ರಾಜ್ಯದ ರೂಲ್ಸ್ ನಮ್ಗೆ ಅಪ್ಲೇ ಆಗಲ್ಲ ಅಂದಿದ್ದ CBSE & ICSE ಬೋರ್ಡ್​​ಗೆ ತುರ್ತು ನೋಟಿಸ್​

ರಾಜ್ಯದ ರೂಲ್ಸ್ ನಮ್ಗೆ ಅಪ್ಲೇ ಆಗಲ್ಲ ಅಂದಿದ್ದ CBSE & ICSE ಬೋರ್ಡ್​​ಗೆ ತುರ್ತು ನೋಟಿಸ್​

ಬೆಂಗಳೂರು: ರಾಜ್ಯ ಸರ್ಕಾರದ ರೂಲ್ಸ್ ನಮಗೆ ಅಪ್ಲೇ ಆಗಲ್ಲ ಅಂದಿದ್ದ CBSE & ICSE ಸ್ಕೂಲ್ ಅಸೋಸಿಯೇಷನ್​​ಗೆ ಹೈಕೋರ್ಟ್​ನ ನ್ಯಾ.ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ ತುರ್ತು ನೋಟಿಸ್ ನೀಡಿದೆ.

ಖಾಸಗಿ ಶಾಲೆಗಳಿಂದ ಸ್ಕೂಲ್ ಫೀ ಟಾರ್ಚರ್ ಮತ್ತು ಸಿಬಿಎಸ್ಸಿ & ಐಸಿಎಸ್ಸಿ ಬೋರ್ಡ್ ಸ್ಕೂಲ್​​ಗಳ ಧೋರಣೆ ಸಂಬಂಧ ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ನಡೆಯಿತು. ಇದೇ ಮೊದಲ ಬಾರಿಗೆ ರಾಜ್ಯ ಹೈಕೋರ್ಟ್​ CBSE & ICSE ಸ್ಕೂಲ್ ಅಸೋಸಿಯೇಷನ್​​ಗೆ ನೋಟಿಸ್​ ನೀಡಿದೆ.

ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಶೇಕಡಾ 30% ಶುಲ್ಕ ಕಡಿತಕ್ಕೆ ಆದೇಶ ನೀಡಿತ್ತು. ಆದರೆ‌ ನಾವು ರಾಜ್ಯ ಸರ್ಕಾರದ ಅಡಿಯಲ್ಲಿ‌ ಬರಲ್ಲ ಎಂದು ಪಟ್ಟು ಹಿಡಿದಿದ್ದವು. ಇದನ್ನ ಪ್ರಶ್ನಿಸಿ ಹೈಕೋರ್ಟ್ ವಕೀಲ ನಟರಾಜ್ ಶರ್ಮಾ ಪಿಐಎಲ್​ ಸಲ್ಲಿಸಿದ್ದರು. ಅವರು ಸೆಂಟ್ರಲ್‌ನಿಂದ ಬೋರ್ಡ್ ಪರ್ಮಿಷನ್ ಪಡೆದಿರಬಹುದು. ಆದರೆ ರಾಜ್ಯ ಸರ್ಕಾರದಿಂದ ಶಾಲೆ ನಡೆಸಲು NOC ಪಡೆದಿದ್ದಾರೆ. ಹೀಗಾಗಿ ಎಲ್ಲಾ CBSE & ICSE ಸ್ಕೂಲ್ ಗಳು ಆದೇಶ ಪಾಲಿಸಬೇಕು. NDMA Act ಅಡಿಯಲ್ಲಿ ತುರ್ತು ಬಂದಾಗ ರೂಲ್ಸ್ ಪಾಲಿಸಬೇಕು ಎಂದು ನಟರಾಜ್ ಶರ್ಮಾ ಕೋರ್ಟ್​ನಲ್ಲಿ ವಾದ ಮಂಡಿಸಿದರು.

ಇನ್ನು ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು‌ ರಾಜ್ಯ ಸರ್ಕಾರದ ವಕೀಲರು ಸಮಯಾವಕಾಶ ಕೇಳಿದ್ದಾರೆ. ಜುಲೈ 12ರ ತನಕ ಟೈಂ ರಾಜ್ಯ ಸರ್ಕಾರ ಕಾಲಾವಕಾಶ ಕೇಳಿದೆ. ಸರ್ಕಾರದ ಮನವಿಯನ್ನ ಪುರಸ್ಕರಿಸಿದ ಕೋರ್ಟ್​, 2 ಬೋರ್ಡ್​ಗಳಿಗೆ ತುರ್ತು ನೋಟಿಸ್ ನೀಡಿದೆ.

The post ರಾಜ್ಯದ ರೂಲ್ಸ್ ನಮ್ಗೆ ಅಪ್ಲೇ ಆಗಲ್ಲ ಅಂದಿದ್ದ CBSE & ICSE ಬೋರ್ಡ್​​ಗೆ ತುರ್ತು ನೋಟಿಸ್​ appeared first on News First Kannada.

Source: newsfirstlive.com

Source link