ಚಿಂತಾಮಣಿಯಿಂದ ದೆಹಲಿಯತ್ತ ರಾಜ್ಯದ 250 ಟನ್ ಮಾವು.. ‘ಕಿಸಾನ್ ರೈಲ್​ಗೆ ಸಿಎಂ ಹಸಿರು ನಿಶಾನೆ

ಚಿಂತಾಮಣಿಯಿಂದ ದೆಹಲಿಯತ್ತ ರಾಜ್ಯದ 250 ಟನ್ ಮಾವು.. ‘ಕಿಸಾನ್ ರೈಲ್​ಗೆ ಸಿಎಂ ಹಸಿರು ನಿಶಾನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ‘ಕಿಸಾನ್ ರೈಲು ಯೋಜನೆ’ಗೆ ರಾಜ್ಯದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದ್ದಾರೆ.

ಯಲಹಂಕದ ರೈಲ್ವೆ ಸ್ಟೇಷನ್​ನಲ್ಲಿ ಕಿಸಾನ್ ರೈಲು ಯೋಜನೆಗೆ ಸಿಎಂ ಬಿಎಸ್​ ಯಡಿಯೂರಪ್ಪ ಚಾಲನೆ ನೀಡಿದರು. ಕೃಷಿ ಉತ್ಪನ್ನಗಳನ್ನ ಸುಗಮವಾಗಿ ಸಾಗಾಣಿಕೆ ಮಾಡಲು ಈ ರೈಲು ಯೋಜನೆ ಸಹಕಾರಿಯಾಗಲಿದೆ.

ಈ ವೇಳೆ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ತೋಟಗಾರಿಕೆ ಸಚಿವ ಆರ್.ಶಂಕರ್, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸೇರಿದಂತೆ ರೈಲ್ವೆ ಹಾಗೂ ಸರ್ಕಾರದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಬಳಿಕ ಟ್ವೀಟ್​ ಮಾಡಿರುವ ಸಿಎಂ ಬಿಎಸ್​ ಯಡಿಯೂರಪ್ಪ.. ರಾಜ್ಯದ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುತ್ತಿರುವ ‘ಕಿಸಾನ್ ರೈಲ್’ಗೆ ಇಂದು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಾಯಿತು. ಅನ್ನದಾತ ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ‘ಕಿಸಾನ್ ರೈಲು’ ಮಹತ್ವದ ಪಾತ್ರ ವಹಿಸುತ್ತಿದ್ದು, ನಮ್ಮ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರುತ್ತೇನೆ ಎಂದರು.

The post ಚಿಂತಾಮಣಿಯಿಂದ ದೆಹಲಿಯತ್ತ ರಾಜ್ಯದ 250 ಟನ್ ಮಾವು.. ‘ಕಿಸಾನ್ ರೈಲ್​ಗೆ ಸಿಎಂ ಹಸಿರು ನಿಶಾನೆ appeared first on News First Kannada.

Source: newsfirstlive.com

Source link