ಚೀನಾ ಗಡಿಯಲ್ಲಿ 4 ಲಕ್ಷ ಸೈನಿಕರು ಮುಖಾಮುಖಿ; ಹಿಂದೆಂದೂ ನಡೆಯದ್ದು ಈ ಬಾರಿ ನಡೆದು ಹೋಗುತ್ತಾ?

ಚೀನಾ ಗಡಿಯಲ್ಲಿ 4 ಲಕ್ಷ ಸೈನಿಕರು ಮುಖಾಮುಖಿ; ಹಿಂದೆಂದೂ ನಡೆಯದ್ದು ಈ ಬಾರಿ ನಡೆದು ಹೋಗುತ್ತಾ?

ಇತಿಹಾಸದಲ್ಲೇ ಮೊದಲ ಬಾರಿ ಚೀನಾ ಬಾರ್ಡ್​​ರ್​ನಲ್ಲಿ ಬರೋಬ್ಬರಿ 4 ಲಕ್ಷ ಸೈನಿಕರು ಮುಖಾಮುಖಿಯಾಗಿದ್ದಾರೆ.. ಚೀನಿ ಸೇರು ಅಂದ್ರೆ ಭಾರತ ಸವ್ವಾ ಸೇರು ಅಂತಾ ಮಿರರ್​ ಡೆಪ್ಲಾಯ್​ಮೆಂಟ್​ ಮಾಡ್ತಿದೆ.. ಇದು ಇಷ್ಟೇನಾ? ಅಂದ್ರೆ ಖಂಡಿತ ಉತ್ತರ ಹೇಳೋಕ್ಕಿಂತ ನೋಡಿದಾಗಲೇ ಗೊತ್ತಾಗುತ್ತೆ.. ಅಷ್ಟಕ್ಕೂ ಇಲ್ಲಿ ಏನಾಗ್ತಿದೆ?

blank

ಚೀನಾ.. ಈ ದೇಶದ ವಿಶ್ವ ಶಾಂತಿಗೆ ಏನು ಕೊಡುಗೆ ಕೊಟ್ಟಿದೆಯೋ ಗೊತ್ತಿಲ್ಲ.. ವಿಶ್ವದ ಅಶಾಂತಿಗೆ.. ಸಾವಿಗೆ.. ನೋವಿಗೆ.. ಸಾಕು ಸಾಕು ಅನ್ನೋವಷ್ಟು ಬೊಗಸೆ ತುಂಬಿ ನಿರಂತರವಾಗಿ ಕೊಡುಗೆ ನೀಡುತ್ತಲೇ ಇದೆ.. ಅಸಂಖ್ಯೆ ವೈರಸ್​​ಗಳನ್ನ ಬಿಟ್ಟು ಜನ ಜೀವವನ್ನೇ ಬಲಿ ಪಡೆಯೋದು, ಕೆಮಿಕಲ್​​ಗಳೇ ತುಂಬಿದ ಮಕ್ಕಳ ಆಟಿಕೆಗಳನ್ನು ಕೊಟ್ಟು ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗೋದು.. ಸಲಾಮಿ ಸ್ಲೈಸಿಂಗ್ ಅನ್ನೋ ಪ್ರಕ್ರಿಯೆ ಮೂಲಕ ಕಂಡ ಕಂಡ ದೇಶಗಳ ಜಮೀನು ದೋಚೋದು.. ಸಾಲ ಕೊಟ್ಟು ಭೂಮಿಯನ್ನೇ ಕಬಳಿಸೋದು.. ಇದು ಅತ್ಯಂತ ಸಹಜ ಅನ್ನೋವಂಥ ನಡುವಳಿಕೆ ಚೀನಾದ್ದು.. ವಿಶೇಷ ಅಂದ್ರೆ ಚೀನಿಯರ ಪ್ರಕಾರ ಇದೇ ಶಾಂತಿ, ಆರೋಗ್ಯ, ಭಾಗ್ಯವನ್ನು ಕಲ್ಪಿಸೋದು..

