ತಾತನ ಕಿಚ್ಚಿಗೆ ಸುಟ್ಟು ಕರಕಲಾಯ್ತಾ ಐಷಾರಾಮಿ ಬಂಗಲೆ? ತನಿಖೆ ವೇಳೆ ಬಯಲಾಯ್ತು ಅಸಲಿ ರಹಸ್ಯ

ತಾತನ ಕಿಚ್ಚಿಗೆ ಸುಟ್ಟು ಕರಕಲಾಯ್ತಾ ಐಷಾರಾಮಿ ಬಂಗಲೆ? ತನಿಖೆ ವೇಳೆ ಬಯಲಾಯ್ತು ಅಸಲಿ ರಹಸ್ಯ

ಲಂಡನ್​​ನಲ್ಲಿದ್ದ ಆ ಭವ್ಯ ಬಂಗಲೆಯಲ್ಲಿ ಇದ್ದಕ್ಕಿದ್ದಂಗೆ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂಗೆ ದಟ್ಟ ಹೊಗೆ ಆವರಿಸಿತ್ತು. ಬೆಂಕಿಯ ಜ್ವಾಲೆಗೆ ಸಿಲುಕಿ ಬರೋಬ್ಬರಿ 6 ಕೋಟಿ ಮೌಲ್ಯದ ಬಂಗಲೆ ಭಸ್ಮವಾಗಿತ್ತು. ತನಿಖೆಯ ವೇಳೆ ಗೊತ್ತಾಗಿದ್ದು ತಾತನ ಕಿಚ್ಚು. ಅಷ್ಟಕ್ಕೂ ತಾತನ ಸ್ವಾರ್ಥದ ಕಿಚ್ಚೊಂದು ಭವ್ಯ ಬಂಗಲೆಯನ್ನು ಬೂದಿ ಮಾಡಿದ್ಹೇಗೆ?

blankಕೋಟ್ಯಾಂತರ ರುಪಾಯಿ ಮೌಲ್ಯದ ಬೆಂಕಿಯಿಂದ ಭಸ್ಮವಾಗಿದೆ. ನೋಡ ನೋಡುತ್ತಿದ್ದಂಗೆ ಬಂಗಲೆ ಭಸ್ಮವಾಗಿದೆ. ಆವರಿಸಿದ್ದ ದಟ್ಟ ಹೊಗೆ ಮಾಸುತ್ತಿದ್ದಂಗೆ ಅಲ್ಲಿ ನವ ವಧುವಿನಂತೆ ಶೃಂಗಾರ ಗೊಂಡಿದ್ದ ಬಂಗಲೆ ಸುಟ್ಟು ಕರಕಲಾಗಿತ್ತು. ಹಾಗೆಂದ ಮಾತ್ರಕ್ಕೆ ಈ ಬಂಗಲೆಗೆ ಆಕಸ್ಮಿವಾಗಿ ಬೆಂಕಿ ಬಿದ್ದಿದ್ದಲ್ಲ. ಸುಂದರವಾಗಿದ್ದ ಬಂಗಲೆ ಹೀಗೆ ಭಸ್ಮವಾಗಿದ್ದ ಹಿಂದೆ ತಾತನ ಕಿಚ್ಚಿದೆ. ಗಂಡನೊಬ್ಬನ ಸ್ವಾರ್ಥ ಇದೆ. ಗಂಡ-ಹೆಂಡತಿಯರ ಜಗಳದ ಕಹಾನಿ ಇದೆ.

ತಾತನ ಕಿಚ್ಚಿಗೆ ಸುಟ್ಟು ಕರಕಲಾಯ್ತಾ ಐಷಾರಾಮಿ ಬಂಗಲೆ?
ಗಂಡ-ಹೆಂಡತಿಯ ಜಗಳ ಬಂಗಲೆ ಭಸ್ಮವಾಗುವ ತನಕನಾ?

