ನಿಧಿ ಅರವಿಂದ್ ನಡುವೆ ಕ್ಯಾರೆಕ್ಟರ್ ವಾರ್‌! ಇದು ಎರಡನೇ ವಾಕ್ಸಮರ!

ನಿಧಿ ಅರವಿಂದ್ ನಡುವೆ ಕ್ಯಾರೆಕ್ಟರ್ ವಾರ್‌! ಇದು ಎರಡನೇ ವಾಕ್ಸಮರ!

ಟೆಸ್ಟ್‌ ಮ್ಯಾಚ್‌ಗಳಲ್ಲಿ ಫಸ್ಟ್‌ ಇನ್ನಿಂಗ್ಸ್‌ಗಿಂತ ಸೆಕೆಂಡ್ ಇನ್ನಿಂಗ್ಸ್‌ನಲ್ಲೇ ತಿರುವುಗಳು ಸಿಗೋದು. ಅದು ಹವಾಮಾನದ ಕಾರಣಕ್ಕೂ ಇರಬಹುದು. ಪಿಚ್‌ನ ಬದಲಾವಣೆಯ ಕಾರಣಕ್ಕೂ ಇರಬಹುದು. ಆದ್ರೆ, ಸೆಕೆಂಡ್‌ ಇನ್ನಿಂಗ್ಸ್‌ ಮಾತ್ರ ರೋಚಕವಾಗರುತ್ತೆ. ಮೊದಲ ಇನ್ನಿಂಗ್ಸ್‌ಗಿಂತ ಅಗ್ರೇಸಿವ್‌ ಆಗಿರುತ್ತೆ. ಆದ್ರೆ ಬಿಗ್‌ಬಾಸ್ ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಸ್ಪರ್ಧಿಗಳ ನಡುವಣ ಕಿತ್ತಾಟಕ್ಕೆ ಹವಾಮಾನವಾಗಲಿ ಪಿಚ್‌ ಆಗಲಿ ಕಾರಣವಲ್ಲ. 43 ದಿನಗಳ ಗ್ಯಾಪ್‌ ಕಾರಣ.

ಈ ಮಾತು ಹೇಳೋಕೆ ಕಾರಣವಿದೆ. ಫಸ್ಟ್‌ ಇನ್ನಿಂಗ್ಸ್‌ನಲ್ಲಿ ಕ್ಲೋಸ್‌ ಫ್ರೆಂಡ್ಸ್ ಅಲ್ಲದಿದ್ರೂ ನಾರ್ಮಲ್ ಆಗಿದ್ದ ನಿಧಿ ಸುಬ್ಬಯ್ಯ ಹಾಗೂ ಅರವಿಂದ್‌ ಈಗ ಕಿತ್ತಾಡಿಕೊಂಡು ಒಬ್ಬೊರಿಗೊಬ್ಬರು ವೈರಿಗಳಾಗಿ ಬದಲಾಗಿಬಿಟ್ಟಿದ್ದಾರೆ. ವೈರಿಗಳು ಅನ್ನೋ ಪದ ಬಳಸಲು ಕಾರಣ ಅವರಿಬ್ಬರ ನಡುವೆ ನಡೆದ ಮಾತಿನ ಕಾಳಗ.

ಕ್ವಾಟ್ಲೆ ಕಿಲಾಡಿಗಳು ಹಾಗೂ ಸೂರ್ಯ ಸೇನೆ ನಡುವೆ ನಡೆದ ಟಾಸ್ಕ್‌ನಲ್ಲಿ ನಿಯಮಗಳ ಬಗ್ಗೆ ಕ್ಯಾಪ್ಟನ್‌ಗಳಾದ ಲ್ಯಾಗ್ ಮಂಜು ಹಾಗೂ ಅರವಿಂದ್ ನಡುವೆ ವಾದ ಪ್ರತಿವಾದ ನಡೆಯುತ್ತಿತ್ತು. ಈ ವೇಳೆ ನಿಧಿ ಸುಬ್ಬಯ್ಯ ಮಾತನಾಡಿದಾಗ, ನೀನು ಸ್ವಲ್ಪ ಮುಚ್ಚು ನಾನು ಕ್ಯಾಪ್ಟನ್ ಮಾತನಾಡ್ತಿದ್ದೇವೆ ಅಂತಾ ಹೇಳಿಬಿಟ್ಟರು. ಇದರಿಂದ ನಿಧಿ ಬೇಸರಗೊಂಡರು ಸಹ ಆ ಕ್ಷಣದಲ್ಲಿ ಏನೂ ಮಾತನಾಡಲಿಲ್ಲ. ಸ್ವಲ್ಪ ಸಮಯದ ನಂತರ..

