‘ಯತ್ನಾಳ್ ಜೊತೆ ನಾನು‌ ಸದಾ ಕಾಲ‌ ಇರ್ತೀನಿ, ಅವ್ರ ಧ್ವನಿಗೆ ಧ್ವನಿಯಾಗುತ್ತೇನೆ’

‘ಯತ್ನಾಳ್ ಜೊತೆ ನಾನು‌ ಸದಾ ಕಾಲ‌ ಇರ್ತೀನಿ, ಅವ್ರ ಧ್ವನಿಗೆ ಧ್ವನಿಯಾಗುತ್ತೇನೆ’

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಅವರನ್ನ ಸಚಿವ ಸಿಪಿ ಯೋಗೇಶ್ವರ್​ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು.

ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವರು.. ಶಾಸಕ ಯತ್ನಾಳ್ ಜೊತೆಗೆ ನಾನು‌ ಸದಾ ಕಾಲ‌ ಇರ್ತೀನಿ. ಯತ್ನಾಳರವರ ಧ್ವನಿಗೆ ಧ್ವನಿಯಾಗುತ್ತೇನೆ. ಅವ್ರ ಜೊತೆಗೆ ನಾನು ಸದಾ ಕಾಲ ನಿಲ್ಲುವೆ. ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಅವರಿಗೆ ಒಳ್ಳೆಯ ಅವಕಾಶ ಬರಲಿ. ಅವರ ಜೊತೆಗೆ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವುದರ ಜೊತೆಗೆ ನಾನು ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾಭಾವನೆ ಇದೆ ಎಂದರು.

ಇನ್ನು ಏರ್‌ಪೋರ್ಟ್‌ಗೆ ಸ್ವಾಗತಕ್ಕಾಗಿ ಶಾಸಕರು, ಮುಖಂಡರು ಬಾರದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ.. ಇದರಲ್ಲಿ ರಾಜಕೀಯ ಏನು ಇಲ್ಲ. ಕೋವಿಡ್ ಕಾರಣದಿಂದ ಕಲಬುರಗಿಯಲ್ಲಿ ಯಾರಿಗೂ ಮಾಹಿತಿ ಕೊಟ್ಟಿರಲಿಲ್ಲ. ಕಾರ್ಯಕರ್ತರಿಗೆ ಮುಖಂಡರಿಗೆ ಮಾಹಿತಿ ಕೊಟ್ಟಿರಲಿಲ್ಲ. ಹಾಗಾಗಿ ಯಾರು ಬರಲಿಲ್ಲ. ಇದರಲ್ಲಿ ರಾಜಕೀಯ ವಿಶೇಷ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.

The post ‘ಯತ್ನಾಳ್ ಜೊತೆ ನಾನು‌ ಸದಾ ಕಾಲ‌ ಇರ್ತೀನಿ, ಅವ್ರ ಧ್ವನಿಗೆ ಧ್ವನಿಯಾಗುತ್ತೇನೆ’ appeared first on News First Kannada.

Source: newsfirstlive.com

Source link