ವಾಕ್ಸಮರದ ನಂತರ ಕುಚುಕು ಗೆಳೆಯರು ಕಣ್ಣೀರಿಟ್ಟರು!

ವಾಕ್ಸಮರದ ನಂತರ ಕುಚುಕು ಗೆಳೆಯರು ಕಣ್ಣೀರಿಟ್ಟರು!

ಒಂದು ದೊಡ್ಡ ಗದ್ದಲ, ಗಲಾಟೆಯ ನಂತರ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಕಣ್ಣೀರಿಟ್ಟರು ಅಂದ್ರೆ ನೀವು ನಂಬ್ಲೇಬೇಕು. ಆದ್ರೆ, ಕಾರಣ ನೀವು ಅಂದುಕೊಂಡಿರೋದು ಅಲ್ಲ. ಬೇರೇನೋ ಇದೆ.

ಎಲಿಮನೇಟ್ ಆಗಿದ್ದೇನೆ ಅಂತಾ ಬೇಸರವಾಗಿದ್ದ ಪ್ರಶಾಂತ್ ಸಂಬರಗಿಗೆ ಕೊನೆಗೂ ಬಿಗ್‌ಬಾಸ್‌ ಒಂದು ಪತ್ರದ ಮೂಲಕ ಶಾಕ್ ಕೊಡ್ತಾರೆ. ಪತ್ರದಲ್ಲಿ ಈ ವಾರ ನೋ ಎಲಿಮಿನೇಶನ್​ ರೌಂಡ್​ ಆಗಿದ್ದರಿಂದ ಪ್ರಶಾಂತ್​ ಸೇಫ್​ ಆಗಿದ್ದಿರಿ ಅಂತಾ ಬರೆದಿತ್ತು. ಇದನ್ನು ನೋಡಿ ಪ್ರಶಾಂತ್​ ಅವರು ತುಂಬಾ ಕನ್​ಫ್ಯೂಸ್​​​​ ಆಗಿ, ಕ್ಯಾಮರಾ ಕಂಡಲ್ಲೆಲ್ಲಾ ಪತ್ರವನ್ನ ಪದೇ ಪದೇ ಓದುತ್ತಿದ್ದರು.

blankಈ ಕಡೆ ಉಳಿದ ಸ್ಪರ್ಧಿಗಳು ಕಿಚ್ಚ ಸುದೀಪ್‌ ಆದೇಶವನ್ನ ಚಾಚು ತಪ್ಪದೇ ಪಾಲಿಸುತ್ತಿದ್ದರು. ಈ ಕುರಿತು ತಿಳಿಯದ ಪ್ರಶಾಂತ್​ ಅವರು ಮೊದಲು ಚಂದ್ರಚೂಡ್​ ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ. ತಮ್ಮ ಎಲಿಮನೇಷನ್​ ಕುರಿತ ಸಂಶಯವನ್ನು ಕೇಳುತ್ತಾರೆ. ಇದಕ್ಕೆ ಚಕ್ರವರ್ತಿ ಅವರು ಸ್ಪಂದಿಸುವುದಿಲ್ಲ. ಚಕ್ರವರ್ತಿ ಅವರ ವರ್ತನೆ ಕಂಡು ಬಿಗ್​ಬಾಸ್​ ಮಾತನಾಡಬೇಡ ಎಂದು ಹೇಳಿದ್ದಾರಾ..? ನಮ್ಮ ಸ್ನೇಹ ಇಷ್ಟೇನಾ..? ಎಂದು ಪ್ರಶಾಂತ್​ ಕೇಳುತ್ತಾರೆ. ಆದರೆ ಇದಕ್ಕೆ ಚಂದ್ರಚೂಡ್​ ಉತ್ತರ ನೀಡುವುದಿಲ್ಲ.

blankನಂತರ ರಘು ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ. ಪ್ರಶಾಂತ್​ ಅವರ ಕಾಟ ತಡೆಯಲಾರದೇ ರಘು ಬಾತ್​ ರೂಂನಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ. ಅಲ್ಲಿಂದ ಕಿಚನ್​ ಏರಿಯಾಗೆ ಬಂದ ಪ್ರಶಾಂತ್​,  ನನ್ನ ಜತೆ ಮಾತನಾಡಬೇಡ ಎಂದು ಬಿಗ್​ಬಾಸ್​ ಹೇಳಿದ್ದಾರಾ? ಅಂತ ಅರವಿಂದ ಅವರನ್ನು ಕೇಳುತ್ತಾರೆ. ಚಕ್ರವರ್ತಿ ಅವರಿಗೆ ನೀರು ಕೇಳುತ್ತಾರೆ. ಆದರೇ ಇದ್ಯಾವುದಕ್ಕೂ ಯಾರೂ ಉತ್ತರ ನೀಡುವುದಿಲ್ಲ. ದಿವ್ಯಾ ಉರುಡುಗ ಅವರನ್ನ ಮಾತನಾಡಿಸಿ ಎಂದು ತುಂಬಾ ಒತ್ತಾಯ ಮಾಡುತ್ತಾರೆ. ಆದ್ರೆ ಅವರು ಮಾತನಾಡೋದಿಲ್ಲ. ಇದೇ ವೇಳೆ ಪ್ರಶಾಂತ್ ಸಂಬರಗಿ ಭಾವುಕರಾಗ್ತಾರೆ. ಇನ್ನೊಂದೆಡೆ, ಚಂದ್ರಚೂಡ್​ ಅವರು ಪ್ರಶಾಂತ್​ ಅವರ ಪರಿಸ್ಥಿತಿ ಕಂಡು ಕಣ್ಣಿರು ಹಾಕುತ್ತಾರೆ.

ಇದೆಲ್ಲಾ ಆಗಿ ಕೆಲ ಹೊತ್ತಿನ ನಂತರ ಕೊನೆಗೂ ಪ್ರಶಾಂತ್ ಸಂಬರಗಿ ಅವ್ರಿಗೆ ರಿಲೀಫ್ ಸಿಗುತ್ತೆ. ಇನ್‌ವಿಸಿಬಲ್ ಟಾಸ್ಕ್ ಎಂಡ್ ಆಗುತ್ತೆ. ಆ ನಂತರ ಪ್ರಶಾಂತ್ ಸಂಬರಗಿ ಎಂದಿನಂತೆ ಆಟ ಮುಂದುವರೆಸುತ್ತಾರೆ.

The post ವಾಕ್ಸಮರದ ನಂತರ ಕುಚುಕು ಗೆಳೆಯರು ಕಣ್ಣೀರಿಟ್ಟರು! appeared first on News First Kannada.

Source: newsfirstlive.com

Source link