blankನಿಧಿ ಸುಬ್ಬಯ್ಯ: ಅವನಿಗೆ ಎಷ್ಟು ಹೇಳಿದರು ಅಷ್ಟೆನೇ. ಸ್ವಲ್ಪ ಮುಚ್ಕೊಳ್ಳಿ.. ಇಷ್ಟೆಲ್ಲಾ ಆದ್ಮೇಲೆ ಸಾರಿ.. ಅಲ್ಲಿ ಬಿದ್ದಿದ್ದನ್ನ ತೆಗೆದುಕೊಂಡು ಬಂದಿದ್ದಕ್ಕೆ ಅವರ ನಿಜವಾದ ಕ್ಯಾರೆಕ್ಟರ್ ತೋರಿಸುತ್ತೆ ಅಂತಾ ನಮಗೆ ಹೇಳ್ತಾರೆ. ನಾನ್ ಯಾಕೆ ಸುಮ್ಮನಿರಬೇಕು. ಯಾರವನು ಇಂಟರ್‌ನ್ಯಾಷನಲ್ ಚಾಂಪಿಯನ್ಸಾ? ಸೋಲನ್ನ ಒಪ್ಪಿಕೊಳ್ಳೋಕೆ ಆಗೋದೇ ಇಲ್ಲ ಅವನಿಗೆ. ಅದೇ ಮೇನ್ ಪ್ರಾಬ್ಲಂ ಆಗಿರೋದು. ಎಲ್ಲಾ ಟಾಸ್ಕ್‌ನಲ್ಲೂ ಅಷ್ಟೇ. ಒಂದು ಕ್ರೀಡಾ ಸ್ಫೂರ್ತಿ ಇಲ್ಲ. ಸ್ಪೋಟ್ಸ್‌ಪರ್ಸನ್ ಆಗಿ ಬಂದೋನಿಗೆನೇ ಕ್ರೀಡಾ ಸ್ಫೂರ್ತಿ ಇಲ್ಲ ಅಂತಾ ನಿಧಿ ಪ್ರಿಯಾಂಕಾ, ಮಂಜು, ರಘು ಸಮ್ಮುಖದಲ್ಲಿ ಹೇಳಿದರು.

ಈ ವೇಳೆ ಅರವಿಂದ್‌ ಸಾರಿ ಕೇಳಲು ಬಂದಾಗ.. ನೋ ಅರವಿಂದ್ ಪ್ಲೀಸ್ ಪ್ಲೀಸ್‌.. ಐಯ್ಯಮ್ ಡನ್‌ ಅಂತಾ ಹೇಳಿದರು. ಕೆ.ಪಿ. ಕೋಪ ಮಾಡಿಕೊಂಡು ಹೋದರು.

ನಿಧಿ ಸುಬ್ಬಯ್ಯ: ಗೆಟ್‌ ಲಾಸ್ಟ್‌.. ಐಯಮ್ ಸೀರಿಯಸ್. ಯೂ ಆರ್‌ ಎ ಲೂಸರ್‌. ಕ್ರೀಡಾ ಸ್ಫೂರ್ತಿ ಇಲ್ಲ ಅಂದ್ರೆ, ಯಾವ ಇದರಲ್ಲಿ ಬಂದಿದ್ಯಾ ನೀನು? ನೀವು ನಿಮ್ಮನ್ನ ಕ್ರೀಡಾಪಟು ಅಂತಾ ಹೇಳಿಕೊಳ್ತೀರಾ.? ಪಾರ್ಟಿಸಿಪೇಶನ್‌ ಮೆಡಲ್‌ನಲ್ಲಿ ಬಂದಿರೋದು. ಗೆದ್ದು ತೋರ್ಸು ಡಕಾರ್‌ ಱಲಿನಾ? ಅವನು ಏನು ಬೇಕಾದರೂ ಹೇಳಬಹುದು. ಬಂದು ಸಾರಿ ಹೇಳಿಬಿಡ್ತಾನೆ ಅಷ್ಟೇ. ಸೋಲನ್ನ ಒಪ್ಪಿಕೊಳ್ಳೋಕೆ ಆಗಲ್ಲ ಅವನಿಗೆ. ಇದೇ ಸತ್ಯ ಅಂತಾ ನಿಧಿ ಆಕ್ರೋಶಭರಿತವಾಗಿ ಹೇಳಿದರು.

