ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ತನಿಖೆ ಓಕೆ.. ಸೂಪರ್​ ಸೀಡ್​​ ಯಾಕೆ?
ಮನ್​ಮುಲ್​ ಹಗರಣದ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಯಾವ ತನಿಖೆ ಬೇಕಾದ್ರೂ ಮಾಡಿಕೊಳ್ಳಿ. ಆದ್ರೆ ಹಗರಣ ಹೊರ ತಂದಿದ್ದಕ್ಕೆ ಆಡಳಿತ ಮಂಡಳಿ ಸೂಪರ್ ಸೀಡ್ ಆಗಬೇಕಾ ಅಂತ ಪ್ರಶ್ನಿಸಿದ್ರು. ಇವರಿಗೆ ಮಾನ ಮರ್ಯಾದೆ ಇದ್ರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ ಅಂತ ಸವಾಲಾಕಿದ ಹೆಚ್​​ಡಿಕೆ, ನಾನು ಮಂಡ್ಯ ಜಿಲ್ಲೆಗೆ ಬರೋಕೆ ಯಾರ ಅನುಮತಿ ಕೇಳಬೇಕಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

2 ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಮಾರ್ಗಸೂಚಿ
ಮಹಾರಾಷ್ಟ್ರ ದಲ್ಲಿ ಡೆಲ್ಟಾ ಪ್ಲಸ್  ತಳಿಯ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗ್ತಿದೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸೋ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಪ್ರಯಾಣಿಕರು 72 ಗಂಟೆಯೊಳಗಿನ RTPCR ಟೆಸ್ಟ್ ವರದಿಯನ್ನು ತೋರಿಸಬೇಕು. ವರದಿ ನೆಗೆಟಿವ್​ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತೆ ಎಂದು ಸೂಚಿಸಲಾಗಿದೆ. ಇನ್ನು ವ್ಯಾಕ್ಸಿನ್​ನ ಮೊದಲ ಡೋಸ್​ ಪಡೆದುಕೊಂಡವರಿಗೆ ಈ ನಿಯಮದಿಂದ ವಿನಾಯತಿ ನೀಡಲಾಗಿದೆ. ಹಾಗೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರವೇಶಕ್ಕೂ ಅವಕಾಶ ನೀಡಲಾಗಿದೆ.

3 ಪಂಜಾಬ್​ನಲ್ಲಿ ಉಚಿತ ವಿದ್ಯುತ್ ಆಶ್ವಾಸನೆ
ಪಂಜಾಬ್ ಚುನಾವಣೆ ಮೇಲೆ ದೆಹಲಿ ಸಿಎಂ ಕೇಜ್ರಿವಾಲ್ ಕಣ್ಣಿಟ್ಟಿದ್ದಾರೆ. ಪಂಜಾಬ್​ನಲ್ಲಿ ಆಮ್​ಆದ್ಮಿ ಪಕ್ಷ ಜಯ ಗಳಿಸಿದರೆ ಪ್ರತಿ ಕುಟುಂಬಕ್ಕೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ, 24 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುವುದು ಹಾಗೂ ಬಾಕಿ ಇರುವ ವಿದ್ಯುತ್ ಬಿಲ್ ​ಅನ್ನು ಮನ್ನಾ ಮಾಡುತ್ತೇವೆ ಅಂತ ಆಶ್ವಾಸನೆ ನೀಡಿದ್ದಾರೆ.

4. ಮೈತ್ರಿ ಬಿಕ್ಕಟ್ಟಿನ ನಡುವೆ ಮಹತ್ವದ ಸಭೆ
ಮಹಾರಾಷ್ಟ್ರದ ಮಹಾ ವಿಕಾಸ ಅಘಾದಿಯಲ್ಲಿ ಬಿರುಕು ಮೂಡ್ತಿದೆ. ಈ ಮಧ್ಯೆ ಸಿಎಂ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಭೇಟಿ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ, ಗೃಹ ಸಚಿವ ದಿಲೀಪ್‌ ವಲ್ಸೆ ಕೂಡ ಭಾಗಿಯಾಗಿದ್ದರು. ಮಾಜಿ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಇ.ಡಿ ತನಿಖೆ ನಡೆಯುತ್ತಿರುವಾಗಲೇ, ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಹೇಳಿಕೆಯಿಂದ ಮೈತ್ರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರ್ತಿದೆ. ಆ ಬಳಿಕ ಶಿವಸೇನೆಯು ತನ್ನ ಹಳೆಯ ಮಿತ್ರ ಬಿಜೆಪಿ ಜೊತೆಗೆ ಪುನರ್‌ ಮೈತ್ರಿಗೆ ಒಲವು ತೋರುವ ಸುಳಿವು ನೀಡಿತ್ತು.

