ಬಯೋಬಬಲ್ ಉಲ್ಲಂಘಿಸಿದ ಲಂಕಾ ಕ್ರಿಕೆಟಿಗರು, ಭಾರತ ಸರಣಿಯಿಂದ ಔಟ್..!

ಬಯೋಬಬಲ್ ಉಲ್ಲಂಘಿಸಿದ ಲಂಕಾ ಕ್ರಿಕೆಟಿಗರು, ಭಾರತ ಸರಣಿಯಿಂದ ಔಟ್..!

ಬಯೋಬಬಲ್​​​​ ನಿಯಮಗಳನ್ನ ಉಲ್ಲಂಘಿಸಿದ ಕಾರಣಕ್ಕೆ, ಶ್ರೀಲಂಕಾ ತಂಡದ ಮೂವರು ಆಟಗಾರರನ್ನ ಲಂಕಾ ಕ್ರಿಕೆಟ್ ಮಂಡಳಿ ಅಮಾನತು ಮಾಡಲಾಗಿದೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೂ ಮುನ್ನ ಈ ಘಟನೆ ಸಂಭವಿಸಿರೋದು, ತಂಡಕ್ಕೆ ಆಘಾತ ಎದುರಾದಂತಾಗಿದೆ. ಕುಸಾಲ್ ಮೆಂಡಿಸ್, ಧನುಷ್ಕಾ ಗುಣತಿಲಕ ಮತ್ತು ನಿರೋಶನ್ ಡಿಕ್ವೆಲ್ಲಾರನ್ನ ಬಯೋಬಬಲ್ ಉಲ್ಲಂಘಿಸಿದ ಪ್ರಕರಣದಲ್ಲಿ, ತಪ್ಪಿತಸ್ಥರು ಎನ್ನಲಾಗಿದೆ. ಈ ಹಿನ್ನೆಲೆ ತವರಿಗೆ ವಾಪಾಸ್ ಕರೆಸಿಕೊಳ್ಳಲು ಲಂಕಾ ಮಂಡಳಿ ನಿರ್ಧರಿಸಿದೆ. ಶ್ರೀಲಂಕಾ ಕ್ರಿಕೆಟ್‌ನ ಕಾರ್ಯದರ್ಶಿ ಮೋಹನ್ ಡಿಸಿಲ್ವ ತಮ್ಮ ಹೇಳಿಕೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಇಂಗ್ಲೆಂಡ್​​ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಭಾನುವಾರ ಶ್ರೀಲಂಕಾ ಸೋಲು ಕಂಡ ಬಳಿಕ, ಈ ಘಟನೆ ನಡೆದಿದೆ. ಸೋಲಿನ ನಂತರ ರಾತ್ರಿ ಡಿಕ್ವೆಲ್ಲಾ ಹಾಗೂ ಮೆಂಡಿಸ್ ನೈಟ್‌ಔಟ್‌ ಹೋಗಿರುವ ವೀಡಿಯೋ, ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಟಗಾರರು ಬಯೋಬಬಲ್ ಉಲ್ಲಂಘನೆ ಮಾಡಿರುವುದು ಖಚಿತವಾದರೆ, ಕ್ರಮ ಕೈಗೊಳ್ಳುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಈಗ ಮೂವರು ಕ್ರಿಕೆಟಿಗರನ್ನು ಅಮಾನತುಗೊಳಿಸಲಾಗಿದೆ. ಇಂದಿನಿಂದ ಲಂಕಾ ವರ್ಸಸ್ ಇಂಗ್ಲೆಂಡ್​​ ಏಕದಿನ ಕ್ರಿಕೆಟ್​​ ಸರಣಿ ಆರಂಭವಾಗಿದೆ.

 

The post ಬಯೋಬಬಲ್ ಉಲ್ಲಂಘಿಸಿದ ಲಂಕಾ ಕ್ರಿಕೆಟಿಗರು, ಭಾರತ ಸರಣಿಯಿಂದ ಔಟ್..! appeared first on News First Kannada.

Source: newsfirstlive.com

Source link