ರಾಜ್ಯಗಳ ಸಂಬಂಧ ಹಾಳು ಮಾಡೋ ಯತ್ನವನ್ನ ಮೊಳಕೆಯಲ್ಲೇ ಚಿವುಟಬೇಕು -ಕೇರಳಕ್ಕೆ ಸಿದ್ದರಾಮಯ್ಯ ಆಗ್ರಹ

ರಾಜ್ಯಗಳ ಸಂಬಂಧ ಹಾಳು ಮಾಡೋ ಯತ್ನವನ್ನ ಮೊಳಕೆಯಲ್ಲೇ ಚಿವುಟಬೇಕು -ಕೇರಳಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಕಾಸರಗೋಡಿನ ಕೆಲವು ಗ್ರಾಮಗಳ ಹೆಸರನ್ನು ಮಲಯಾಳಿ ಭಾಷೆಗೆ ಕೇರಳ ಸರ್ಕಾರ ಬದಲಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.. ಕೇರಳ ಸಿಎಂ ಪಿಣರಾಯಿ ವಿಜಯನ್​​ಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಭೌಗೋಳಿಕವಾದ ಗಡಿರೇಖೆಯಿದ್ದರೂ ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕವಾದ ಅವಿನಾಭಾವ ಸಂಬಂಧ ಇದೆ. ಗಡಿ ಪ್ರದೇಶದಲ್ಲಿ ಕನ್ನಡಿಗರು ಮತ್ತು ಕೇರಳಿಗರು ಸೋದರ-ಸೋದರಿಯರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ.

ಆದರೆ ಇತ್ತೀಚೆಗೆ ಕಾಸರಗೋಡಿನ ಸ್ಥಳೀಯ ಸಂಸ್ಥೆಗಳು ಅಲ್ಲಿನ ಕೆಲವು ಹಳ್ಳಿಗಳ ಹೆಸರುಗಳನ್ನು ಕನ್ನಡ ಮತ್ತು ತುಳು ಭಾಷೆಯಿಂದ ಮಲೆಯಾಳಿ ಭಾಷೆಗೆ ಬದಲಾಯಿಸುವ ನಿರ್ಣಯ ಕೈಗೊಂಡಿರುವುದು ವಿಷಾದನೀಯ ಬೆಳವಣಿಗೆ.

ಸಾಮಾನ್ಯವಾಗಿ ಗ್ರಾಮಗಳ ಹೆಸರಿನ ಜೊತೆ ಅಲ್ಲಿನ ಸ್ಥಳೀಯರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೆಸರಿನ ಬದಲಾವಣೆಯಿಂದ ತಾಯ್ನಾಡಿನ ಜೊತೆಗಿನ ಅವರ ಕರುಳಬಳ್ಳಿಯ ಸಂಬಂಧವನ್ನು ಕಿತ್ತುಕೊಂಡ ಹಾಗಾಗುತ್ತದೆ. ಹೀಗಿದ್ದರೂ ಕೆಲ ಗುಂಪುಗಳು ಈ ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ. ಮಂಜೇಶ್ವರದ ಕನ್ನಡಪ್ರೇಮಿ ಶಾಸಕ ಎ.ಕೆ.ಎಂ.ಆಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಸರು ಬದಲಾವಣೆಯ ಪ್ರಸ್ತಾಪ ಇಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹವಾಗಿದೆ.

ಕೇರಳದ ಸನ್ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಿ ಉಭಯ ರಾಜ್ಯಗಳ ನಡುವಿನ ಸಂಬಂಧವನ್ನು ಹಾಳುಗೆಡಹುವ ಪ್ರಯತ್ನವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.

blank

 

The post ರಾಜ್ಯಗಳ ಸಂಬಂಧ ಹಾಳು ಮಾಡೋ ಯತ್ನವನ್ನ ಮೊಳಕೆಯಲ್ಲೇ ಚಿವುಟಬೇಕು -ಕೇರಳಕ್ಕೆ ಸಿದ್ದರಾಮಯ್ಯ ಆಗ್ರಹ appeared first on News First Kannada.

Source: newsfirstlive.com

Source link