ಯುವ ಕಾಂಗ್ರೆಸ್​ ಘಟಕದ ಅಧ್ಯಕ್ಷ ಪೈಪೋಟಿ ಅಂತ್ಯ.. ಇಬ್ಬರು ನಾಯಕರ ಮುಂದೆ ಹೊಸ ಸೂತ್ರ!

ಯುವ ಕಾಂಗ್ರೆಸ್​ ಘಟಕದ ಅಧ್ಯಕ್ಷ ಪೈಪೋಟಿ ಅಂತ್ಯ.. ಇಬ್ಬರು ನಾಯಕರ ಮುಂದೆ ಹೊಸ ಸೂತ್ರ!

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟದ ಜಟಾಪಟಿ ಇತ್ಯರ್ಥಕ್ಕೆ ಕಾಂಗ್ರೆಸ್​ ಹೊಸ ಸೂತ್ರವನ್ನ ಪ್ರಸ್ತಾಪಿಸಿದೆ. ರಕ್ಷಾ ರಾಮಯ್ಯ ಮತ್ತು ನಲಪಾಡ್​ ನಡುವಿನ ಪೈಪೋಟಿಗೆ ಅಂತ್ಯ ಹಾಡುವ ಮುನ್ಸೂಚನೆಯನ್ನ ಕಾಂಗ್ರೆಸ್​ ನೀಡಿದೆ.

ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯಗೆ ಒಂದೂವರೆ ವರ್ಷ ಹಾಗೂ ನಲಪಾಡ್​ಗೆ ಒಂದೂವರೆ ವರ್ಷ ಅಧ್ಯಕ್ಷ ಪಟ್ಟ ನೀಡಲು ಕಾಂಗ್ರೆಸ್​ ನಿರ್ಧರಿಸಿದೆ. ಈ ಸೂತ್ರವನ್ನ ಮೊದಲು‌ ಸಿದ್ದರಾಮಯ್ಯರ ಮುಂದೆ ಸೂತ್ರ ಬಿ.ವಿ. ಶ್ರೀನಿವಾಸ್ ಹಾಗೂ ಕೃಷ್ಣ ಅಲ್ಲವಾರು ವಿವರಿಸಿದ್ದಾರೆ.

ಅದಕ್ಕೆ ಡಿ.ಕೆ.ಶಿವಕುಮಾರ್ ಬಳಿ ಮಾತನಾಡಿ ನಂತರ ನೋಡೋಣ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್ ಭೇಟಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ನಿಯೋಗ ಆಗಮಿಸಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ‌ ಒಪ್ಪಿದರೆ ರಕ್ಷಾ ರಾಮಯ್ಯ ಹಾಗೂ ನಲಪಾಡ್ ಇಬ್ಬರಿಗೂ ತಲಾ ಒಂದೂವರೆ ವರ್ಷ ಅಧಿಕಾರ ಹಂಚಿಕೆ ಗ್ಯಾರಂಟಿ ಆಗಲಿದೆ.

The post ಯುವ ಕಾಂಗ್ರೆಸ್​ ಘಟಕದ ಅಧ್ಯಕ್ಷ ಪೈಪೋಟಿ ಅಂತ್ಯ.. ಇಬ್ಬರು ನಾಯಕರ ಮುಂದೆ ಹೊಸ ಸೂತ್ರ! appeared first on News First Kannada.

Source: newsfirstlive.com

Source link