾರ್​​ ಆಟಗಾರರ ಸ್ಥಾನವನ್ನ ತುಂಬಬಲ್ಲ ಯಂಗ್ ಟೈಗರ್ಸ್ ತಂಡದಲ್ಲಿದ್ದಾರೆ. ಇಂಪ್ಯಾಕ್ಟ್​ ಸದ್ಯ ಇಂಗ್ಲೆಂಡ್​ನಲ್ಲಿರುವ ಟೆಸ್ಟ್​ ತಂಡಕ್ಕೆ ಹೋಲಿಸಿದ್ರೆ, ಈ ತಂಡದಲ್ಲಿ ಪ್ರತಿಯೊಂದು ಸ್ಲಾಟ್​​ನಲ್ಲಿ ಬ್ಯಾಟ್​ ಬೀಸಬಲ್ಲ ಇಬ್ಬರಿಂದ ಮೂವರು ಆಟಗಾರರು ಇದ್ದಾರೆ. ಓಪನರ್ಸ್, ಮಿಡಲ್ ಆರ್ಡರ್​, ಲೋವರ್ ಆರ್ಡರ್​, ಸ್ಪಿನ್ನರ್ಸ್, ಯಂಗ್ ಸ್ಪೀಡ್ ಗನ್ಸ್​, ಹೀಗೆ ಪ್ರತಿ ಸ್ಲಾಟ್​​ಗೂ ಟಿ20 ಸ್ಪೆಷಲಿಸ್ಟ್ಸ್​​​​​​ ತಂಡ ಜಬರ್ರ್ದ್​ಸ್ತ್​​​ ಆಗಿದೆ.

blank

ವೈಟ್​ಬಾಲ್​ನ ಸ್ಪೆಷಲಿಸ್ಟ್​ ಓಪನರ್ಸ್​, ಮಿಡಲ್ ಆರ್ಡರ್​
ಓಪನಿಂಗ್ ಸ್ಲಾಟ್​ಗೆ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಅಲಭ್ಯತೆ ಕಾಡುತ್ತಾ ಎಂಬ ಪ್ರಶ್ನೆ ನಿಮ್ಮನ್ನ ಕಾಡಬಹದು.. ಆದ್ರೆ ಲಂಕಾ ಸರಣಿಯಲ್ಲಿ ರೋಹಿತ್ ಅಲಭ್ಯತೆ ಪ್ರಶ್ನೆ ಮುನ್ನಲೆಗೆ ಬರದಂತ ಪ್ರದರ್ಶನ ನೀಡುವ ಓಪನಿಂಗ್ ಜೋಡಿ ತಂಡದಲ್ಲಿದೆ. ಹೌದು..! ಐಪಿಎಲ್​ನಲ್ಲಿ ಸೂಪರ್ ಡ್ಯಾಶಿಂಗ್​​ ಜೋಡಿ ಶಿಖರ್ ಧವನ್-ಪೃಥ್ವಿ ಶಾ.. ಈ ಜೋಡಿ ಕ್ರೀಸ್​ನಲ್ಲಿದ್ದರೇ ರನ್​​​​ಗಳ ಬೋರ್ಗೆರೆತ ಪಕ್ಕ..! ಇವರಿಗೆ ಬ್ಯಾಕ್ ಆಫ್​ ಆಗಿ ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್ ಎಂಬ ದೇಶಿ ಸ್ಟಾರ್ಸ್ ಇದ್ದಾರೆ. ಏಕದಿನ, ಟಿ20, ಟೆಸ್ಟ್ ಹೀಗೆ ಫಾರ್ಮೆಟ್​ ಯಾವುದೇ ಆಗಲಿ ಅಬ್ಬರಿಬಲ್ಲ ಇವರು.. ಸೂಪರ್ ಸ್ಟಾರ್ಟ್​ ನೀಡೋದು ಗ್ಯಾರಂಟಿ.

ಇಷ್ಟೇ ಅಲ್ಲ, 3ನೇ ಕ್ರಮಾಂಕದಲ್ಲಿ ವಿರಾಟ್​ ಅನುಪಸ್ಥಿತಿ ಕಾಡದಂತೆ ಬ್ಯಾಟ್ ಬೀಸಬಲ್ಲ ಸೂರ್ಯಕುಮಾರ್, 4ನೇ ಕ್ರಮಾಂಕದಲ್ಲಿ ಟಿ20 ಸ್ಪೆಷಲಿಸ್ಟ್ ಇಶಾನ್ ಕಿಶಾನ್ ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಬ್ಯಾಟ್​ ಬೀಸುವ ಮನೀಶ್ ಪಾಂಡೆ ಸಂಕಷ್ಟದಲ್ಲಿ ತಂಡಕ್ಕೆ ನೆರವಾಗ್ತಾರೆ. ಇದೇ ಅಲ್ಲ. ಪ್ರೇಮ್​ದಾಸ್​ನ ಸ್ಲೋ ಟ್ರ್ಯಾಕ್​​ನಲ್ಲಿ ಮನೀಶ್​ ಮೇಜರ್​ ರೋಲ್ ಪ್ಲೇ ಮಾಡಲಿದ್ದಾರೆ. ಹೀಗಾಗಿ ಟಿ20 ಹಾಗೂ ಏಕದಿನ ಸರಣಿಯಲ್ಲಿ ಶ್ರೇಯಸ್​ ಅಯ್ಯರ್​, ಕೆ.ಎಲ್.ರಾಹುಲ್ ಅಲಭ್ಯತೆ ಖಂಡಿತ ಎದುರಾಗಲ್ಲ.. ಮ್ಯಾಚ್ ಫಿನಿಷರ್ ಆಗಿ ಹಾರ್ದಿಕ್ ಪಾಂಡ್ಯ ಈಗಾಗಲೇ ಫ್ರೂವ್ ಮಾಡಿದ್ದಾರೆ.

