ವೆರೈಟಿ ವೆರೈಟಿ ರೂಪ ಪಡೆದುಕೊಳ್ತಿದೆ ಮಾರಿ; ಡೆಲ್ಟಾ ಪ್ಲಸ್​​ ಆಯ್ತು.. ಸರತಿಯಲ್ಲಿವೆ ಇನ್ನೂ 4 ರೂಪಾಂತರಿ

ವೆರೈಟಿ ವೆರೈಟಿ ರೂಪ ಪಡೆದುಕೊಳ್ತಿದೆ ಮಾರಿ; ಡೆಲ್ಟಾ ಪ್ಲಸ್​​ ಆಯ್ತು.. ಸರತಿಯಲ್ಲಿವೆ ಇನ್ನೂ 4 ರೂಪಾಂತರಿ

ಮಳೆ ನಿಂತರೂ ಹನಿ ನಿಲ್ಲಲ್ಲ ಅನ್ನೋ ಹಾಗೆ.. ದೇಶದಲ್ಲಿ ಕೊರೊನಾ ಸೋಂಕು ಕೊಂಚ ನಿಯಂತ್ರಣಕ್ಕೆ ಬಂದಿದ್ದರೂ.. ಅದರ ರೂಪಗಳು ಮಾತ್ರ ಇನ್​ಸ್ಟಾಲ್ ಮೆಂಟ್ ಅನ್ನೋ ರೀತಿ ಬರ್ತಾನೇ ಇವೆ.. ಡೆಲ್ಟಾ ಪ್ಲಸ್ ಕಮ್ಮಿ ಆಯ್ತು ಅನ್ನೋ ಹಾಗೆ ಲೈನ್​ ಅಲ್ಲಿ ಇನ್ನೂ ನಾಲ್ಕು ವೆರೈಟಿ ವೈರಸ್ ನಿಂತಿವೆ..! ಅವ್ಯಾವವು ಗೊತ್ತಾ?!

ದೇಶದಲ್ಲಿ ಕೊರೊನಾ ಸೋಂಕು ಎರಡನೇ ಅಲೆ ದಾಟಿ.. ಇಳಿತ ಕಾಣ್ತಿದೆ.. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ದೊಡ್ಡ ಪ್ರಮಾಣದ ಸೋಂಕು ಕಾಣಿಸಿಕೊಂಡು ರಾದ್ಧಾಂತವನ್ನೇ ಸೃಷ್ಟಿಸಿಬಿಟ್ಟಿತ್ತು. ಆ್ಯಕ್ಟಿವ್ ಕೇಸ್​ ಸಂಖ್ಯೆ ಹತ್ತಿರ ಹತ್ತಿರ 30 ಲಕ್ಷದ ಗಡಿ ತನಕ ರೀಚ್ ಆಗಿತ್ತು.. ಅಷ್ಟೇ ಅಲ್ಲ ಒಂದೇ ದಿನಕ್ಕೆ 4 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿ ದೊಡ್ಡ ದಾಖಲೆಯೇ ಸೃಷ್ಟಿಯಾಗಿತ್ತು.. ಇಂಥ ಸನ್ನಿವೇಶ ಕಳೆದು ದೇಶದಲ್ಲಿ ಸೋಂಕಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಕೆಲವು ರಾಜ್ಯಗಳಂತೂ ಲಾಕ್​ಡೌನ್​​ ತೆರವುಗೊಳಿಸಿವೆ.. ಇಂಥ ಸನ್ನಿವೇಶದಲ್ಲೇ ಮತ್ತೊಂದು ಆತಂಕ ವಕ್ಕರಿಸಿದೆ..!