ಇಂಥದ್ದೊಂದು ಚೀನಾಕ್ಕೆ ಅಂಥದ್ದೊಂದು ಪಾಠ ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಅಂತ ಅವರೇ ಭಾವಿಸಿರಲಿಲ್ಲ ಅನಿಸುತ್ತೆ.. ಆದ್ರೆ ಅಂಥದ್ದೊಂದು ಪಾಠವನ್ನ ಭಾರತ ಕಲಿಸಿದೆ.. ಆದ್ರೂ.. ನೆಲದಲ್ಲೇ ತೆವಳಿದ್ರೂ ಹೊಟ್ಟೆಗೆ ಮಾತ್ರ ಧೂಳು ಮೆತ್ತಿಲ್ಲ ಅನ್ನೋ ಜಯಮಾನದ ಚೀನಾ.. ಶಾಂತಿಯೊಂದನ್ನು ಬಿಟ್ಟು ಉಳಿದೆಲ್ಲ ಘಟನೆ ನಡೆಯಬೇಕಾದ ಕ್ರಮಗಳನ್ನು ತೆಗೆದುಕೊಳ್ತಾನೇ ಇದೆ.. ಆದ್ರೆ.. ಈಗ ಇಲ್ಲೊಂದು ಟ್ವಿಸ್ಟ್​ ಬಂದಿದೆ..

1962ರಲ್ಲಿ ಅಂದಿನ ರಾಜಕಾರಣಿಗಳ ಮತ್ತು ಜನ ನಾಯಕರ ಮೈಮರೆತ ಕಾರಣದಿಂದಾಗಿ ಭಾರತ ಚೀನಾದ ವಿರುದ್ಧ ಸೋಲನ್ನ ಕಂಡಿತ್ತು.. ಇದೇ ವೇಳೆ ಭಾರತ ಲಡಾಖ್​​ನ ಭೂಭಾಗ ಅಕ್ಸೈ ಚಿನ್ ಅನ್ನ ಕಳೆದುಕೊಂಡಿತ್ತು.. ಅದೇ ಚೀನಾ ಇಂದಿನ ಭಾರತವನ್ನೂ 1962ರ ಭಾರತ ಎಂದೇ ತಿಳಿದುಕೊಂಡಿದೆ.. ಹಾಗಂತ ಚೀನಾ ಕೂಡ 1962ರ ಚೀನಾ ಅಲ್ಲ.. ಇಂದು ಅದು ಸಾಕಷ್ಟು ಮುಂದುವರೆದ ರಾಷ್ಟ್ರ.. ಇದನ್ನ ಭಾರತ ಅರ್ಥ ಮಾಡಿಕೊಂಡಿದೆ ಮತ್ತು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ.. ಇದೇ ಕಾರಣದಿಂದಾಗಿ ಇಂದು ಲಡಾಖ್​ನಿಂದ ಕರ್ನಾಟಕದ ಕಾರವಾರ, ಕೇರಳದ ಕೊಚ್ಚಿಯವರೆಗೂ ಹಲ್​​ಚಲ್ ನಡೆಯುತ್ತಿದೆ.. Something is coocking ಅನ್ನೋದು ಎಲ್ಲರಿಗೂ ತಿಳಿಯುತ್ತಿದೆ.. ಆದ್ರೆ ಏನಾಗ್ತಿದೆ? ಅನ್ನೊದು ಯಾರಿಗೂ ಸ್ಪಷ್ಟವಾಗಿ ಗೋಚರವಾಗಿಲ್ಲ.. ಆದ್ರೆ ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ನಡೆಯಲೇ ಬೇಕಿದೆ..