5. ಸ್ಪೆಲ್ಲಿಂಗ್​ ಬೀ ಸ್ಪರ್ಧೆಯಲ್ಲಿ ಭಾರತೀಯರ ಸಾಧನೆ
ಅಮೆರಿಕಾದಲ್ಲಿ ಪ್ರತಿ ವರ್ಷ ನಡೆಯುವ ಸ್ಪೆಲ್ಪಿಂಗ್‌ ಬೀ ಸ್ಪರ್ಧೆಯಲ್ಲಿ ಇತ್ತೀಚೆಗೆ ಸತತವಾಗಿ ಭಾರತೀಯರೇ ಗೆಲ್ಲುತ್ತಿದ್ದಾರೆ. ಈ ವರ್ಷ ಇನ್ನೊಂದು ಹೆಮ್ಮೆಯ ಗರಿಯೇರಿದ್ದು, ಸ್ಪೆಲ್ಲಿಂಗ್‌ ಬಿ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ತಲುಪಿರುವ 11 ಮಂದಿಯಲ್ಲಿ, 9 ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳೇ ಅನ್ನೋದು ವಿಶೇಷ. ವಿಶ್ವದಲ್ಲೇ ಅತ್ಯಂತ ಕಠಿಣವಾಗಿರುವ ಇಂಗ್ಲಿಷ್‌ ಪದಗಳ ಅಕ್ಷರಗಳನ್ನು ಹೇಳುವ ಈ ಸ್ಪರ್ಧೆಯಲ್ಲಿ ಅಮೆರಿಕನ್ನರನ್ನೇ ಭಾರತೀಯರು ಮೀರಿಸಿದ್ದಾರೆ.

6. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಭಾರತ
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್​​​ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕ್ರಮಕ್ಕೆ ಭಾರತ ಒತ್ತಾಯಿಸಿದೆ. ಜಮ್ಮುವಿನಲ್ಲಿ ನಡೆದ ಉಗ್ರರ ದಾಳಿಯನ್ನ ಭಾರತ ಸರ್ಕಾರದ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ವಿ.ಎಸ್‌. ಕೌಮುದಿ ಪ್ರಸ್ತಾಪಿಸಿದ್ರು. ಉಗ್ರ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಂತರಾಷ್ಟ್ರೀಯ ಸಮುದಾಯಗಳು ಪಾಕಿಸ್ತಾನಕ್ಕೆ ಸೂಚಿಸಲು ಇದು ಸೂಕ್ತ ಸಮಯವಾಗಿದೆ ಅಂತಾ ಪಾಕಿಸ್ತಾನದ ವಿರುದ್ಧ ಹರಿಹಾಯ್ದರು.

7. ಮಹಿಳೆಯರು ಬಹುಪತಿತ್ವ ಹೊಂದಬಹುದು
ಪುರುಷರು ಬಹುಪತ್ನಿತ್ವ ಹೊಂದುವ ಹಾಗೆ ಮಹಿಳೆಯೂ ಕೂಡ ಬಹುಪತಿತ್ವ ಹೊಂದಬಹುದು ಎಂದು ದಕ್ಷಿಣ ಆಫ್ರಿಕಾ ಸರ್ಕಾರ ಹೇಳಿದೆ. ದೇಶದಲ್ಲಿ ಈ ವಿಚಾರವಾಗಿ ಸರ್ಕಾರ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರವಾಗಿ ಈ ಹಿಂದೆ ಕೆಲ ಸಂಘಟನೆಗಳ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಇದೀಗ ಗೃಹ ಇಲಾಖೆ ಪ್ರಸ್ತಾವನೆ ಹೊರಡಿಸಿದ್ದು, ಸಮಾನತೆ ಮತ್ತು ಆಯ್ಕೆಯ ಹಿತದೃಷ್ಟಿಯಿಂದ ಒಂದಕ್ಕಿಂತ ಹೆಚ್ಚು ಗಂಡಂದಿರನ್ನ ಹೊಂದಬಹುದು ಅಂತ ಕಾನೂನನ್ನ ಜಾರಿಗೆ ತರಲಾಗಿದೆ ಅಂತ ಹೇಳಿದೆ.