ಹೌದು.. ಇಂದು ಒಂದು ವಿಷಯವಂತೂ ಕನ್ಫರ್ಮ್​ ಆಗಿದೆ.. ಅದೆಂದ್ರೆ ದೇಶದಲ್ಲಿ ಎರಡನೇ ಅಲೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಹರಡೋಕೆ ಕಾರಣವಾಗಿದ್ದೇ ಡೆಲ್ಟಾ ಅನ್ನೋ ಕೊರೊನಾ ರೂಪಾಂತರಿ ವೈರಸ್ ಅನ್ನೋದು.. ಇದನ್ನ B.1.617.2 ಅಂತಾ ಕೂಡ ಕರೆಯಲಾಗುತ್ತೆ. ಪ್ರಾರಬ್ಧಕ್ಕೆ ಈ ರೂಪಾಂತರಿ ನಮ್ಮದೇಶದಲ್ಲೇ ಮೊದಲ ಬಾರಿ ಪತ್ತೆಯಾಗಿದ್ದಷ್ಟೇ ಅಲ್ಲ.. ಸಾವಿನ ಪ್ರಮಾಣವನ್ನೂ ಹೆಚ್ಚಿಸಿತ್ತು.. ಸದ್ಯಕ್ಕೆ ಡೆಲ್ಟಾ ಅಂತಾ ವಿಶ್ವ ಆರೋಗ್ಯ ಸಂಸ್ಥೆಯಿಂದ ನಾಮಕರಣ ಮಾಡಿಸಿಕೊಂಡಿರೋ ಈ ರೂಪಾಂತರಿ 80 ಕ್ಕೂ ಹೆಚ್ಚು ದೇಶಗಳಲ್ಲಿ ರಾಷ್ಧಾಂತವನ್ನೇ ಸೃಷ್ಟಿಸಿದೆ. ಸಂಪೂರ್ಣ ಮಾಸ್ಕ್​ ತೆರವುಗೊಳಿಸಿ ಕೊರೊನಾ ಸೋಂಕನ್ನ ಗೆದ್ದೆವು ಎಂದುಕೊಂಡಿದ್ದ ಇಸ್ರೇಲ್​ ಮತ್ತೆ ಮಾಸ್ಕ್ ತೊಡುವಂತೆ ಮಾಡಿದೆ. ನಮ್ಮ ದೇಶದಲ್ಲಿ ಇದರ ಹಾವಳಿ ತಗ್ಗಿದೆ.. ಆದ್ರೆ ಇದರ ಮತ್ತೊಂದು ರೂಪಾಂತರ ಆತಂಕ ಸೃಷ್ಟಿಸಿದ್ದು ಅದಕ್ಕೆ ಡೆಲ್ಟಾ ಪ್ಲಸ್ ಅಂತಾ ಹೆಸರು ಕೊಡಲಾಗಿದೆ.. ಅಷ್ಟಕ್ಕೂ ಈ ಡೆಲ್ಟಾ ಪ್ಲಸ್ ಅಂದ್ರೇನು ಅಂತಾ ನೋಡೋದಾದ್ರೆ.. ಅದು ಭಾರತದಲ್ಲಿ ಮೊದಲ ಬಾರಿ ಕಂಡು ಬಂದಿದ್ದ ಡೆಲ್ಟಾ ಮತ್ತು ದಕ್ಷಿಣ ಆಫ್ರೀಕಾದಲ್ಲಿ ಮೊದಲ ಬಾರಿಗೆ ಕಂಡು ಬಂದಿದ್ದ KF17N ಹೆಸರಿನ ರೂಪಾಂತರಿ ವೈರಸ್​ನ ಸಮ್ಮಿಲನದಿಂದ ಹುಟ್ಟಿಕೊಂಡಿರೋ ತಳಿ.. ಇದೇ ಕಾರಣದಿಂದಾಗಿ ಇದು ವೇಗವಾಗಿಯೂ ಹರಡಬಲ್ಲದು ಮತ್ತು ರೋಗ ನಿರೋಧಕ ಶಕ್ತಿಯನ್ನೂ ನಿಷ್ಕ್ರಿಯಗೊಳಿಸಬಹುದು..

ಮೂರನೆ ಅಲೆಗೆ ಕಾರಣ ಆಗುತ್ತಾ ಡೆಲ್ಟಾ ಪ್ಲಸ್?
ದೇಶದಲ್ಲಿ 50ಕ್ಕೂ ಹೆಚ್ಚು ಜನರಲ್ಲಿ ಡೆಲ್ಟಾ ಪ್ಲಸ್ ಪತ್ತೆ

yes.. ಇದೇ ಡೆಲ್ಟಾ ಪ್ಲಸ್ ವೈರಸ್.. ಆತಂಕ ಹುಟ್ಟುಹಾಕಿದೆ. ಇದೀಗ ಡೆಲ್ಟಾ ಪ್ಲಸ್ ತಳಿ ಕೂಡ ಆತಂಕ ಸೃಷ್ಟಿಸುತ್ತಿದೆ.. ಜೊತೆಗೆ 3 ನೇ ಅಲೆಗೆ ಇದೇ ಕಾರಣವಾಗಬಲ್ಲದಾ? ಅನ್ನೋ ಭಯ ಮಿಶ್ರಿತ ಪ್ರಶ್ನೆಯನ್ನೂ ಹುಟ್ಟು ಹಾಕುತ್ತಿದೆ.