ಸತತ ಮೂರು ದಿನಗಳ ಲಢಾಖ್ ಭೇಟಿ ಮುಗಿಸಿ ಬಂದಿರೋ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇವತ್ತು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಂಜೆ 4 ಗಂಟೆಯಿಂದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕೂಡ ಇದ್ರು. ಜೊತೆಗೆ ಹಲವು ಉನ್ನತ ಅಧಿಕಾರಿಗಳು ಸಹಜ ಉಪಸ್ಥಿತಿತರಿದ್ರು ಎನ್ನಲಾಗಿದೆ.. ಇದ್ರಲ್ಲೇನು ವಿಶೇಷ? ರಕ್ಷಾಣ ಸಚಿವರು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡುವುದು ಸಹಜವಲ್ಲವೇ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಆದ್ರೆ.. ಈ ಸಭೆ ಸಾಮಾನ್ಯ ಸಭೆಯಲ್ಲ.. ಯಾಕಂದ್ರೆ ಈ ಸಭೆಗೂ ಮುನ್ನ ಕಳೆದ ಒಂದು ವಾರ ಕೇಂದ್ರ ರಕ್ಷಣಾ ಸಚಿವರ ಭೇಟಿಯ ಪರಿಕ್ರಮ ಮತ್ತು ಅವರು ಕೊಟ್ಟಂಥ ಹೇಳಿಕೆಗಳನ್ನು ತಾಳೆ ಹಾಕಿದಾಗ ಮಾತಿಗೆ ನಿಲುಕದ ಆದ್ರೆ ಅರ್ಥವಾಗುವ ಹಲವು ವಿಷಯಗಳು ಗೋಚರವಾಗುತ್ತವೆ.. ಅಷ್ಟೇ ಅಲ್ಲ.. ಭಾರತ ಇದೇ ಮೊದಲ ಬಾರಿಗೆ ಚೀನಾ ವಿರುದ್ಧ ಬರೋಬ್ಬರಿ 2 ಲಕ್ಷ ಸೈನಿಕರನ್ನ ನಿಯೋಜಿಸಿರೋದು ಸಾಮಾನ್ಯ ಬೆಳವಣಿಗೆ ಅಂತ ಹೇಳಿದ್ರೆ.. ಕಿವಿ ಮೇಲೆ ಲಾಲ್​ಬಾಗ್ ಇಟ್ಟುಕೊಂಡವರು ಖಂಡಿತವಾಗಿ ನಂಬ್ತಾರೆ..

ಜೂನ್ 24, ಕಾರವಾರ

blank

ಬಹುತೇಕ ಬಹಳ ಜನರಿಗೆ ಗೊತ್ತಿಲ್ಲ.. ಭಾರತೀಯ ನೌಕಾ ಸೇನೆ ಕರ್ನಾಟಕದ ಕಾರವಾರದಲ್ಲಿ ಏಷ್ಯಾದ ಅತ್ಯಂತ ದೊಡ್ಡ ನೌಕಾ ಬಂದರನ್ನು ಹೊಂದಿದೆ.. ಇಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್.. ಪ್ರೊಜೆಕ್ಟ್​ ಸೀ ಬರ್ಡ್​​​ ಕಾಮಗಾರಿ ಗಮನಿಸಿದ್ದಾರೆ. ಅಷ್ಟೇ ಅಲ್ಲ ಹಲವು ಗಂಟೆಗಳ ಕಾಲ ನೌಕಾ ಸೇನೆ ಸಿಬ್ಬಂದಿ ಜೊತೆ ಚರ್ಚೆ ಕೂಡ ನಡೆಸಿದ್ದಾರೆ. ವೈಮಾನಿಕ ಸಮೀಕ್ಷೆ ಕೂಡ ಕೈಗೊಂಡ ಅವರು, ಭಾರತೀಯ ನೌಕಾ ಸೇನೆಯ ಯುದ್ಧ ಸಿದ್ಧತೆ ಬಗ್ಗೆ ಕೂಡ ಗಮನಿ ಹರಿಸಿದ್ರು ಎನ್ನಲಾಗಿದೆ..

