100 ಮಂದಿ SSLC ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಿಂದ ಉಚಿತ ಟ್ಯಾಬ್ ವಿತರಣೆ

ಬೀದರ್: ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಗಡಿ ಜಿಲ್ಲೆ ಬೀದರ್‍ನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಹಾಗೂ ಗಡವಂತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 100 ಮಂದಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು. ಟ್ಯಾಬ್ ದಾನಿಗಳಾದ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಕಾರ್ಯಕ್ರಮದಲ್ಲಿ ಉಚಿತ ಟ್ಯಾಬ್‍ಗಳನ್ನು ವಿತರಣೆ ಮಾಡಿದರು.

ಕೊರೋನಾ ಸಮಯದಲ್ಲಿ ಶಾಲೆಗಳು ಇಲ್ಲದೇ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಉಳಿದ ದಿನಗಳನ್ನು ಈ ಟ್ಯಾಬ್ ನೋಡಿಕೊಂಡು ಉತ್ತಮ ಫಲಿತಾಂಶ ತರುತ್ತೇವೆ. ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ನಮಗೆ ಬಹಳ ಸಹಕಾರಿಯಾಗಿದೆ. ನಮ್ಮಗೆ ಟ್ಯಾಬ್ ನೀಡಿದ ಪಬ್ಲಿಕ್ ಟಿವಿಗೆ ಹಾಗೂ ಟ್ಯಾಬ್ ದಾನಿಗಳಾದ ಶಾಸಕರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು.

blank

ಇಡೀ ರಾಜ್ಯದಲ್ಲೇ ಜ್ಞಾನ ದೀವಿಗೆಯಂತಹ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದೆ. ನಾನು ಇದನ್ನು ದೇಣಿಗೆ ಎಂದು ಹೇಳಲ್ಲ, ಕ್ಷೇತ್ರದ ಜನರ ಅಳಿಲು ಸೇವೆ ಮಾಡಲು ನನಗೆ ಪಬ್ಲಿಕ್ ಟಿವಿ ಅವಕಾಶ ಮಾಡಿಕೊಟ್ಟಿದೆ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಕೆಲಸ ನೀವು ಮಾಡಿದ್ದೀರಿ ಎಂದು ಶಾಸಕರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದರು.

blank

ಈ ವೇಳೆ ಎಂಎಲ್‍ಸಿಗಳಾದ ಚಂದ್ರಶೇಖರ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವ ಬಂಡಪ್ಪ, ಶಿಕ್ಷಕರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಸಿಇಟಿ ವಿದ್ಯಾರ್ಥಿಗಳಿಗೆ ಕೋವಿಡ್ ರಕ್ಷಕ-ಪರೀಕ್ಷಾ ಪ್ರಾಧಿಕಾರಕ್ಕೆ 2 ಲಕ್ಷ ಸರ್ಜಿಕಲ್ ಮಾಸ್ಕ್ – ಡಿಸಿಎಂಗೆ ಹಸ್ತಾಂತರ

The post 100 ಮಂದಿ SSLC ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಿಂದ ಉಚಿತ ಟ್ಯಾಬ್ ವಿತರಣೆ appeared first on Public TV.

Source: publictv.in

Source link