ಸದ್ಯ ದೇಶದಲ್ಲಿ 50ಕ್ಕೂ ಹೆಚ್ಚು ಜನರಲ್ಲಿ ಡೆಲ್ಟಾ ಪ್ಲಸ್ ವೇರಿಯಂಟ್ ಕಂಡು ಬಂದಿದೆ.. ಈಗಾಗಲೇ ಕನಿಷ್ಠ ಮೂರು ಜನರು ಇದಕ್ಕೆ ಬಲಿಯಾಗಿದ್ದಾರೆ. ಕರ್ನಾಟಕದಲ್ಲೂ ಕೆಲವರಲ್ಲಿ ಈ ಸೋಂಕು ಪತ್ತೆಯಾಗಿದೆ ಅಂತಾ ಹೇಳಲಾಗ್ತಿದೆ. ಇದೇ ಕಾರಣದಿಂದಾಗಿ ಬೇರೆ ರಾಜ್ಯದಿಂದ ಬರೋರ ಡೆಲ್ಟಾ ಪ್ಲಸ್ ವೈರಸ್ ನೆಗೆಟಿವ್ ರಿಪೋರ್ಟ್​ ಕಡ್ಡಾಯಗೊಳಿಸುವ ಹಂತದಲ್ಲಿ ಕರ್ನಾಟಕ ಸರ್ಕಾರ ಇದೆ ಅನ್ನೋ ಮಾಹಿತಿಗಳು ಲಭ್ಯವಾಗ್ತಿವೆ.. ಜೊತೆಗೆ ಜಿನೋಮಿಕ್​ ಸ್ಟಡಿಯನ್ನ ಕೂಡ ಕೇಂದ್ರ ಸರ್ಕಾರ ಹೆಚ್ಚಿಸುತ್ತಿದೆ..

ಒಂದೆಡೆ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ಹಾವಳಿಯೇ ಸಾಕು ಸಾಕು ಅನ್ನೋವಂಥ ಸನ್ನಿವೇಶದಲ್ಲಿ ತಜ್ಞರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇವೆರಡು ಕೊರೊನಾ ವೈರಸ್ ತಳಿ ಮಾತ್ರವಲ್ಲ.. ಬರೋಬ್ಬರಿ ಇನ್ನೂ 4 ಭಯಾನಕ ಕೊರೊನಾ ವೈರಸ್​ ತಳಿಗಳು ಸರತಿಯಲ್ಲಿ ನಿಂತಿದ್ದು.. ಯಾವಾಗ ಬೇಕಾದ್ರೂ ಅವು ಅಟ್ಯಾಕ್ ಮಾಡಬಹುದು ಅಂತಾ ಮಾಹಿತಿ ನೀಡಿದ್ದಾರೆ..!

ಯಾವವು ಗೊತ್ತಾ ಆ ನಾಲ್ಕು ತಳಿಗಳು? 

ತಳಿ ನಂಬರ್ 1: B.1.617.3
ತಳಿ ನಂಬರ್ 1: B.1.1.318
ತಳಿ ನಂಬರ್ 1: ಲಾಂಬ್ಡಾ
ತಳಿ ನಂಬರ್ 1: ಕಪ್ಪಾ

ಹೌದು.. ದೇಶಕ್ಕೆ ಭಾರತಕ್ಕೆ ಇನ್ನೂ 4 ಹೊಸ ತಳಿಗಳು ಕಾಟ ಕೊಡುವ ಸಾಧ್ಯತೆಗಳಿವೆ. ಯಾವವು ಗೊತ್ತಾ ಆ ನಾಲ್ಕು ತಳಿಗಳು ಅಂತಾ ನೋಡೋದಾದ್ರೆ.. B.1.617.3 ಸೇರಿದಂತೆ B.1.1.318, ಲಾಂಬ್ಡಾ ಹಾಗೂ ಕಪ್ಪಾ ಹೆಸರಿನ ಈ ತಳಿಗಳು ಆತಂಕ ಸೃಷ್ಟಿಸಿವೆ.. ಇದೇ ಕಾರಣದಿಂದಾಗಿ ಇವುಗಳ ಮೇಲೆ ನಿಗಾ ವಹಿಸಲಾಗಿದೆ..!

ಈ ತಳಿಗಳ ಬಗ್ಗೆ ಯಾಕಿಷ್ಟು ಆತಂಕ?
ಭಾರತದಲ್ಲಿ ಕಾಣಿಸಿಕೊಂಡಿವೆಯಾ ಈ ಹೆಮ್ಮಾರಿ?
ಇವುಗಳ ವಿಶೇಷತೆಯಾದ್ರೂ ಏನು?

