ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಬೆಂಗಳೂರು: ಮಹಾರಾಷ್ಟ್ರ ದಲ್ಲಿ ಡೆಲ್ಟಾ ಪ್ಲಸ್  ತಳಿಯ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗ್ತಿದೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸೋ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಪ್ರಯಾಣಿಕರು 72 ಗಂಟೆಯೊಳಗಿನ RTPCR ಟೆಸ್ಟ್ ವರದಿಯನ್ನು ತೋರಿಸಬೇಕು.

ವರದಿ ನೆಗೆಟಿವ್​ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತೆ ಎಂದು ಸೂಚಿಸಲಾಗಿದೆ. ಇನ್ನು ವ್ಯಾಕ್ಸಿನ್​ನ ಮೊದಲ ಡೋಸ್​ ಪಡೆದುಕೊಂಡವರಿಗೆ ಈ ನಿಯಮದಿಂದ ವಿನಾಯತಿ ನೀಡಲಾಗಿದೆ. ಹಾಗೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರವೇಶಕ್ಕೂ ಅವಕಾಶ ನೀಡಲಾಗಿದೆ.

The post ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ appeared first on News First Kannada.

Source: newsfirstlive.com

Source link