ಆನ್​ಲೈನ್ ID ಬ್ಲಾಕ್ ಮಾಡಿದ್ದ ಶಾಲೆಗಳಿಗೆ ಶಾಕ್; ನ್ಯಾಯಾಂಗ ನಿಂದನೆ ಕೇಸ್ ಹಾಕಲು ಕೋರ್ಟ್​ ಅವಕಾಶ

ಆನ್​ಲೈನ್ ID ಬ್ಲಾಕ್ ಮಾಡಿದ್ದ ಶಾಲೆಗಳಿಗೆ ಶಾಕ್; ನ್ಯಾಯಾಂಗ ನಿಂದನೆ ಕೇಸ್ ಹಾಕಲು ಕೋರ್ಟ್​ ಅವಕಾಶ

ಬೆಂಗಳೂರು: ಆನ್‌ಲೈನ್ ಶಿಕ್ಷಣ ನೀಡಲು ನಿರಾಕರಿಸಿದ ಶಾಲೆಗಳ ವಿರುದ್ಧ ಹೈಕೋರ್ಟ್ ಇಂದು ಅಸಮಾಧಾನ ವ್ಯಕ್ತಪಡಿಸಿತು.

ಖಾಸಗಿ ಶಾಲೆಗಳಿಂದ ಶುಲ್ಕಕ್ಕೆ ಕಿರುಕುಳ‌ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್​.. ಆನ್​​ಲೈನ್ ಶಿಕ್ಷಣ ನೀಡಲು ನಿರಾಕರಿಸಿರೋದು ಸರಿಯಲ್ಲ. ಆನ್​ಲೈನ್​ ಐಡಿ ಬ್ಲಾಕ್ ಮಾಡಿದ ಶಾಲೆಗಳ ವಿರುದ್ಧ ದೂರು ಸಲ್ಲಿಸಲು ಅವಕಾಶ ಕೊಡಲಾಗುತ್ತಿದೆ. ಜೊತೆಗೆ ನ್ಯಾಯಾಂಗ ನಿಂದನೆಗೂ ಅರ್ಜಿ ಸಲ್ಲಿಸಲು ಕೋರ್ಟ್​ ಅವಕಾಶ ನೀಡಿತು.

ಜೊತೆಗೆ ಪೋಷಕರ ಅಹವಾಲು ಕೇಳಿ ಸ್ಪಂದಿಸಲು ಹೈಕೋರ್ಟ್ ಸೂಚನೆ ನೀಡಿತು. ಕಳೆದ ಬಾರಿ ನೀಡಿದ್ದ ಆದೇಶವನ್ನ ಹಲವು ಖಾಸಗಿ ಶಾಲೆಗಳು ಉಲ್ಲಂಘನೆ ಮಾಡಿ ಮಕ್ಕಳ ಆನ್​ಲೈನ್ ಐಡಿ ಬ್ಲಾಕ್ ಮಾಡಿದ್ದವು. ಅಂತಹ ಶಾಲೆಗಳ ವಿರುದ್ಧ ದೂರು ನೀಡುವುದರ ಜೊತೆಗೆ ಶಾಲೆಗಳ ವಿವರಗಳನ್ನೂ ಸಲ್ಲಿಸಲು ಇದೇ ವೇಳೆ ಕೋರ್ಟ್​​ ಸೂಚನೆ ನಿಡಿದೆ.

ವಾದ-ಪ್ರತಿವಾದ ಹೇಗಿತ್ತು?
ಖಾಸಗಿ ಶಾಲೆಗಳಲ್ಲಿನ ಶುಲ್ಕ ನಿಗದಿಗೆ ಕೋರಿದ್ದ ಅರ್ಜಿ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿತು. ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿ.. ರಾಜ್ಯ ಸರ್ಕಾರ ಶೇಕಡಾ 70 ರಷ್ಟು ಶುಲ್ಕ ಮಾತ್ರ ಸ್ವೀಕರಿಸುವಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿತ್ತು. ಸರ್ಕಾರ ಪೋಷಕರು, ಖಾಸಗಿ ಶಾಲೆಗಳೊಂದಿಗೆ ಚರ್ಚಿಸಿ ಈ ಆದೇಶ ಮಾಡಿತ್ತು. ಆದರೆ ಖಾಸಗಿ ಶಾಲೆಗಳು ಈ ಆದೇಶವನ್ನು ಪ್ರಶ್ನಿಸಿದ್ದವು. ಈ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಬಲವಂತದ ಮೂಲಕ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಸೂಚಿಸಿತ್ತು. ಖಾಸಗಿ ಶಾಲೆಗಳೂ ಸಹ ಪೋಷಕರ ಅಹವಾಲು ಪರಿಗಣಿಸಬೇಕೆಂದು ಕೋರ್ಟ್​ ಸೂಚಿಸಿತ್ತು. ಆದರೆ ಶಾಲೆಗಳು ಪೋಷಕರ ಅಹವಾಲನ್ನ ಪರಿಗಣಿಸಲಿಲ್ಲ ಎಂದು ದೂರಿದರು.