ಭಾರತಕ್ಕೆ ಕಾಟ ಕೊಡುವ ಸಾಧ್ಯತೆಗಳನ್ನು ಹುಟ್ಟುಹಾಕಿರೋ B.1.617.3, B.1.1.318, ಲಾಂಬ್ಡಾ ಹಾಗೂ ಕಪ್ಪಾ ತಳಿಯ ಕೊರೊನಾ ವೈರಸ್ ಏನು ಮಾಡಬಲ್ಲವು? ಅನ್ನೋ ಪ್ರಶ್ನೆ ಸಹಜ. ಇದೇ ನಿಟ್ಟಿನಲ್ಲಿ ನೋಡಿದಾಗ ಭಯ ಮತ್ತಷ್ಟು ಹೆಚ್ಚುತ್ತೆ. ಯಾಕಂದ್ರೆ B.1.1.318 ತಳಿ ಬರೋಬ್ಬರಿ 14 ಬಾರಿ ರೂಪಾಂತರಗೊಳ್ಳುವ ಸಾಮರ್ಥ್ಯ ಹೊಂದಿದೆ. ಈಗಾಗಲೇ B.1.617.3, ಹಾಗೂ B.1.1.318 ಭಾರತದಲ್ಲಿ ಕಾಣಿಸಿಕೊಂಡಿವೆ. ಆದ್ರೆ, ಅದೃಷ್ಟವಶಾತ್ ಲಾಂಬ್ಡಾ ಮತ್ತು ಕಪ್ಪಾ ರೂಪಾಂತರಿಯ ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ವಿದೇಶಗಳಿಂದ ಬರುವವರಿಂದ ಲಾಂಬ್ಡಾ ಸೋಂಕು ಹರಡಬಹುದು. ಹೀಗಾಗಿ ಹೆಚ್ಚೆಚ್ಚು ಜೀನೋಮ್​ ಸೀಕ್ವೆನ್ಸಿಂಗ್​​ ನಡೆಸಿ ಅಂತಾ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.

ರೂಪಾಂತರಿಗಳಿಂದ 3 ನೇ ಅಲೆ ಆತಂಕ
ICMR ಕೊಟ್ಟಿರೋ ಮಾಹಿತಿ ಎಂಥದ್ದು?

ಡೆಲ್ಟಾ. ಡೆಲ್ಟಾ ಪ್ಲಸ್, ಜೊತೆಗೆ ಈ ನಾಲ್ಕು ರೂಪಾಂತರಿಗಳೇ ದೇಶದಲ್ಲಿ 3 ನೇ ಅಲೆ ಸೃಷ್ಟಿಗೆ ಕಾರಣವಾಗಬಲ್ಲವಾ? ಆತಂಕ ಇಂದು ತಜ್ಞರನ್ನು ಕಾಡುತ್ತಿದೆ. ಒಂದೆಡೆ ವ್ಯಾಕ್ಸಿನೇಷನ್​ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ರೂ 3 ನೇ ಅಲೆ ಆತಂಕ ಮಾತ್ರ ಕಡಿಮೆಯಾಗಿಲ್ಲ.. ICMR ಅಧ್ಯಯನದ ಪ್ರಕಾರ ದೇಶದಲ್ಲಿ 3ನೇ ಅಲೆ ಡಿಸೆಂಬರ್​ ವೇಳೆ ಬರಬಹುದು ಅಂತಾ ಹೇಳಾಗ್ತಿದೆ. ಸದ್ಯ ದೇಶದಲ್ಲಿ ಶೇ.22ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಮೂರನೇ ಅಲೆಗೂ ಮುಂಚೆ ನಮಗೆ 6-8 ತಿಂಗಳು ಸಮಯ ಸಿಗಲಿದ್ದು, ಅಷ್ಟರೊಳಗೆ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಅಂತಾ ಕೊರೊನಾ ಕಾರ್ಯಪಡೆ ಮುಖ್ಯಸ್ಥ ಡಾ. ಎನ್. ಕೆ. ಅರೋರಾ ತಿಳಿಸಿದ್ದಾರೆ.

