ಹೇಳಿದ ಮುಹೂರ್ತಕ್ಕೇ RRR ಫಿಕ್ಸ್.. ರಾಜಮೌಳಿ-ತಾರಕ್-ಚರಣ್ ಹವಾ ಶುರು

ಹೇಳಿದ ಮುಹೂರ್ತಕ್ಕೇ RRR ಫಿಕ್ಸ್.. ರಾಜಮೌಳಿ-ತಾರಕ್-ಚರಣ್ ಹವಾ ಶುರು

ಬಾಹುಬಲಿ ಸಿನಿಮಾಗಳ ನಂತರ ಎಸ್​​.ಎಸ್.ರಾಜಮೌಳಿಯವರ ಹೊಸ ಸಿನಿಮಾ ಕನಸು ಥ್ರಿಬಲ್ ಆರ್, ‘‘ರೌದ್ರ ರಣ ರುಧಿರ’’. ಕಾಣದ ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಥ್ರಿಬಲ್ ಆರ್ ಸಿನಿಮಾದ ಶೂಟಿಂಗ್ ನಿಂತು ಹೋಗಿತ್ತು. ಇನೇನು ಕಟ್ಟ ಕಡೆಯ ದೃಶ್ಯದ ಚಿತ್ರೀಕರಣ ಅದ್ಧೂರಿಯಾಗಿ ಮುಗಿಸಿಬಿಟ್ಟಿದ್ರೇ ಥ್ರಿಬಲ್ ಆರ್ ಶೂಟಿಂಗ್​​ಗೆ ಕುಂಬಳಕಾಯಿ ಹೊಡೆಯಬಹುದಿತ್ತು.

ಒಂದು ಮಾಹಿತಿಯ ಪ್ರಕಾರ ಸಿನಿಮಾದ ಕೆಲವೇ ಭಾಗಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಶೂಟಿಂಗ್ ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಬರದಿಂದ ಸಾಗುತ್ತಿದೆ. ಈ ಸಿನಿಮಾದ ಹೀರೋಗಳಾಗಿರುವ ಜೂನಿಯರ್ ಎನ್​.ಟಿ.ಆರ್ ಹಾಗೂ ರಾಮ್ ಚರಣ್ ತೇಜ ಹೊಸ ಸಿನಿಮಾಗಳ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕಿರುವ ಕಾರಣ ತ್ವರಿತಗತಿಯಲೇ ಥ್ರಿಬಲ್ ಸಿನಿಮಾದ ನಿರ್ಮಾಣ ಕಾರ್ಯಗಳು ಸಾಗುತ್ತಿದೆ. ಈಗ ವಿಷಯವೆನಪ್ಪ ಅಂದ್ರೆ ‘‘ರೌಧ್ರ ರಣ ರುಧಿರ’’ ಸಿನಿಮಾ ರಿಲೀಸ್ ಯಾವಾಗ ಅನ್ನೋದೆ ಸ್ವಾರಸ್ಯ..

blank

ಅಕ್ಟೋಬರ್ 13 ಎರಡು ಸಾವಿರದ ಇಪ್ಪತ್ತೊಂದರಂದು ವಿಶ್ವಾದ್ಯಂತ ಥ್ರಿಬಲ್ ಆರ್ ಸಿನಿಮಾ ತೆರೆಕಾಣಲಿದೆ ಅನ್ನೋದನ್ನ ಸ್ವತಃ ಚಿತ್ರತಂಡ ಪೋಸ್ಟರ್ ಮೂಲಕ ಘೋಷಣೆ ಮಾಡಿತ್ತು. ಆದ್ರೆ ಕೋವಿಡ್ ಎರಡನೇ ಅಲೆ ತೀವ್ರಆಗಿ ಹೋದ ಕಾರಣ ಥ್ರಿಬಲ್ ಆರ್ ಸಿನಿಮಾ ಅಕ್ಟೋಬರ್ 13ರ ಬದಲು ಜನವರಿ 26ರ ಗಣರಾಜ್ಯೋತ್ಸವದ ದಿನದಂದು ತೆರೆಕಾಣುತ್ತೆ ಎನ್ನಲಾಗಿತ್ತು. ಈ ಸಿನಿಮಾ ಸ್ವಾತಂತ್ರ್ಯ ಹೋರಾಟವನ್ನ ಸಾರೋ ಕಥೆಯಾಗಿರೋದ್ರಿಂದ 2022ರ ಜನವರಿ 26ರಂದು ತೆರೆಕಾಣುತ್ತೆ ಅನ್ನೋ ಮಾತುಗಳು ಚಾಲ್ತಿಯಲ್ಲಿರುವಾಗಲೇ ಚಿತ್ರತಂಡ ರಿಲೀಸ್ ಡೇಟ್​​ ಬಗ್ಗೆ ಅಂತೆ ಕಂತೆಗಳಿಗೆ ಫುಲ್​​ಸ್ಟಾಪ್ ಇಟ್ಟಿದೆ.