ಗಂಡ ಹೆಂಡತಿಯ ಜಗಳ ತಿಂದು ಉಂಡು ಮಲ್ಗೋ ತನ್ಕಾ ಎನ್ನುವ ಮಾತು ಏನಿದ್ರು ಹಳೇಯ ವರ್ಷನ್ ಅನ್ಸುತ್ತೆ. ಇದೀಗ ಅದ್ರ ಅಪ್ಡೇಟ್ ವರ್ಷನ್ ಬಂದಿದೆ. ಇಲ್ಲಿ ಗಂಡ ಹೆಂಡತಿಯ ಜಗಳ ಬಂಗಲೆ ಭಸ್ಮವಾಗುವ ತನಕ ಎಂಬತ್ತಾಗಿದೆ. ಹೌದು.. ಗಂಡ-ಹೆಂಡತಿಯವರ ಭವ್ಯ ಬಂಗಲೆಯನ್ನು ಬೂದಿ ಮಾಡಿದೆ ಎಂದ್ರೆ, ಆ ತಾತನಿಗೆ ಇಳಿ ವಯಸ್ಸಿನಲ್ಲಿದ್ದ ಕಿಚ್ಚು ಎಂತಹದ್ದು ನೀವೆ ಯೋಚ್ನೆ ಮಾಡಿ.

ಬ್ರಿಟನ್‌ನಲ್ಲೊಂದು ವಿಚಿತ್ರ ಕೌಟುಂಬಿಕ ಕಲಹ
ಕೌಟುಂಬಿಕ ಕಲಹದ ಹಗೆ ಬಂಗಲೆ ಹೊಗೆ

ಬ್ರಿಟನ್ ಜಾಕ್ ಮ್ಯಾಕ್ ಕೊರ್ರಿ ಎಂಬ ಭೂಪನೇ ನೋಡಿ ಈ ಭ್ಯವ ಬಂಗಲೆ ಬೆಂಕಿ ಇಟ್ಟು ಬೂದಿ ಮಾಡಿದ ಭೂಪ.ಹೌದು.. 75 ವರ್ಷದ ಜಾಕ್ ಮ್ಯಾಕ್ ಕೊರ್ರಿ ಎಂಬ ತಾತನ ಈ ಕಿಚ್ಚಿ ಹಿಂದೆ ಒಂದು ಕೌಟುಂಬಿಕ ಕಲಹದ ಸ್ಟೋರಿ ಇದೆ ಹೇಳ್ತೀವಿ ನೋಡಿ.. ಇವ್ನ ಕೌಟುಂಬಿಕ ಕಲಹಕ್ಕೆ ಇದೀಗ ಬಂಗಲೆ ಬಲಿಯಾಗಿದೆ.

blank

ಮೊಮ್ಮಕ್ಕಳನ್ನು ಎತ್ತಿ ಆಡಿಸ್ಬೇಕಾಗಿದ್ದ ಈ ಇಳಿವಯಸ್ಸಿನಲ್ಲಿ ಈ ಗಂಡ-ಹೆಂಡತಿಯ ನಡುವೆ ವಿರಸ ಉಂಟಾಗಿದೆ. ಇಬ್ಬರು ಕೂಡ ಇಳಿವಯಸ್ಸಿನಲ್ಲಿ ತೊಡೆ ತಟ್ಟಿ ಪರಸ್ಪರ ಜಗಳಕ್ಕೆ ನಿಂತ್ತಿದ್ದಾರೆ. ಇವ್ರ ಜಗಳ ಉಂಡು ಮಳಗಿದ ಮೇಲೂ ಮುಂದುವರೆದಿತ್ತು. ದಿನದಿಂದ ದಿನಕ್ಕೆ ಇವರ ನಡುವೆ ಪ್ರೀತಿ ಅಳಿಸಿ ಹೋಗಿ ದ್ವೇಷದ ಜ್ವಾಲೆಯೆ ಹೆಚ್ಚಾಗಿದ್ದು. ಮಾತಿನಲ್ಲಿ ಬಗೆಹರೆಯದಾಗ ಕಡೆಗೆ ಇಬ್ಬರೂ ದೂರ ಉಳಿದಿದ್ರು.