ಜೂನ್ 25, ಕೊಚ್ಚಿ

blank

ಕಾರವಾರ ಭೇಟಿ ಬಳಿಕ ನೇರವಾಗಿ ಜೂನ್ 24 ನೇ ತಾರೀಖಿನಂದೇ ಕೊಚ್ಚಿಗೆ ರಾಜನಾತ್​ ಸಿಂಗ್ ಪ್ರಯಾಣ ಬೆಳೆಸಿದ್ರು.. ಮರುದಿನ ಬೆಳಗ್ಗೆ ಕೊಚ್ಚಿ ಶಿಪ್​ಯಾರ್ಡ್​ಗೆ ಭೇಟಿ ನೀಡಿದ ಅವರು ಭಾರತದ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಹಕ ಹಡಗು ನಿರ್ಮಾಣ ಪೂರ್ಣಗೊಂಡಿರೋದನ್ನ ಪರೀಕ್ಷಿಸಿದ್ರು.. ಇಲ್ಲೂ ಕೂಡ ನೌಕಾ ಸೈನಿಕರೊಂದಿಗೆ ಮಾತುಕತೆ ನಡೆಸಿದ ಅವರು, ಭಾರತ ಯಾವುದೇ ದೇಶದೊಂದಿಗೆ ಯುದ್ಧ ಬಯಸಲ್ಲ. ಆದ್ರೆ, ನಮ್ಮ ವಿರುದ್ಧ ಬಂದವರ ಹುಟ್ಟಡಗಿಸುತ್ತೇವೆ ಅಂತಾ ನೇರವಾಗಿ ವೈರಿಗಳಿಗೆ ವಾರ್ನಿಂಗ್ ಮಾಡಿದ್ರು.. ವಿಶೇಷ ಅಂದ್ರೆ ಕಾರವಾರ ಮತ್ತು ಕೊಚ್ಚಿಯಲ್ಲಿ ಭಾರತದ ಬಹುತೇಕ ಯುದ್ಧ ನೌಕೆಗಳೂ ಇದ್ದೂ.. ಅತ್ಯಂತ ಮಹತ್ವ ಪಡೆದುಕೊಂಡಿರುವ ಪ್ರದೇಶಗಳಾಗಿರೋದು ಕೂಡ ಗಮನಾರ್ಹ.. ಹಾಗಂತ ರಾಜನಾಥ್ ಸಿಂಗ್ ಭೇಟಿ ಇಷ್ಟಕ್ಕೇ ನಿಲ್ಲಲಿಲ್ಲ.. ಅವರು ಎಲ್ಲಿಂದ ತೆರಳಿದ್ದು ಎಲ್ಲಿಗೆ ಗೊತ್ತಾ?

ಲಡಾಖ್​ಗೆ ಬಂದಿಳಿದ ರಾಜನಾಥ್ ಸಿಂಗ್​
ಸಿಂಗ್ ಭೇಟಿ ಬೆನ್ನಲ್ಲೇ 50 ಸಾವಿರ ಸೈನಿಕರ ನಿಯೋಜನೆ
ಕೋಲ್ಡ್​ ಟೆಂಪರೇಚರ್​​​ನಲ್ಲೂ ಹಾಟ್ ಆದ ಲಡಾಖ್

ಜೂನ್​ 25 ರ ಭೇಟಿ ಬಳಿಕ ದೆಹಲಿಗೆ ಬಂದ ರಾಜನಾಥ್​ ಸಿಂಗ್, ಮತ್ತೆ ಜೂನ್​ 27 ರಂದು ಲಡಾಖ್​​ಗೆ ವಿಶೇಷ ವಿಮಾನದಲ್ಲಿ ತೆರಳಿದ್ರು.. ಲಡಾಖ್​ ಶಾಂತವಾಗಿದೆ.. ಚೀನಾದೊಂದಿಗೆ ಲೈನ್ ಆಫ್​ ಆ್ಯಕ್ಚುವಲ್ ಕಂಟ್ರೋಲ್​ ಶಾಂತಿಯಿಂದಿದೆ ಅಂತಾ ಮೇಲ್ನೋಟಕ್ಕೆ ಹೇಳಲಾಗ್ತುತ್ತಿದೆಯಾದ್ರೂ.. ಅಷ್ಟೆಲ್ಲ ಶಾಂತಿಯಿಂದ್ರೂ ಯಾಕೆ ರಾಜನಾಥ್​ ಸಿಂಗ್ ಲಡಾಖ್​ಗೆ ಇಂಥ ಸಮಯದಲ್ಲಿ ತೆರಳಿದ್ರು? ಅಂತಾ ಕೇಳಿದ್ರು ಉತ್ತರ ಅಷ್ಟು ಸುಲಭವಾಗಿ ಸಿಗಲ್ಲ..
blank
ಹೌದು.. ರಾಜನಾಥ್​ ಸಿಂಗ್​ ಲಡಾಖ್​​​ಗೆ ಹೋಗಿದ್ದು ಅಂದೇ ಮರಳಿ ಬರೋಕೆ ಅಲ್ಲ.. ಬದಲಿಗೆ ಬರೋಬ್ಬರಿ 3 ದಿನಗಳ ಕಾಲ ಅವರು ಸೈನಿಕರ ನಡುವೆ ಕಳೆದ್ರು.. ಭಾರತ ಸೇನೆಯ ಪ್ರತಿ ಸಿದ್ಧತೆಯನ್ನೂ ಕೂಲಂಕುಶವಾಗಿ ಪರಿಶೀಲಿಸಿದ್ರು.. ಕಳೆದ ವರ್ಷ ಗಲ್ವಾನ್​​​ ಕಣಿವೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ರು..