ಮಾತ್ರವಲ್ಲ, ಹೈಕೋರ್ಟ್ ಆದೇಶ ಇರೋದ್ರಿಂದ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿಲ್ಲ. ಕೋವಿಡ್ 19ನಿಂದಾಗಿ ಪೋಷಕರೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಪೋಷಕರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೈಕೋರ್ಟ್​ ಅರ್ಜಿ ಸಲ್ಲಿಸಿದೆ ಎಂದರು.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚನೆ ವಿಚಾರವನ್ನ ಪ್ರಸ್ತಾಪಿಸಿದ ಅವರು.. ಸಮಿತಿ ಎರಡೂ ಕಡೆಯ ಮನವಿ ಆಲಿಸಲಿದೆ. ಸಮಿತಿ ನೀಡುವ ಶಿಫಾರಸು ಹೈಕೋರ್ಟ್ ಮುಂದಿಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳೂ ಸ್ಪಂದಿಸಬೇಕು ಎಂದು ಅಡ್ವೊಕೆಟ್ ಜನರಲ್ ವಾದ ಮಂಡಿಸಿದರು.

ಖಾಸಗಿ ಶಾಲೆಗಳು ಒಪ್ಪಿದರೆ ಸಮಸ್ಯೆ ಇರಲ್ಲ
ಮಕ್ಕಳ ಪೋಷಕರು ಸಂಪೂರ್ಣ ಶುಲ್ಕ ಕೊಡುವ ಸ್ಥಿತಿಯಲ್ಲಿಲ್ಲ. ಇದು ಸರ್ಕಾರ, ಶಾಲೆಗಳ ನಡುವಿನ ಹೋರಾಟವಲ್ಲ. ಖಾಸಗಿ ಶಾಲೆಗಳು ಒಪ್ಪಿದರೆ ಈ ಸಮಸ್ಯೆ ಇರೋದಿಲ್ಲ. ಕೊರೊನಾದಿಂದಾಗಿ ಪೋಷಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿ ರಚನೆ ಪ್ರಸ್ತಾಪಿಸಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರದ ಪರ ವಕೀಲರು ಮನವಿ ಮಾಡಿಕೊಂಡರು.

ಹೈಕೋರ್ಟ್​ ಪ್ರಶ್ನೆ
ಶುಲ್ಕ ಕಟ್ಟುವ ಸಾಮರ್ಥ್ಯ ಇರುವವರೂ ಇರಬಹುದು. ಶುಲ್ಕ ಕಟ್ಟಲಾಗದ ಪೋಷಕರೂ ಇರಬಹುದು. ಹೈಕೋರ್ಟ್ ಆದೇಶ ಉಲ್ಲಂಘಿಸಿದ ಶಾಲೆಗಳ ಪಟ್ಟಿ ಕೊಡಿ. ಪೋಷಕರ ಅಹವಾಲು ಪರಿಗಣಿಸದ ಶಾಲೆಗಳ ವಿವರ ಇದೆಯೇ.? ಎಂದು ಈ ವೇಳೆ ಹೈಕೋರ್ಟ್​ ಪ್ರಶ್ನೆ ಮಾಡಿತು.

ನೂರಾರು ಖಾಸಗಿ ಶಾಲೆಗಳು ಆದೇಶ ಉಲ್ಲಂಘಿಸಿವೆ. ಬಿಇಒಗಳ ಬಳಿ ಅಂತಹ ಶಾಲೆಗಳ ವಿವರ ಇದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿದವರ ಕ್ರಮಕ್ಕೆ ಅನುಮತಿ ಕೊಡಿ ಅಂತಾ ಅಡ್ವೊಕೆಟ್ ಜನರಲ್ ಮತ್ತೆ ಮನವಿ ಮಾಡಿಕೊಂಡರು.