ಬಂಗಲೆಯಲ್ಲಿ ಪಾಲು ಕೊಡ್ಬೇಕೆಂದು ಬಂಗಲೆಯನ್ನೇ ಸುಟ್ಟನಾ..?
ಹೆಂಡ್ತಿ ಪಾಲಾಗ್ಬಾರ್ದೆಂದು ಬಂಗಲೆಯನ್ನೇ ಸುಟ್ಟ ಸ್ವಾರ್ಥಿ ತಾತ?
ಪೊಲೀಸ್ ವಿಚಾರಣೆಯ ವೇಳೆ ಬಯಲಾಯ್ತು ಅಸಲಿ ರಹಸ್ಯ?

ಈ ಇಡೀ ಬಂಗಲೆ ಧ್ವಂಸ ಆಗಿದ್ದಿರ ಹಿಂದಿನ ಅಸಲಿಯತ್ತು ಅಡಗಿರುವುದು. ಹೆಂಡ್ತಿ ಬಿಟ್ಟೋದ್ಮೇಲೆ ಈ ತಾತನಿಗೆ ಆಕೆಯ ಮೇಲೆನ ಕೋಪ ನೆತ್ತಿಗೇರಿತ್ತು. ಬಿಟ್ಟೋಗಿದ್ದರ ಕೋಪ ಒಂದ್ ಕಡೆಯಾದ್ರೆ, ಆಕೆಯ ವಿಚ್ಚೇದನ ನೀಡಿದ್ರೆ ಈ ಬಂಗಲೆ ಆಕೆಯ ಪಾಲಾಗುತ್ತುಲ್ವಾ ಎನ್ನುವ ಸ್ವಾರ್ಥದ ಭಯ ಆತನನ್ನು ಕಾಡಿತ್ತು. ತನಗೆ ವಾಸಿಸಲು ಮನೆ ಇಲ್ಲದಿದ್ರೂ ಪರ್ವಾಗಿಲ್ಲ, ಆದ್ರೆ ಈ ಬಂಗಲೆ ಮಾತ್ರ ಮಡದಿಯ ಪಾಲರ್ಗಬಾದೆಂಬ ಸ್ವಾರ್ಥದಿಂದ ಆ ತಾತ ಇಡೀ ಬಂಗಲೆಗೆ ಬೆಂಕಿ ಇಟ್ಟಿದ್ದಾನೆ. ಪೊಲೀಸರು ತನಿಖೆ ನಡೆಸಿದಾಗ ಈ ತಾತನ ಅಸಲಿ ಮುಖವಾಡ ಗೊತ್ತಾಗಿದೆ. ಈ ಎಲ್ಲಾ ಸತ್ಯವನ್ನು ಪೊಲೀಸರ ಮುಂದೆ ವಿಚಾರಣೆಯ ವೇಳೆ ಹೇಳಿದ್ದಾನೆ.

blank

ನಾನು ಅಂದು ಕಂಠ ಪೂರ್ತಿ ಕುಡಿದಿದ್ದೆ. ಕಿಕ್ಕೇರಿದ ಹೊತ್ತಲ್ಲಿ ಕಿಕ್‌ನ ಮತ್ತಲ್ಲಿ ಈ ಕೃತ್ಯ ಎಸಗಿದ್ದೇನೆ. ನಾನ್ ಏನ್ ಮಾಡ್ತಿದ್ದೇನೆಂದು ನನಗೂ ಗೊತ್ತಿರ್ಲಿಲ್ಲ. ನನಗೆ ತಪ್ಪಿನ ಅರಿವಾಗುಷ್ಟರಲ್ಲಿ ಬಂಗಲೆ ಸುಟ್ಟು ಭಸ್ಮವಾಗಿತ್ತು. ಅಂದು ನನ್ನ ಆ ಸ್ಥಿತಿಗೆ ಮಡದಿಯ ಮೇಲಿನ ಕೋಪ ಕೂಡ ಕಾರಣವಾಗಿತ್ತು.
ಜಾನ್ ಮ್ಯಾಕ್ ಕೊರ್ರಿ

