ಯೋಚ್ನೆ ಮಾಡ್ಬೇಡಿ ನಾವೇ ‘ರಾಜ-ರಾಣಿ’ ಎಂದ ಸಮೀರ್ ಆಚಾರ್ಯ ದಂಪತಿ

ಯೋಚ್ನೆ ಮಾಡ್ಬೇಡಿ ನಾವೇ ‘ರಾಜ-ರಾಣಿ’ ಎಂದ ಸಮೀರ್ ಆಚಾರ್ಯ ದಂಪತಿ

ರಿಯಲ್‌ ಕಪಲ್‌ಗಳ ಹೊಸ ರಿಯಾಲಿಟಿ ಹೊಸ ಶೋ ರಾಜ ರಾಣಿ. ನೇಹಾ ದಂಪತಿ, ಚಂದನ್ ಶೆಟ್ಟಿ ಕಪಲ್, ಆ ಮೇಲೆ ದೀಪಿಕಾ ಆಕರ್ಷ್‌ ಕೂಡ ಬಂದ್ಬಿಟ್ರು. ಈಗ ಇನ್ಯಾರು ಬರಬಹುದು ಅಂತಾ ಗೆಸ್ ಮಾಡೋಕೆ ನಾವ್ ಟೈಮ್ ಕೊಡೋಲ್ಲ. ನಾವೇ ಹೇಳಿಬಿಡ್ತೀವಿ.

ಬಿಗ್‌ಬಾಸ್ ಮೂಲಕ ಜನರ ಮೆಚ್ಚುಗೆ ಗಳಿಸಿದ ಸಮೀರ್ ಆಚಾರ್ಯ ಹಾಗೂ ಅವರ ಪತ್ನಿ ಶ್ರವಣಿ ರಾಜರಾಣಿ ರಿಯಾಲಿಟಿ ಶೋನ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ.

ಸಮೀರ್ ಆಚಾರ್ಯ ಉತ್ತರ ಕರ್ನಾಟಕದ ಖಡಕ್‌ ರೊಟ್ಟಿ ಥರಾ. ಯಾವುದಾದ್ರೂ ಸರಿ ಅನಿಸಿಲ್ಲ ಅಂದ್ರೆ ಢಮ್ ಢಮಾರ್ ಮಾಡಿಬಿಡ್ತಾರೆ ಅಷ್ಟೇ. ತುಂಬಾ ನೇರ ನುಡಿಯಿಂದಲೇ ಫೇಮಸ್ ಆಗಿರೋ ಸಮೀರ್ ಆಚಾರ್ಯ ಬಿಗ್‌ಬಾಸ್ ನಂತರ ಆಗಾಗ ಟಿವಿಯ ಶೋಗಳಲ್ಲಿ ಬರ್ತಿದ್ರು.

ಸಮೀರ್ ಆಚಾರ್ಯ ಅವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿ.. ರಾಜರಾಣಿ ಅಂತಾ ಬರೆದುಕೊಂಡಿದ್ದಾರೆ. ಇಂಡಸ್ಟ್ರಿ ಮೂಲಗಳು ಸಹ ಈ ಮಾಹಿತಿಯನ್ನ ಕನ್ಫರ್ಮ್ ಮಾಡಿವೆ. ಈಗಾಗ್ಲೇ ಶೋ ಶೂಟಿಂಗ್ ಆರಂಭವಾಗಿದೆ. ಚಿತ್ರೀಕರಣದಲ್ಲಿ ಈ ದಂಪತಿಯೂ ಭಾಗಿಯಾಗಿದೆ. ಸದ್ಯದಲ್ಲಿಯೇ ಈ ದಂಪತಿಯ ಪ್ರೊಮೋ ಕೂಡ ರಿಲೀಸ್ ಆಗ್ಲಿದೆ. ರಾಜ ರಾಣಿ ಶೋಗೆ ಉತ್ತರ ಕರ್ನಾಟಕದ ಪ್ರತಿನಿಧಿಗಳಾಗಿ ಭಾಗವಹಿಸ್ತಿರೋ ಸಮೀರ್ ಆಚಾರ್ಯ ಹಾಗೂ ಶ್ರವಣಿ ಅವ್ರಿಗೆ ನಮ್ಮ ಕಡೆಯಿಂದ ಆಲ್‌ ದಿ ಬೆಸ್ಟ್.

The post ಯೋಚ್ನೆ ಮಾಡ್ಬೇಡಿ ನಾವೇ ‘ರಾಜ-ರಾಣಿ’ ಎಂದ ಸಮೀರ್ ಆಚಾರ್ಯ ದಂಪತಿ appeared first on News First Kannada.

Source: newsfirstlive.com

Source link