ACB ರಚನೆಯಲ್ಲಿ ಅಲ್ಪ ಬದಲಾವಣೆ ತಂದು ಮುಂದುವರಿಸ್ತೇವೆ -ಹೈಕೋರ್ಟ್​ಗೆ ಸರ್ಕಾರ ಪ್ರಮಾಣ ಪತ್ರ

ACB ರಚನೆಯಲ್ಲಿ ಅಲ್ಪ ಬದಲಾವಣೆ ತಂದು ಮುಂದುವರಿಸ್ತೇವೆ -ಹೈಕೋರ್ಟ್​ಗೆ ಸರ್ಕಾರ ಪ್ರಮಾಣ ಪತ್ರ

ಬೆಂಗಳೂರು: ರಾಜ್ಯದ ಎಸಿಬಿ ರಚನೆಯನ್ನ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್​ ನಡೆಸಿತು.

ಈ ವೇಳೆ ಎಸಿಬಿಯನ್ನ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಜೊತೆಗೆ ಎಸಿಬಿ ರಚನೆಯಲ್ಲಿ ಅಲ್ಪ ಬದಲಾವಣೆ ಮಾಡಿದ್ದಾಗಿ ಹೈಕೋರ್ಟ್​ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಪ್ರಮಾಣಪತ್ರ ಸಲ್ಲಿಸಿದರು.

ಎಸಿಬಿ ರಚನೆ ಆದೇಶದ ಸೆಕ್ಷನ್ 5ಅನ್ನು (ಸೆಕ್ಷನ್ 5, ಭ್ರಷ್ಟರ ವಿರುದ್ಧ ದೂರು ನೀಡಲು ಪೂರ್ವಾನುಮತಿ ಪಡೆಯಬೇಕು) ರದ್ದುಪಡಿಸಲಾಗಿದೆ. ಈಗ ಅನುಮತಿಯ ಅವಶ್ಯಕತೆ ಇಲ್ಲದೇ ದೂರು ನೀಡಬಹುದು. ಅಲ್ಲದೇ ಎಸಿಬಿಯ ಎಡಿಜಿಪಿ ಕಾಲಾವಧಿ 2 ವರ್ಷ ನಿಗದಿ ಮಾಡಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿದರು. ಇನ್ನು ಸರ್ಕಾರದ ಈ ಪ್ರಮಾಣಪತ್ರಕ್ಕೆ ಲೋಕಾಯುಕ್ತ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

‘ಈಗಲೂ ಎಸಿಬಿ ಸಿಎಂ ಅಧೀನದಲ್ಲಿಯೇ ಮುಂದುವರಿಕೆಯಾಗಲಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆಗೆ ಸ್ವತಂತ್ರ ಅಧಿಕಾರವಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತನಿಖೆಗೆ ಸ್ವತಂತ್ರ ತನಿಖಾ ಸಂಸ್ಥೆಯಿಲ್ಲ. ಲೋಕಾಯುಕ್ತ ಸಂಸ್ಥೆಗೆ ತನಿಖಾಧಿಕಾರ ನೀಡಿಲ್ಲ ಎಂದು ಹೈಕೋರ್ಟ್​ಗೆ ಅರ್ಜಿದಾರರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಹೆಚ್ಚಿನ ವಿಚಾರಣೆಯನ್ನ ಜೂ‌ನ್ 9ಕ್ಕೆ ಹೈಕೋರ್ಟ್ ಮುಂದೂಡಿತು.

The post ACB ರಚನೆಯಲ್ಲಿ ಅಲ್ಪ ಬದಲಾವಣೆ ತಂದು ಮುಂದುವರಿಸ್ತೇವೆ -ಹೈಕೋರ್ಟ್​ಗೆ ಸರ್ಕಾರ ಪ್ರಮಾಣ ಪತ್ರ appeared first on News First Kannada.

Source: newsfirstlive.com

Source link