ಇಂದಿನಿಂದ ಬಂಡಿಪುರದಲ್ಲಿ ಸಫಾರಿ ಪುನರಾರಂಭ

ಇಂದಿನಿಂದ ಬಂಡಿಪುರದಲ್ಲಿ ಸಫಾರಿ ಪುನರಾರಂಭ

ಚಾಮರಾಜನಗರ: ಲಾಕ್​​ಡೌನ್ ಹಿನ್ನೆಲೆಯಲ್ಲಿ ಸ್ಥಬ್ಧವಾಗಿದ್ದ ಪ್ರವಾಸೋದ್ಯಮ ಮತ್ತೆ ಮೇಳೈಸಲಿದೆ. ಇಂದಿನಿಂದ ಸರ್ಕಾರದ ಕಡೆಯಿದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರವಾಸಿಗರಿಗೆ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ.

ಸದ್ಯಕ್ಕೆ ಕೌಂಟರ್​​ನಲ್ಲಿ ಟಿಕೆಟ್ ಪಡೆದು ಸಫಾರಿ ಮಾಡಲು ಅವಕಾಶವಿದೆ ಅಂತ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್​ ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲ ಪ್ರವಾಸಿಗರು ಆನ್​ಲೈನ್​ನಲ್ಲಿ ಬುಕ್ಕಿಂಗ್​ ಮಾಡಿಕೊಂಡು ಸಫಾರಿ ವೀಕ್ಷಣೆ ಮಾಡಬಹುದು.

The post ಇಂದಿನಿಂದ ಬಂಡಿಪುರದಲ್ಲಿ ಸಫಾರಿ ಪುನರಾರಂಭ appeared first on News First Kannada.

Source: newsfirstlive.com

Source link