blank

ಲಂಕಾ ಕಂಡೀಷನ್​​ಗೆ ಸೆಟ್​ ಆಗುತ್ತೆ ಬೌಲಿಂಗ್ ಕಾಂಬಿನೇಷನ್..!​
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೋಲಿಗೆ ಬೌಲಿಂಗ್ ಕಾಂಬೀನೇಷನ್ ಕಾರಣವಾಗಿತ್ತು. ಆದ್ರೆ ಲಂಕಾ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಈ ಸಮಸ್ಯೆ ಕಾಡುವುದಿಲ್ಲ. ಇದಕ್ಕೆ ಕಾರಣ ಶಿಖರ್ ಪಡೆಯಲ್ಲಿ ಲಂಕಾ ಕಂಡೀಷನ್​​ಗೆ ಸೂಟ್​ ಆಗುವಂತ ಪರ್ಫೆಕ್ಟ್ ಕಾಂಬಿನೇಷನ್ ಇದೆ. ಸ್ವಿಂಗ್ ಜೊತೆಗೆ ವೇರಿಯೇಷನ್ ಬೌಲಿಂಗ್ ಮಾಡುವ ಭುವನೇಶ್ವರ್​ ಜೊತೆ ದೀಪಕ್ ಚಹರ್ ಇದ್ದಾರೆ.

ಇನ್ನು ಪ್ರೇಮದಾಸ ಸ್ಪಿನ್ ಟ್ರ್ಯಾಕ್​​ಗೆ ತಕ್ಕ ಸ್ಪಿನ್​​ ಅಟ್ಯಾಕ್ ಶಿಖರ್ ಪಡೆಯಲ್ಲಿದೆ. ಪೇಪರ್ ಮೇಲೆ ಅನುಭವಿಗಳಾದ ಯಜುವೇಂದ್ರ ಚಹಲ್, ಚೈನಾಮನ್ ಕುಲ್​ದೀಪ್ ಜೊತೆ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹೊಂದಾಣಿಕೆ ಆಗುತ್ತೆ. ಇವರಲ್ಲದೆ ರಾಹುಲ್ ಚಹರ್ ಕೂಡ ಎಕ್ಸ್​-ಫ್ಯಾಕ್ಟರ್ ಆಗಿ ಕೆಲಸ ನಿರ್ವಹಿಸಬಲ್ಲರು. ಹಾಗಾಗಿ ಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾಕ್ಕೆ ಅನುಭವಿ ಆಟಗಾರರ ಗೈರು ಖಂಡಿತ ಎದುರಾಗಲ್ಲ.

ಸ್ವದೇಶದಲ್ಲೇ ಲಂಕಾ ಸವಾಲನ್ನ ಯುವ ಪಡೆ ಎದುರಿಸುತ್ತಿದೆ. ಇದು ಕೊಂಚ ಯುವ ಪಡೆಗೆ ಡಿಸ್ ಅಡ್ವಾಂಟೇಜ್ ಆಗಿರಬಹುದು. ಆದ್ರೆ ಯಂಗಿಸ್ತಾನ್​​ಗೆ ಇದನ್ನೆಲ್ಲಾ ಮೆಟ್ಟಿನಿಲ್ಲುವ ತಾಕತ್ತು ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಐಪಿಎಲ್​ ಎಂಬ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ದಿಗ್ಗಜ ಬೌಲರ್​ಗಳನ್ನ ಸವಾಲು ಮೆಟ್ಟಿನಿಂತಿದ್ದಾರೆ. ಚೆನ್ನೈ ಹಾಗೂ ಯುಎಇನಂತಹ ಸ್ಪಿನ್​ ಟ್ರ್ಯಾಕ್​​ಗಳಲ್ಲಿ ಆಡಿರುವ ಅನುಭವವೂ ಹೊಸ ಆಟಗಾರರಿಗೆ ಇದೆ. ಹೀಗಾಗಿಯೇ ಬಿಗ್​ಸ್ಟಾರ್​ಗಳ ಅಲಭ್ಯತೆ ನಡುವೆ ಗೆಲ್ಲೋ ಪೇವರಿಟ್ ಆಗಿ ಯಂಗ್ ಇಂಡಿಯಾ ಕಣಕ್ಕಿಳಿಯುತ್ತಿದೆ.

ಒಟ್ಟಿನಲ್ಲಿ ಅದೇನೇ ಆಗಲಿ, ಸದ್ಯದ ಯುವ ಪಡೆಯಲ್ಲಿ ಬಿಗ್​​ಸ್ಟಾರ್​ಗಳು ಇಲ್ಲದಿರಬಹುದು. ಆದರೆ ಇದೇ ಆಟಗಾರರೇ ಟೀಮ್ ಇಂಡಿಯಾದ ಮುಂದಿನ ಆಸ್ತಿ ಅನ್ನೋದನ್ನ ಮರೆಯುವಂತಿಲ್ಲ.

The post ಸ್ಟಾರ್​​ಗಳ ಸ್ಥಾನ ತುಂಬುವರಾ ಯಂಗ್​​​ಸ್ಟರ್ಸ್? ಸೂಪರ್ ಕಾಂಬಿನೇಷನ್​​ನಿಂದ ಕೂಡಿದೆ ಯಂಗಿಸ್ತಾನ್ appeared first on News First Kannada.

Source: newsfirstlive.com

Source link