ಈ ಹಿಂದೆ ಘೋಷಣೆ ಮಾಡಿದ್ದ ದಿನಾಂಕ 2021ರ ಅಕ್ಟೋಬರ್ 13ರಂದೆ ಪ್ರೇಕ್ಷಕರ ಮುಂದೆ ಥ್ರಿಬಲ್ ಆರ್ ತಂದು ನಿಲ್ಲಿಸುತ್ತೇವೆ ಎಂದು ಚಿತ್ರತಂಡ ಹೊಸ ಪೋಸ್ಟರ್ ಮೂಲಕ ಘೋಷಣೆ ಮಾಡಿದೆ.

blank

ಜೂನಿಯರ್ ಎನ್​ಟಿಆರ್, ರಾಮ್ ಚರಣ್ ಅವರನ್ನ ಬೈಕ್​​ನಲ್ಲಿ ಕುರಿಸಿಕೊಂಡು ರೈಡಿಂಗ್ ಮಾಡ್ತಿರೋ ಪೋಸ್ಟರ್​ ಅನ್ನ ಥ್ರಿಬಲ್ ಆರ್ ತಂಡ ಹೊರ ಬಿಟ್ಟಿದೆ. ಈ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಹಾಗೂ ಸಿನಿಮಾ ಅಪ್​ಡೇಟ್ ಏನು ಅನ್ನೋದನ್ನ ಚಿತ್ರತಂಡ ಬಹಿರಂಗ ಪಡಿಸಿದೆ. ಜೂನಿಯರ್ ಎನ್​​ಟಿಆರ್ ಹಾಗೂ ರಾಮ್ ಚರಣ್ ತಮ್ಮ ತಮ್ಮ ಪಾತ್ರಗಳಿಗೆ ವಾಯ್ಸ್ ಡಬ್ ಮಾಡಿ ಮುಗಿಸಿದ್ದಾರೆ. ಜೂನಿಯರ್ ಎನ್​ಟಿಆರ್ ಕೊಮ್ಮುರಾಮ್ ಭೀಮಾ ಪಾತ್ರವನ್ನ ಹಾಗೂ ರಾಮ್ ಚರಣ್ ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನ ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

ಭಾರತೀಯ ಸಿನಿಮಾ ರಂಗದ ನಿರೀಕ್ಷಿತ ಸಿನಿಮಾಗಳು ಥ್ರಿಬಲ್ ಆರ್ ಹಾಗೂ ಕೆಜಿಎಫ್​ ಚಾಪ್ಟರ್ 2.. ಈಗಾಗಲೇ ಥ್ರಿಬಲ್ ಆರ್ ಸಿನಿಮಾ ತಾವು ಬರೋ ಡೇಟ್​​ ಅನ್ನ ಈಗಾಗಲೇ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಕ್ಟೋಬರ್ 13ನೇ ತಾರೀಖ್ ಮೂರನೇ ಕೊರೊನಾ ಅಲೆಯ ಅಂತಕವಿರದಿದ್ರೇ ಪ್ರೇಕ್ಷಕ ಮುಂದೆ ಥ್ರಿಬಲ್ ಆರ್ ಬರೋದು ಕನ್ಫರ್ಮ್.

The post ಹೇಳಿದ ಮುಹೂರ್ತಕ್ಕೇ RRR ಫಿಕ್ಸ್.. ರಾಜಮೌಳಿ-ತಾರಕ್-ಚರಣ್ ಹವಾ ಶುರು appeared first on News First Kannada.

Source: newsfirstlive.com

Source link