ಖಾಸಗಿ ಶಾಲೆಗಳ ಆಕ್ಷೇಪ
ಸರ್ಕಾರದ ವಾದಕ್ಕೆ ಖಾಸಗಿ ಶಾಲೆಗಳ ಆಕ್ಷೇಪ ವ್ಯಕ್ತಪಡಿಸಿ.. ಶಿಕ್ಷಕರು, ಸಿಬ್ಬಂದಿಗೆ ಸಂಬಳ ಪಾವತಿಸಿದ್ದೇವೆ. ಹಲವು ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳಿವೆ. ಈ ಶಾಲೆಗಳ ಪೋಷಕರು ಶುಲ್ಕ ಪಾವತಿಸಲು ಸಿದ್ಧರಿದ್ದಾರೆ. ಹೀಗಾಗಿ ಸಮಿತಿ ರಚನೆ ಪ್ರಸ್ತಾಪಕ್ಕೆ ನಮ್ಮ ವಿರೋಧ ಇದೆ ಎಂದು ಖಾಸಗಿ ಶಾಲೆಗಳ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದರು.

ಶಾಲೆ ಶಿಕ್ಷಕರಿಗೆ ಕೋವಿಡ್ ನಡುವೆಯೂ ಕನಿಷ್ಠ ಸ್ಯಾಲರಿ ನೀಡಬೇಕು. 36 ಸಾವಿರ ಸ್ಕೂಲ್​ಗಳು ರಾಜ್ಯದಲ್ಲಿವೆ. ಆದರೂ ನಾವು ಶಿಕ್ಷಕರಿಗೆ ಪುಲ್ ಸ್ಯಾಲರಿ ಕೊಡುತ್ತಿದ್ದೇವೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂ ಆದೇಶದ ಪ್ರಕಾರ ಫೀ ಫಿಕ್ಸ್ ಅಧಿಕಾರವಿಲ್ಲ. ನಮ್ಮ ವಾಹನಗಳ ಚಾಲನೆ ಮಾಡದೇ ನಿಂತಲ್ಲೇ ಹಾಳಾಗುತ್ತವೆ. ಆನ್ ಲೈನ್ ಕ್ಲಾಸಸ್ ಮಾಡುತ್ತಿದ್ದೇವೆ. ಕೆಲವೊಷ್ಟು ಮಂದಿ ವಿದೇಶಿ ಟೀಚರ್ಸ್ ಇದ್ದು, ಡಾಲರ್ಸ್ ಗಟ್ಟಲೇ ಸ್ಯಾಲರಿ ನೀಡ್ತಿದ್ದೇವೆ. 51 ಸಾವಿರ ಶಿಕ್ಷಕರಿಗೆ ಸ್ಯಾಲರಿ ನೀಡಬೇಕಿದೆ ಎಂದು ವಾದ ಮಂಡಿಸಿದರು.

ನಂತರ ಮಧ್ಯಂತರ ಅರ್ಜಿ ಕುರಿತ ವಿಚಾರಣೆಯನ್ನ ಮುಕ್ತಾಯಗೊಳಿಸಿ, ಆದೇಶವನ್ನ ಕಾಯ್ದಿರಿಸಿದೆ. ಇನ್ನೂ ಖಾಸಗಿ ಶಾಲೆಗಳು ಹಾಕಿದ್ದ ಮುಖ್ಯ ಅರ್ಜಿಗಳು ಬಾಕಿ ಇವೆ. ಅದಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಮುಂದಿನ ವಿಚಾರಣೆಯನ್ನ ಜುಲೈ 22 ರ ಮಧ್ಯಾಹ್ನ 2:30ಕ್ಕೆ ಮುಂದೂಡಿಕೆ ಮಾಡಿತು.

The post ಆನ್​ಲೈನ್ ID ಬ್ಲಾಕ್ ಮಾಡಿದ್ದ ಶಾಲೆಗಳಿಗೆ ಶಾಕ್; ನ್ಯಾಯಾಂಗ ನಿಂದನೆ ಕೇಸ್ ಹಾಕಲು ಕೋರ್ಟ್​ ಅವಕಾಶ appeared first on News First Kannada.

Source: newsfirstlive.com

Source link