ಕೇಂದ್ರ ಸರ್ಕಾರದ ಸಂಸ್ಥೆ ಬಾರ್ಡರ್ ರೋಡ್ ಆರ್ಗನೈಸೇಷನ್​​ ಹೊಸದಾಗಿ ಚೀನಾ ಗಡಿ ಗುಂಟ ನಿರ್ಮಿಸಿರುವ ಬರೋಬ್ಬರಿ 63 ಬ್ರಿಡ್ಜ್​ಗಳನ್ನ ಲೋಕಾರ್ಪಣೆ ಮಾಡಿದ್ರು.. ಅಷ್ಟೇ ಅಲ್ಲ ಸ್ಥಳೀಯ ಬೌದ್ಧ ಬಸದಿಗೆ ಭೇಟಿ ನೀಡಿ ಧರ್ಮಗುರುಗಳೊಂದಿಗೆ ಮಾತುಕತೆ ನಡೆಸಿದ್ರು.. ಇದಿಷ್ಟೇ ಸಾಲದು ಎಂಬಂತೆ.. ಲಡಾಖ್​ನ ಮಾಜಿ ಯೋಧರೊಂದಿಗೂ ಸಾಕಷ್ಟು ಸಮಯ ಅವರು ಸಮಾಲೋಚನೆ ನಡೆಸಿದ್ರು.. ಬಳಿಕ ಮಾತನಾಡಿದ ರಾಜನಾಥ್​ ಸಿಂಗ್, ಭಾರತ ಇಲ್ಲಿಯವರೆಗೂ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ.. ಹಾಗಂತ ನಮ್ಮ ವಿರುದ್ಧ ಯಾರಾದ್ರೂ ಮಸಲತ್ತು ಮಾಡಿದ್ರೆ ಅಂಥವರನ್ನ ಸುಮ್ನೆ ಬಿಡಲ್ಲ ಅಂತಾ ಮತ್ತೆ ಪುನರುಚ್ಛರಿಸಿದ್ರು.. ಅಷ್ಟೆಲ್ಲ ಭೇಟಿ ಮುಗಿಸಿ ಇಂದು ದೆಹಲಿಗೆ ಮರಳಿದ ಅವರು ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೂ ಸಭೆ ನಡೆಸಿರೋದು.. ಮತ್ತು ಆ ಸಭೆಯಲ್ಲಿ ಅಮಿತ್ ಶಾ ಕೂಡ ಉಪಸ್ಥಿತರಿರೋದು ಕಾಕತಾಳೀಯ ಅಂತಾ ಯಾರಾದ್ರೂ ಹೇಳಿದ್ರೆ.. ಖಂಡಿತ ನಂಬಿ.. ಆಲ್​​ ದಿ ಬೆಸ್ಟ್ ಅಂತಷ್ಟೇ ನಾವು ಹೇಳಬಹುದು..