8. ಮಿಲೆನಿಯಮ್​ ಸಮಸ್ಯೆ ಬಗೆಹರಿಸಿದ ಭಾರತೀಯ
ಸುಮಾರು 166 ವರ್ಷಗಳಿಂದ ಬಿಡಿಸಲಾಗದ ಗಣಿತದ ಫಾರ್ಮುಲಾವೊಂದನ್ನ ಹೈದರಾಬಾದ್​ನ ಗಣಿತಜ್ಞ ಬಗೆಹರಿಸಿದ್ದಾರೆ. ದಿ ರೇಮನ್​ ಹೈಪಾಥಿಸಿಸ್​ ಎಂದೇ ಕರೆಯಲಾಗುವ ಗಣಿತ ಸಮಸ್ಯೆಯನ್ನ ಮಿಲೆನಿಯಮ್​ ಪ್ರಾಬ್ಲಮ್​ ಎಂದೇ ಪರಿಗಣಿಸಲಾಗಿತ್ತು. ಇದನ್ನ ಬಗೆಹರಿಸಿದವರಿಗೆ 10 ಲಕ್ಷ ಡಾಲರ್​ ಬಹುಮಾನ ಘೋಷಿಸಲಾಗಿತ್ತು. ಇದೀಗ ಹೈದರಾಬಾದ್​ನ ಶ್ರೀನಿಧಿ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್​ &​ ಟೆಕ್ನಾಲಜಿ ಗಣಿತ ತಜ್ಞ ಕುಮಾರ್ ಈಶ್ವರ್​​​​ ಈ ಸಮಸ್ಯೆ ಬಗೆಹರಿಸಿದ್ದಾರೆ. ಇದರ ಸತ್ಯಾಸತ್ಯತೆ ಅರಿಯಲು ತಜ್ಞರ ತಂಡವನ್ನ ರಚಿಸಲಾಗಿದೆ.

9. 16 ಸಾವಿರ ಸಿಮ್​ ಕಾರ್ಡ್​ ಸೃಷ್ಟಿಸಿದ್ದ ಕಳ್ಳರು ಅರೆಸ್ಟ್
ಒಡಿಶಾ ಕಟಕ್​ನಲ್ಲಿ ಸೈಬರ್​ ಅಪರಾಧದಲ್ಲಿ ತೊಡಗಿದ್ದ 7 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 16 ಸಾವಿರ ಸಿಮ್​ ಕಾರ್ಡ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಪ್ರೀ ಆಕ್ಟಿವೇಟೆಡ್​ ಸಿಮ್​ಗಳನ್ನು ಸೃಷ್ಟಿಸಿ ನಂತರ ಅವುಗಳನ್ನು ಬೇರೆ ರಾಜ್ಯಗಳಲ್ಲಿ ದುಡ್ಡಿಗೆ ಮಾರುತ್ತಿದ್ದರು. ಅಲ್ಲದೆ ಈ ಸೈಬರ್​ ಕಳ್ಳರು ಸಿಮ್​ಗಳನ್ನು ಫೇಕ್​ ಐಡಿಗಳಿಂದ ಕ್ರಿಯೇಟ್​ ಮಾಡುತ್ತಿದ್ದರು ಅಂತಾ ವಿಚಾರಣೆ ವೇಳೆ ತಿಳಿದುಬಂದಿದೆ.

10. ಪವರ್​ಸ್ಟಾರ್​ಗೆ ಬೆಳ್ಳಿಗದೆ ಕೊಟ್ಟ ಅಭಿಮಾನಿಗಳು
ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ಗೆ ಅಭಿಮಾನಿಗಳು ಬೆಳ್ಳಿ ಗದೆ ಮತ್ತು ಕಿರೀಟ ಕೊಟ್ಟಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡ್ತಿದೆ. ಈ ಹಿಂದೆ ‘ದೊಡ್ಮನೆ ಹುಡ್ಗ’ ಸಿನಿಮಾ ಶೂಟಿಂಗ್ ಟೈಮ್​ನಲ್ಲಿ ಅಪ್ಪು ಫ್ಯಾನ್ಸ್​ ಬೆಳ್ಳಿ ಕತ್ತಿಯನ್ನ ಉಡುಗೊರೆಯಾಗಿ ಕೊಟ್ಟಿದ್ರು. ಈಗ ಪುನೀತ್ ರಾಜ್​ಕುಮಾರ್ ಅಭಿಮಾನಿ ಬಳಗ ಹಾಗೂ ಅಪ್ಪು ಹುಡುಗರು ತಂಡದಿಂದ ಉಡುಗೊರೆ ನೀಡಲಾಗಿದ್ದು, ಅಭಿಮಾನಿಗಳ ಪ್ರೀತಿಗೆ ಪವರ್​ಸ್ಟಾರ್ ಫಿದಾ ಆಗಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link