ನಮ್ಮನೇ ಸೆಕ್ಯೂರಿಟಿ ಗಾರ್ಡ್‌ ಸಂಬಳ ಗೊತ್ತಾ? ದಿವ್ಯಾಗೆ ಸಂಬರಗಿ ಎದುರೇಟು

ನಮ್ಮನೇ ಸೆಕ್ಯೂರಿಟಿ ಗಾರ್ಡ್‌ ಸಂಬಳ ಗೊತ್ತಾ? ದಿವ್ಯಾಗೆ ಸಂಬರಗಿ ಎದುರೇಟು

ಇನ್​ವಿಸಿಬಲ್​ ಟಾಸ್ಕ್​ನಿಂದ ಬಿಗ್​ಬಾಸ್​ ಮನೆ ಒಂದು ರೀತಿಯಲ್ಲಿ ಕಣ್ಣಾಮುಚ್ಚಾಲೆ ಆಟದ ಮೈದಾನದಂತಾಗಿತ್ತು. ಪ್ರಶಾಂತ್​ ಸಂಬರಗಿ ಶತಾಯಗತಾಯ ಪ್ರಯತ್ನಪಟ್ಟರು ಮನೆಯವರ ಮೌನ ಮುರಿಯಲು ಕೊನೆಗೂ ಸಾಧ್ಯವಾಗ್ಲಿಲ್ಲ. ಟಾಸ್ಕ್ ಮುಗಿದ ನಂತರವಷ್ಟೇ ಎಲ್ಲರೂ ಪ್ರತಿಕ್ರಿಯಿಸಿದ್ದು. ಇದಕ್ಕೂ ಮುನ್ನ, ಇದನ್ನ ಬಂಡವಾಳವಾಗಿ ಮಾಡಿಕೊಂಡ ಪ್ರಶಾಂತ್ ಸಂಬರಗಿ ದಿವ್ಯಾ ಸುರೇಶ್‌ಗೆ ಟಾಂಗ್ ಕೊಟ್ಟರು.

ಹೌದು, ಮನೆಯವರನ್ನು ಮಾತನಾಡಿಸಲು ಬಗೆ ಬಗೆಯ ಟ್ರೀಕ್​ ಉಪಯೋಗಿಸುತ್ತಿದ್ದ ಪ್ರಶಾಂತ್​, ತಿಂಡಿ ಮಾಡುತ್ತಿದ್ದಾಗ ಪ್ರಿಯಾಂಕಾ ತಿಮ್ಮೇಶ್​​ ಅವರ ಮೂಲಕ ದಿವ್ಯಾ ಸುರೇಶ್‌ನ ಟಾರ್ಗೆಟ್ ಮಾಡಿದರು.

‘ಪಿಟಿ ನನ್ನ ಟಿವಿ ಇಂಟರ್​ವಿವ್ಯೂ ನೋಡಿದ್ದಿಯಾ..? ಮೆಕ್ಯಾನಿಕಲ್​ ಫೇಕ್​ ಲವ್​ ಸ್ಟೋರಿ ಬಗ್ಗೆ ನಾನು ಹೇಳಿದ್ದೀನಿ. ಅದನ್ನು ಅವರು ಆಡಿರೋ ನಾಟಕದ ಬಗ್ಗೆ ಕರ್ನಾಟಕದ ಜನತೆ ಮುಂದೆ ಒಪ್ಕೊಂಡಿದ್ದಾರೆ. ಇಲ್ಲಿ ನಾನು ಅದರ ಬಗ್ಗೆ ನಿಷ್ಠುರವಾಗಿ ಹೇಳಿದರೇ ಕೋಪ ಬರುತ್ತೆ ಅವರಿಗೆ. ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‌ ಸಂಬಳ ಎಷ್ಟು ಗೊತ್ತಾ 30,000? ಜೊತೆಗೆ ಮನೆ ಕೊಟ್ಟಿದ್ದೀನಿ. ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಠ ’ ಅಂತಾ ಪ್ರಶಾಂತ್ ಹೇಳಿದರು.

ಇದರಿಂದ ದಿವ್ಯಾ ಸುರೇಶ್ ಏನೂ ಮಾತನಾಡದೇ ಎದ್ದು ಬೆಡ್​ ರೂಂ ಗೆ ಹೋಗಿ ಪ್ರಿಯಾಂಕಾ ಅವರ ಮುಂದೆ ಕಣ್ಣೀರು ಹಾಕಿದರು.

The post ನಮ್ಮನೇ ಸೆಕ್ಯೂರಿಟಿ ಗಾರ್ಡ್‌ ಸಂಬಳ ಗೊತ್ತಾ? ದಿವ್ಯಾಗೆ ಸಂಬರಗಿ ಎದುರೇಟು appeared first on News First Kannada.

Source: newsfirstlive.com

Source link