ಹಿಮಾಚಲಪ್ರದೇಶ ಹೈಕೋರ್ಟ್​ ಸಿಜೆ ಆಗಿ ಕನ್ನಡಿಗ ನ್ಯಾ. ರವಿ ಮಳಿಮಠ್​​​ ನೇಮಕ

ಹಿಮಾಚಲಪ್ರದೇಶ ಹೈಕೋರ್ಟ್​ ಸಿಜೆ ಆಗಿ ಕನ್ನಡಿಗ ನ್ಯಾ. ರವಿ ಮಳಿಮಠ್​​​ ನೇಮಕ

ಶಿಮ್ಲಾ: ಹಿಮಾಚಲಪ್ರದೇಶ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಮತ್ತೊಮ್ಮೆ ಕನ್ನಡಿಗರೊಬ್ಬರ ನೇಮಕವಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್​, ನ್ಯಾ. ರವಿ ಮಳಿಮಠ್ ಅವರನ್ನು ಹಿಮಾಚಲ ಹೈಕೋರ್ಟ್ ಸಿಜೆ ಆಗಿ ನೇಮಕ ಮಾಡಿದ್ದಾರೆ.

ಈಗಾಗಲೇ ಹಿಮಾಚಲಪ್ರದೇಶದ ಹೈಕೋರ್ಟ್​ ಸಿಜೆ ಆಗಿರುವವರು ಕೂಡ ಕನ್ನಡಿಗ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ. ಅವರು ಜುಲೈ 1ರಂದು ನಿವೃತ್ತರಾಗಲಿದ್ದು, ಆ ಸ್ಥಾನಕ್ಕೆ ಈಗ ರವಿ‌ಮಳಿಮಠ್ ಅವರನ್ನ ನೇಮಿಸಲಾಗಿದೆ. ಖಾಲಿಯಾಗಲಿರುವ ಸ್ಥಾನಕ್ಕೆ ಮತ್ತೊಮ್ಮೆ ಕರ್ನಾಟಕ ಮೂಲದ ನ್ಯಾಯಮೂರ್ತಿಯನ್ನ ನೇಮಿಸಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶ ಹೊರಡಿಸಿದೆ.

ರವಿ ಮಳಿಮಠ್ ಹಿನ್ನಲೆ:
ನಿವೃತ್ತ ನ್ಯಾಯಮೂರ್ತಿ ವಿ.ಎಸ್ ಮಳಿಮಠ್ ಅವರ ಪುತ್ರ ರವಿ ಮಳಿಮಠ್. 1987ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ರು. 2008ರಲ್ಲಿ ಕರ್ನಾಟಕ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2020ರ ಜುಲೈನಲ್ಲಿ ಉತ್ತರಾಖಂಡ್ ಹೈಕೋರ್ಟ್​ನ ಸಿಜೆಯಾಗಿದ್ದರು. ಈಗ ಹಿಮಾಚಲಪ್ರದೇಶ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.

 

 

The post ಹಿಮಾಚಲಪ್ರದೇಶ ಹೈಕೋರ್ಟ್​ ಸಿಜೆ ಆಗಿ ಕನ್ನಡಿಗ ನ್ಯಾ. ರವಿ ಮಳಿಮಠ್​​​ ನೇಮಕ appeared first on News First Kannada.

Source: newsfirstlive.com

Source link