blank
ಒಂದೆಡೆ ರಾಜನಾಥ್ ಸಿಂಗ್ ಲಡಾಖ್​ಗೆ ಭೇಟಿ ನೀಡಿದ ಬೆನ್ನಲ್ಲೇ, ಭಾರತ-ಚೀನಾ ಗಡಿಗೆ ಕೇಂದ್ರ ಸರ್ಕಾರ 50,000 ಹೆಚ್ಚುವರಿ ಸೈನಿಕರನ್ನ ನಿಯೋಜಿಸಿದೆ. ಇಷ್ಟು ದಿನ ಭಾರತ ಪಾಕಿಸ್ತಾನವನ್ನ ನಂಬರ್​ ಒನ್ ವೈರಿ ಅಂತಾ ಪರಿಗಣಿಸಿತ್ತು.. ಆದ್ರೆ ಈಗ ಪಾಕಿಸ್ತಾನ ಏನಿದ್ರೂ ಬೂಟಿನಲ್ಲಿ ಸಿಲುಕ ಹಳ್ಳು ಕಾಲಿಗೆ ನೋವು ನೀಡುವಂತೆ ಕಾಡಬಹುದು ಅಷ್ಟೇ.. ಹೀಗಾಗಿ ಭಾರತದ ಆದ್ಯತೆ ಕೂಡ ಈಗ ಬದಲಾಗಿದ್ದು.. ಚೀನಾವೇ ನಂಬರ್ ಒನ್ ಕಂಟಕವಾಗಿ ಪರಿಗಣಿತವಾಗಿದೆ. ಇದೇ ಕಾರಣದಿಂದಾಗಿ ಭಾರತ ಡಿಫೆನ್ಸಿವ್ ಅಫೆನ್ಸ್​​ ಸ್ಟಾಟರ್ಜಿ ಚೀನಾ ವಿರುದ್ಧವೂ ಅನುಸರಿಸುತ್ತಿದ್ದು.. ಮಿರರ್​ ಡಿಪ್ಲಾಯ್​ಮೆಂಟ್ ಮಾಡುತ್ತಲೇ.. ಚೀನಾಕ್ಕೆ ಬಿಸಿ ಮುಟ್ಟಿಸಲೂ ಸಿದ್ಧವಾಗಿದೆ ಅಂತಾ ಹೇಳಲಾಗ್ತಿದೆ..

ಚೀನಾ ಗಡಿಯಲ್ಲಿ ಫೈಟರ್ ಜೆಟ್ ನಿಯೋಜನೆ
ಅತ್ಯಾಧುನಿಕ ಹೆಲಿಕಾಪ್ಟರ್​ ಕೂಡ ಸಿದ್ಧ ಪಡಿಸಿಕೊಂಡ ಭಾರತ
ಚೀನಾದಿಂದಲೂ ನಡೆಯುತ್ತಿದೆ ದೊಡ್ಡ ಹುನ್ನಾರ..

ಚೀನಾ ಗಡಿಯಲ್ಲಿ ಭಾರತ ಕೇವಲ 2 ಲಕ್ಷಕ್ಕೂ ಅಧೀಕ ಸೈನಿಕರನ್ನ ಮಾತ್ರ ಭಾರತ ನಿಯೋಜಿಸಿಲ್ಲ ಅದರೊಂದಿಗೆ ಮೂರು ಫೈಟರ್​ ಜೆಟ್​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕಳುಹಿಸಿದೆ ಎನ್ನಲಾಗಿದೆ. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ಕೂಡ ನೇಮಿಸಿದೆ. ಇದರೊಂದಿಗೆ ಅಪಾಚಿ, ಚಿನೂಕ್​ ರೀತಿಯ ಹೆಲಿಕಾಪ್ಟರ್​ಗಳನ್ನು ಸರ್ವ ಸನ್ನದ್ಧವಾಗಿರಿಸಿದೆ.. ಈ ಹೆಲಿಕಾಪ್ಟರ್​ಗಳು ದಾಳಿ ನಡೆಸಲು, ದೊಡ್ಡ ದೊಡ್ಡ ಮಟ್ಟದಲ್ಲಿ ಸೈನಿಕರನ್ನು ಸಾಗಿಸಲು, ಜೊತೆಗೆ M777 howitzer ನಂತರ ಆರ್ಟಿಲ್ಲರಿ ಗನ್​ಗಳನ್ನೂ ಸಾಗಿಸಲು ಸಹಕಾರಿಯಾಗಿವೆ.. ಇದರೊಂದಿಗೆ ಅಂಬಾಲಾದಲ್ಲಿ ರಫೇಲ್​ ಘರ್ಜಿಸಲು ಸಿದ್ಧವಾಗಿದ್ದರೆ.. ಅಗ್ನಿ, ಪೃಥ್ವಿ, ಆಕಾಶ್, ಬರಾಕ್ ಮುಂತಾದ ಮಿಸೈಲ್​ಗಳು ಮತ್ತು ಮಿಸೈಲ್​​ ಡಿಫೆನ್ಸ್​ ಸಿಸ್ಟಂಗಳನ್ನೂ ನಿಯೋಜಿಸಲಾಗಿದೆ. ಇದರೊಂದಿಗೆ ಚೀನಾದ ಸ್ಟೆಲ್ತ್​ ಬಾಂಬರ್​​ಗೆ ಪ್ರತಿಯಾಗಿ ಭಾರತ ಕುಡ ದೊಡ್ಡ ಮಟ್ಟ ರೆಡಾರ್​ ನಿರ್ಮಿಸಿ ಅದರ ಚಲನವಲನ ಗಮನಿಸುತ್ತಿದೆ..

