ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜೊತೆಗೆ ನಾನು ಸದಾ ಕಾಲ ಇರುತ್ತೇನೆ. ಅವರ ಧ್ವನಿಗೆ ಧ್ವನಿಯಾಗಿ ನಾನು ಸದಾ ಕಾಲ ನಿಲ್ಲುವೆ ಎಂದು ವಿಜಯಪುರದಲ್ಲಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಹೊಸ ದಾಖಲೆ

ನಗರದ ಭೂತನಾಳ ಕೆರೆಯ ಬಳಿ ನೂತನ ತ್ರೀಸ್ಟಾರ್ ಹೋಟೆಲ್‍ಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಯತ್ನಾಳ್ ಅವರಿಗೆ ಒಳ್ಳೆಯ ಅವಕಾಶ ಬರಲಿ. ಅವರ ಜೊತೆಗೆ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವದರ ಜೊತೆಗೆ ನಾನು ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾ ಭಾವನೆ ಇದೆ ಎಂದಿದ್ದಾರೆ.

ಕಲಬುರ್ಗಿ ಏರ್‌ಪೋರ್ಟ್‌ಗೆ ಸ್ವಾಗತಕ್ಕಾಗಿ ಆಗಮಿಸದ ಶಾಸಕರು, ಮುಖಂಡರು ವಿಚಾರಕ್ಕೆ ಪ್ರತಿಕ್ರಿಯಿಸಿ ಇದರಲ್ಲಿ ರಾಜಕೀಯ ಏನು ಇಲ್ಲ. ಕೋವಿಡ್ ಕಾರಣದಿಂದ ಕಲಬುರ್ಗಿಯಲ್ಲಿ ಯಾರಿಗೂ ಮಾಹಿತಿ ಕೊಟ್ಟಿರಲಿಲ್ಲ. ಕಾರ್ಯಕರ್ತರಿಗೆ ಮುಖಂಡರಿಗೆ ಮಾಹಿತಿ ಕೊಟ್ಟಿರಲಿಲ್ಲ. ಹಾಗಾಗಿ ಯಾರು ಬರಲಿಲ್ಲ. ಇದರಲ್ಲಿ ರಾಜಕೀಯ ವಿಶೇಷ ಏನು ಇಲ್ಲಾ. ಇನ್ನು ಸಿಎಂ ವಿರುದ್ಧ ರೆಬಲ್ ಆದೆ ಅನ್ನೋ ಕಾರಣಕ್ಕೆ ಆ ರೀತಿ ಏನಿಲ್ಲ ಎಂದು ಹೇಳಿದ್ದಾರೆ.

blank

 

The post ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್ appeared first on Public TV.

Source: publictv.in

Source link