ಇನ್ನೊಂದೆಡೆ, ರಾಜ್ಯದಲ್ಲಿ ಈಗಾಗಲೇ 3ನೇ ಅಲೆ ಕುರಿತು ಡಾ. ದೇವಿ ಪ್ರಸಾದ್​ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಕುರಿತು ಸರ್ಕಾರ ಕೂಡ ಸಕಲ ಸಿದ್ದತೆ ಮಾಡಿಕೊಳ್ತಿದ್ದು, ಈ ಹಿಂದೆ ಕೊರೊನಾ ನಿರ್ವಹಣೆಗೆ ರಚಿಸಿದ್ದ 5 ಸಚಿವರ ತಂಡವನ್ನ ರದ್ದುಪಡಿಸಿ, ಮತ್ತೊಂದು ತಂಡ ರಚಿಸೋಕೆ ಕೂಡ ಸರ್ಕಾರ ಮುಂದಾಗಿದೆ.

ಒಟ್ಟಿನಲ್ಲಿ ಹೀಗಾಗಿ ಸರ್ಕಾರಗಳು ಲಾಕ್​ಡೌನ್ ಸಡಿಲಿಸಿದ್ರೂ.. ಅವರು ಡೆಲ್ಟಾ ಪ್ಲಸ್ ನಿಯಂತ್ರಣಕ್ಕೆ ನಿಯಮಗಳನ್ನು ಜಾರಿಗೆ ತರ್ತಾ ಇದ್ರೂ.. ಉಳಿದ ನಾಲ್ಕು ತಳಿಗಳ ಬಗ್ಗೆ ಜೀನೋಮ್ ಸ್ಟಡಿಗೆ ಮುಂದಾಗ್ತಿದ್ರೂ.. ಕೊರೊನಾ ಆತಂಕ ಮಾತ್ರ ದೂರವಾಗಿಲ್ಲ.. ಇನ್​ಫ್ಯಾಕ್ಟ್​ ಕೊರೊನಾ ಅನ್ನೋ ವೈರಸ್ ಇನ್ನೂ ಇಲ್ಲವಾಗಿಲ್ಲ.. ಹೀಗಾಗಿ, ಸದ್ಯ ಜನರೇ ಎಚ್ಚರಗೊಳ್ಳಬೇಕಿದೆ.. ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಪಣ ತೊಡಬೇಕಿದೆ.. ಮಾಸ್ಕ್​ ಬಳಕೆಯನ್ನ ಮುಂದುವರೆಸಲೇಬೇಕಿದೆ.. ಎಲ್ಲರೂ ವ್ಯಾಕ್ಸಿನ್ ಅನ್ನು ಪಡೆಯಲೇ ಬೇಕಿದೆ.. .. ಜೊತೆಗೆ ಹ್ಯಾಂಡ್​ ಸ್ಯಾನಿಟೈಸೇಷನ್​​, ಕೈ ತೊಳೆಯುವಂಥದ್ದು ಮುಂತಾದ ಕ್ರಮಗಳನ್ನು ಅನುಸರಿಸಬೇಕಿದೆ. ಒಟ್ಟಿನಲ್ಲಿ ಈ ಬಾರಿ ಜನರೇ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕಿದೆ..!

ನೋಡಿದ್ರಲ್ಲ.. ಹೇಗೆ ಜನರು ಚಾಪೆ ಕೆಳಗೆ ನುಸಿಳಿದ್ರೆ.. ಈ ಕೊರೊನಾ ವೈರಸ್ ತಳಿಗಳು ರಂಗೋಲಿ ಕೆಳಗೆ ನುಸುಳಲು ಯತ್ನಿಸ್ತಾ ಇರೋದ್ರಿಂದ.. ಕಣ್ಣಿಗೆ ಕಾಣದ.. ಮನುಷ್ಯ ದೇಹ ಸಿಗದೇ ಇದ್ರೆ ಸತ್ತೇ ಹೋಗುವ ಆ ವೈರಸ್​ಗೆ ಇಷ್ಟು ಹಠ ಇರಬೇಕಾದ್ರೆ.. ಮನುಷ್ಯರಿಗೆ ಎಷ್ಟಿರಬೇಕು ಅಲ್ವಾ? ಕೊರೊನಾ ಅಂತ್ಯಕ್ಕೆ ಮನುಷ್ಯ ನಿರ್ಧರಿಸಿದ್ರೆ ಅದಕ್ಕೆ ಉಳಿಗಾಲ ಏನಾದ್ರೂ ಇದೆಯಾ?!

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

 

The post ವೆರೈಟಿ ವೆರೈಟಿ ರೂಪ ಪಡೆದುಕೊಳ್ತಿದೆ ಮಾರಿ; ಡೆಲ್ಟಾ ಪ್ಲಸ್​​ ಆಯ್ತು.. ಸರತಿಯಲ್ಲಿವೆ ಇನ್ನೂ 4 ರೂಪಾಂತರಿ appeared first on News First Kannada.

Source: newsfirstlive.com

Source link