blank
representative image

ಇನ್ನೊಂದೆಡೆ ಚೀನಾ ಕೂಡ ಸಾಕಷ್ಟು ಪ್ರಮಾಣದಲ್ಲಿ ಸೈನಿಕರನ್ನು ಭಾರತದ ಗಡಿಗುಂಟ ನಿಯೋಜಿಸುತ್ತಿದೆ ಎನ್ನಲಾಗಿದೆ. ಇದರೊಂದಿಗೆ ರಷ್ಯಾದಿಂದ ಖರೀದಿಸಿರುವ ಎಸ್​​-400 ಮಿಸಲ್ ಸಿಸ್ಟಂ ಅನ್ನು ಕೂಡ ಅದು ನಿಯೋಜಿಸಿದೆ. ಜೊತೆಗೆ ಇತ್ತೀಚೆಗೆ ತಾನೆ ಸುಮಾರು 20 ಫೈಟರ್​ಜೆಟ್​ಗಳೊಂದಿಗೆ ಭಾರತದ ಗಡಿ ಬಳಿ ಯುದ್ಧಾಭ್ಯಾಸವನ್ನ ಚೀನಾ ನಡೆಸಿದೆ. ಜೊತೆಗೆ ಟಿಬೆಟ್​​ ತನಕ ಬುಲೆಟ್​ ಟ್ರೇನ್ ಸಂಪರ್ಕವನ್ನ ಕೂಡ ಅದು ಕಲ್ಪಿಸಿದ್ದು 400-500 ಕಿಲೋಮೀಟರ್​ ದೂರವನ್ನ ಕೂಡ ಕೆಲವೇ ಗಂಟೆಗಳಲ್ಲಿ ಅದು ತಲುಪಬಲ್ಲದ್ದಾಗಿದೆ. ಇಷ್ಟು ಸಾಲದು ಎಂಬಂತೆ ಟಿಬೆಟ್​ನಲ್ಲಿನ ನಿರುದ್ಯೋಗಿ ಯುವಕರಿಗೆ ಟ್ರೇನಿಂಗ್ ನೀಡಿ ಭಾರತದ ವಿರುದ್ಧ ಹೋರಾಡಲು ಬಳಸಿಕೊಳ್ಳುತ್ತಿದೆ.. ಜೊತೆಗೆ ಕಮ್ಯುನಿಸ್ಟ್ ರಾಷ್ಟ್ರ ಚೀನ ಅವರಿಗೆ ಬೌದ್ಧ ಗುರುಗಳ ಸಮ್ಮುಖದಲ್ಲಿ ಆಣೆ ಪ್ರಮಾಣ ಕೂಡ ಮಾಡಿಸಿಕೊಂಡಿದೆ ಎನ್ನಲಾಗಿದೆ..

ಲಡಾಖ್​ ಗಡಿಯಲ್ಲಿ ಚೀನಾ ಎಷ್ಟೇ ಸಿದ್ಧತೆಗಳನ್ನು ಮಾಡಿಕೊಂಡಿದ್ರೂ ಅಲ್ಲಿ ಹೋರಾಡ ಬೇಕಾದ ಸೈನಿಕರಿಗೆ ಸರಿಯಾದ ತರಬೇತಿಯಂತೂ ಇಲ್ಲ.. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳೋದು ಕೂಡ ಕಷ್ಟ.. ಹೀಗಾಗಿಯೇ ಅದು ಟಿಬೆಟ್ ಯುವಕರ ಮೊರೆಹೋಗಿದೆ ಎನ್ನಲಾಗಿದೆ..