ಹೆಂಡ್ತಿಯ ಮೇಲಿನ ಕೋಪದ ಜೊತೆಗೆ ಕುಡಿದ ಅಮಲಿನಲ್ಲಿ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆದ್ರೆ ಪತ್ನಿ ಮಾತ್ರ ಬೇರೆಯದ್ದೆ ಇನ್ನೊಂದು ಆರೋಪ ಮಾಡಿದ್ದಾರೆ. ನಾನು ಗಂಡನನ್ನ ಬಿಟ್ಟು ಹೋದ ಮೇಲೆ ತುಂಬಾ ಸಂತೋಷದಿಂದ ದಿನದೂಡುತ್ತಿದ್ದೆ. ನನ್ನ ಸಂತೋಷವನ್ನು ಸಹಿಸಲಾಗದೆ ಕೋಪದಿಂದ ಬಂಗ್ಲೆಯನ್ನು ಸುಟ್ಟಿದ್ದಾನೆ. ನಾನು ವಿರೋಧ ವ್ಯಕ್ತಪಡಿಸಿದ್ರೂ ನನ್ನ ಮಾತನ್ನ ಕಿವಿಗೆ ಹಾಕಿಕೊಳ್ಳಲಿಲ್ಲ. ಅಲ್ಲದೆ ಬಂಗಲೊಳಗಿದ್ದ ನನ್ನ ಬೆಲೆ ಬಾಳುವ ವಸ್ತುಗಳನ್ನು ಕೂಡ ತೆಗೆಯಲು ಬಿಡ್ಲಿಲ್ಲ. ನಾನು ಆತನಿಂದ ಯಾವತ್ತಿಗೂ ವಿಚ್ಛೇದನ ಬಯಸುತ್ತಿರಲಿಲ್ಲವೆಂದು ಹೇಳಿದ್ದಾರೆ.

ನನ್ನ ಸಂತೋಷವನ್ನು ಸಹಿಸಲಾಗದೆ ಸ್ವಾರ್ಥದಿಂದ ಕೃತ್ಯ ಎಸಗಿದ್ದಾನೆಂದು ಆತನ ಹೆಂಡ್ತಿ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಮಾತಿನಲ್ಲಿಯೇ ಬಗೆಹರಿಯಬಹುದಾದ ಸಮಸ್ಯೆಯೊಂದು ಇಂದು ಕೋಟ್ಯಾಂತರ ಮೌಲ್ಯದ ಸೊತ್ತನ್ನು ಭಸ್ಮ ಮಾಡಿದೆ. ಅಂದು ಕೋಪದ ಕೈಗೆ ಕೆಲಸ ಕೊಟ್ಟ ಜಾನ್ ಇಂದು ತನ್ನ ತಲೆ ಮೇಲೆ ಕೈ ಇಟ್ಟು ಕೂತ್ತಿದ್ದಾನೆ. ಆತನದಲ್ಲಿದ್ದ ಸ್ವಾರ್ಥದ ಕೋಪ ಭವ್ಯ ಬಂಗಲೆಯನ್ನು ಸುಟ್ಟು ಹಾಕಿದೆ. ಗಂಡ-ಹೆಂಡತಿಯ ಜಗಳ ಇಂದು ಭವ್ಯ ಬಂಗಲೆಯನ್ನು ಬೂದಿ ಮಾಡಿದ್ದು ನಿಜಕ್ಕೂ ದೊಡ್ಡ ದುರಂತ.
-ವಿಶೇಷ ವರದಿ- ಅಬ್ದುಲ್ ಸತ್ತಾರ್

The post ತಾತನ ಕಿಚ್ಚಿಗೆ ಸುಟ್ಟು ಕರಕಲಾಯ್ತಾ ಐಷಾರಾಮಿ ಬಂಗಲೆ? ತನಿಖೆ ವೇಳೆ ಬಯಲಾಯ್ತು ಅಸಲಿ ರಹಸ್ಯ appeared first on News First Kannada.

Source: newsfirstlive.com

Source link