ಸಂಗೀತ ಲೋಕದಲ್ಲಿ ಅರ್ಜುನ್ ಜನ್ಯ ಮತ್ತೆ ಮೂರು ಹೊಸ ದಾಖಲೆ!

ಸಂಗೀತ ಲೋಕದಲ್ಲಿ ಅರ್ಜುನ್ ಜನ್ಯ ಮತ್ತೆ ಮೂರು ಹೊಸ ದಾಖಲೆ!

ಸ್ಯಾಂಡಲ್​ವುಡ್​​ನ ಮ್ಯಾಜಿಕಲ್ ಕಂಪೋಸರ್ ಎಂದೇ ಹೆಸರು ಪಡೆದಿರುವ ಅರ್ಜುನ್ ಜನ್ಯ ಹೊಸ ಮ್ಯೂಸಿಕಲ್ ರೆಕಾರ್ಡ್​ ಒಂದನ್ನ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

2006ರಲ್ಲಿ ಆಟೋಗ್ರಾಫ್ ಪ್ಲಿಸ್ ಸಿನಿಮಾದ ಮೂಲಕ ಸ್ಯಾಂಡಲ್​​ವುಡ್ ಸಂಗೀತ ಲೋಕಕ್ಕೆ ಕಾಲಿಟ್ಟವರು ಅರ್ಜುನ್ ಜನ್ಯ.. ಮೊದ ಮೊದಲು ಅದ್ಭುತ ಹಾಡುಗಳನ್ನ ಕೊಟ್ಟರು ಸಿನಿಮಾಗಳು ಹಿಟ್ ಆಗದೆ ಇದ್ದ ಕಾರಣದಿಂದ ಅವಕಾಶ ವಂಚಿತರಾಗಿ ಕಾಲ ಕಳೆದಿದ್ದರು ಅರ್ಜುನ್ ಜನ್ಯ. ಆದ್ರೆ ಅದ್ಯಾವಾಗ ಅರ್ಜುನ್ ಜನ್ಯ ಪಾಲಿಗೆ ಕಿಚ್ಚ ಸುದೀಪ್ ಸಿಕ್ಕಿ ಕೆಂಪೇಗೌಡ ಸಿನಿಮಾಕ್ಕೆ ಮ್ಯೂಸಿಕ್ ಮಾಡಿದ್ರೋ ಅಲ್ಲಿಂದ ಅರ್ಜುನ್ ಜನ್ಯ ಹಿಂದೆ ನೋಡಲೇ ಇಲ್ಲ. ಹಿಟ್ ಮೇಲೆ ಹಿಟ್ ಕೊಡ್ತಾ ಬರೋಬ್ಬರಿ ನೂರು ಸಿನಿಮಾಗಳಿಗೆ ಮ್ಯೂಸಿಕ್ ಮಾಡಿದ್ದಾರೆ ಮ್ಯಾಜಿಕಲ್ ಕಂಪೋಸರ್​. ಗೋಲ್ಡನ್ ಸ್ಟಾರ್ ಗಣೇಶ್ ಅವರ ‘‘99’’ ಸಿನಿಮಾ ಜನ್ಯರ ನೂರನೇ ಮ್ಯೂಸಿಕ್ ಚಿತ್ರ.

blank

ಈಗ ಜನ್ಯ ಹೊಸದೊಂದು ರೆಕಾರ್ಡ್​​ ಅನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಅದೇನಂದ್ರೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಮೂರು ಹಾಡುಗಳು ಈಗ ಬರೋಬ್ಬರಿ ನೂರು ಮಿಲಿಯನ್ ವಿವ್ಸ್ ಪಡೆದಿರುವ ಕನ್ನಡದ ಹಾಡುಗಳಾಗಿವೆ.

ಸ್ಯಾಂಡಲ್​​ವುಡ್ ಅಧ್ಯಕ್ಷ ಶರಣ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘‘ಚುಟು ಚುಟು ಅಂತೈತೆ’’ ಹಾಡು ಯೂಟ್ಯೂಬ್ ಲೋಕದಲ್ಲಿ ನೂರು ಮಿಲಿಯನ್ ವೀಕ್ಷಣೆಯಾದ ಅರ್ಜುನ್ ಜನ್ಯರ ಮೊದಲ ಹಾಡು.

ಇನ್ನು ಎರಡನೇ ಹಾಡು ಯಾವುದು ಗೊತ್ತಾ.. ನೀನಾಸಂ ಸತೀಶ್ , ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾದ ಎನಮ್ಮಿ ಎನಮ್ಮಿ ಹಾಡು ನೂರು ಮಿಲಿಯನ್ ವೀಕ್ಷಣೆಯಾಗಿದೆ.

ಅರ್ಜುನ್ ಜನ್ಯ ಸಂಯೋಜಿಸಿರುವ ಮೂರನೇ ಮತ್ತು ನೂರು ಮಿಲಿಯನ್ ವೀಕ್ಷಣೆಯಾಗಿರುವ ಹಾಡ್ಯಾವುದು ಗೊತ್ತಾ? ರಾಬರ್ಟ್ ಸಿನಿಮಾದು. ಹೌದು.. ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಯೋಗರಾಜ್ ಭಟ್ ಪದಪುಂಜದ ಶ್ರೇಯಾ ಗೋಷಾಲ್ ಕಂಠಸಿರಿಯ ‘‘ಕಣ್ಣು ಹೊಡಿಯಾಕ’’ ಹಾಡು ವೇಗವಾಗಿ ನೂರು ಮಿಲಿಯನ್ ವೀಕ್ಷಣೆಯಾಗಿದೆ.

ಈ ಸಂತೋಷದ ವಿಚಾರವನ್ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಸಂಭ್ರಮಿಸಿದ್ದಾರೆ.

The post ಸಂಗೀತ ಲೋಕದಲ್ಲಿ ಅರ್ಜುನ್ ಜನ್ಯ ಮತ್ತೆ ಮೂರು ಹೊಸ ದಾಖಲೆ! appeared first on News First Kannada.

Source: newsfirstlive.com

Source link