ಇದು ಲಡಾಖ್​ ಪರಿಸ್ಥಿತಿಯಾದ್ರೆ ಹಿಂದೂ ಮಹಾಸಾಗರದಲ್ಲಿ ಭಾರತವೇ ಸಾರ್ವಭೌಮ.. ಇಲ್ಲಿ ಚೀನಿ ಗೂಡ್ಸ್​ ಹಡಗುಗಳನ್ನು ಭಾರತವೇನಾದ್ರೂ ತಡೆದು ನಿಲ್ಲಿಸಿದ್ರೆ ಆ ದೇಶ ವಿಲ ವಿಲ ಎನ್ನಬೇಕಾಗುತ್ತೆ.. ಚೀನೀ ನೌಕಾ ಸೇನೆ ಎಷ್ಟೇ ದೊಡ್ಡದಾಗಿದ್ರೂ ಅದಕ್ಕೆ ಅಷ್ಟೇ ಶತ್ರುಗಳೂ ಇದ್ದಾರೆ.. ಹೀಗಾಗಿ ಕಡಲಲ್ಲಿ ಭಾರತವನ್ನ ಎದುರಿಸೋದು ಅಷ್ಟು ಸುಲಭವಲ್ಲ.. ಈ ದೃಷ್ಟಿಯಲ್ಲಿ ಈಗಾಗಲೇ ಪಾಕಿಸ್ತಾನ ಕೂಡ 1971ರ ಯುದ್ಧದಲ್ಲಿ ಒಂದು ಬಾರಿ ಪಾಠ ಕಲಿತಿದೆ.. ಚೀನಾದ ಮಾತು ಕೇಳಿ ಅದೇನಾದ್ರೂ ಯುದ್ಧಕ್ಕೆ ಬಂದ್ರೆ ಏನಾಗುತ್ತೆ? ಅನ್ನೋಭವವೂ ಅದಕ್ಕಿದೆ..

ಇದೇ ಹಿನ್ನೆಲೆಯಲ್ಲಿ ರಾಜನಾಥ್​ ಸಿಂಗ್​ ಭಾರತದ ನೌಕಾ ನೆಲೆಗಳ ಭೇಟಿ.. ನೇವಿ ಸೈನಿಕರೊಂದಿಗೆ ಮಾತುಕತೆ.. ಲಡಾಖ್​ಗೆ ಅವರು ಭೇಟಿ ನೀಡಿದ್ದು.. ಅದ್ರಲ್ಲಿ ಅಲ್ಲಿಯೂ ಬೌದ್ಧಗುರುಗಳೊಂದಿಗೆ ಮಾತುಕತೆ ನಡೆಸಿದ್ದು.. ಹಲವು ಅರ್ಥವನ್ನಂತೂ ಕಲ್ಪಿಸುತ್ತಿವೆ.
End Anhcor: ಸದಾ ಕಾಲ ಓಂ ಶಾಂತಿ ಶಾಂತಿ ಶಾಂತಿಃ ಅಂತಾ ವಿಶ್ವದ ಶಾಂತಿ ಬಯಸುವ ಭಾರತ ಸಿಡಿದ್ರೆ ವೀರಭದ್ರನೂ ಆಗಬಲ್ಲದು.. ಒಲಿದರೆ ಭೋಳಾ ಶಂಕರನೂ ಆಗಬಹುದು.. ಹೀಗಾಗಿ ಶತ್ರುಗಳು ಯಾವ ಭಾರತವನ್ನ ಬಯಸುತ್ತಾರೆ ಅನ್ನೋದನ್ನಅ ವರೇ ನಿರ್ಧರಿಸಬೇಕಿದೆ.. ಭಾರತದ ಸೈನ್ಯವಂತೂ ಎಲ್ಲಕ್ಕೂ ಸಿದ್ಧವಾಗಿದೆ..

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಚೀನಾ ಗಡಿಯಲ್ಲಿ 4 ಲಕ್ಷ ಸೈನಿಕರು ಮುಖಾಮುಖಿ; ಹಿಂದೆಂದೂ ನಡೆಯದ್ದು ಈ ಬಾರಿ ನಡೆದು ಹೋಗುತ್ತಾ? appeared first on News First Kannada.

Source: newsfirstlive.com

Source link