ಇದಿಷ್ಟಕ್ಕೆ ಒಂದು ಭಾಗ ಮುಗಿತು. ಹಾಗಂತಾ ಸಂಪೂರ್ಣವಾಗಿ ಮುಗಿಯಲಿಲ್ಲ. ಟಾಸ್ಕ್‌ ಮುಗಿದ್ಮೇಲೆ ಕಂಟ್ಯೂನ್‌ ಆಯ್ತು. ಅದು ಅಡುಗೆ ಮನೆಯಲ್ಲಿ. ನಿಧಿ ಅಡುಗೆ ಮನೆಯಲ್ಲಿದ್ದಾಗ ಮತ್ತೊಂದು ಸುತ್ತಿನ ವಾಕ್ಸಮರ ನಡೆಯಿತು. ಅಲ್ಲಿಯೂ ಕೂಡ ಇಬ್ಬರು ಸಮಾಧಾನಗೊಳ್ಳಲಿಲ್ಲ. ಆ ನಂತರ ಗಾರ್ಡನ್‌ ಏರಿಯಾದಲ್ಲಿ ಅರವಿಂದ್‌, ದಿವ್ಯಾ ಬಳಿ ಈ ವಿಚಾರದ ಬಗ್ಗೆ ಮಾತನಾಡಿದರು.

ಅರವಿಂದ್‌: ಅವರು ಒಳ್ಳೆಯವರ ಜೊತೆನೇ ಇರಲಿ. ಕ್ಯಾರೆಕ್ಟರ್ ಏನು ಅಂತಾ ಗೊತ್ತಿದೆ ಎಲ್ಲರಿಗೂ. ನಿಮಗೆ ಬೇಕಾದಾಗ ಬೆಂಡ್ ಆಗುತ್ತೆ ರೂಲ್‌. ಅವಳು ಅಷ್ಟೊಂದು ಮಾತನಾಡುವ ಅಗತ್ಯ ಇರ್ಲಿಲ್ಲ. ಅವಳು ಯಾರು? ನೀನು ಏನು? ಡಕಾರ್ ಫಿನಿಶ್‌ ಮಾಡು? ಅಂತಾ ಹೇಳೋ ಅವಳಿಗೆ ನಾನು ಏನೂ ಅಂತಾ ಗೊತ್ತು. ನನಗೆ ಇಲ್ಲಿ ಬರೋತನಕ ಆಕೆ ಯಾರು ಅಂತಾನೂ ಗೊತ್ತಿರಲಿಲ್ಲ.

ಇನ್ನೊಂದೆಡೆ ಕುಳಿತ್ತಿದ್ದ ನಿಧಿ ಸುಬ್ಬಯ್ಯ ಕೂಡ ಅರವಿಂದ್ ಬಗ್ಗೆಯೇ ಮಾತನಾಡ್ತಿದ್ರು.

blankನಿಧಿ ಸುಬ್ಬಯ್ಯ: ಅವಳ ಕ್ಯಾರೆಕ್ಟರ್‌ ಗೊತ್ತು ನನಗೆ ಅಂತಾ ಹೇಳೋದು ಆ ವ್ಯಕ್ತಿ ಏನು ಅನ್ನೋದನ್ನ ತೋರಿಸುತ್ತೆ. ಅವನು ಯಾರು ಅಂತಾನೇ ಜನರಿಗೆ ಗೊತ್ತಿರಲಿಲ್ಲ. ಬಿಗ್‌ಬಾಸ್‌ನಿಂದಲೇ ಜನರಿಗೆ ಗೊತ್ತಾಗಿದ್ದು. ಮಾತು ಮಾತಿಗೆ ನಾನು ಎಂಥವಳು ಅಂತಾ ಗೊತ್ತು ಅಂತಾರೆ. ನಾನು ಏನ್ ಮಾಡಿದ್ದೀನಿ ನಾನು?

ಇಷ್ಟಕ್ಕೆ ಮುಗೀತಾ ನೋ.. ಶುಭಾ ಪೂಂಜಾ ಇಬ್ಬರ ನಡುವೆ ಸಂಧಾನ ಮಾಡೋಕೆ ಮುಂದಾದರು. ಈ ವೇಳೆ, ಅರವಿಂದ್ ಅವಳು ದೊಡ್ಡ ಫಿಗರ್‌ ಅಂದ್ರೆ ನಾನು ದೊಡ್ಡ ಫಿಗರೇ ಅಂತಾ ಹೇಳಿದರು. ಅವರು ದೊಡ್ಡವರಾದ್ರೆ ನಾನು ದೊಡ್ಡವನೇ. ಅವರ ಸ್ನೇಹ ಬೇಡ. ಎಲ್ಲ ಮುಗೀತು ಎಂದರು. ನಂತರ ಶುಭಾ ನಿಧಿ ಸುಬ್ಬಯ್ಯ ಬಳಿ ಹೋದಾಗ, ಅವರು ನೀನು ಅರವಿಂದ್ ಜೊತೆ ಮಾತನಾಡುವಾಗ ನನ್ನ ಬಗ್ಗೆ ಮಾತನಾಡ್ಬೇಡ. ಇದು ನನ್ನ ಕಾಳಗ. ನೀನು ಮಧ್ಯಪ್ರವೇಶ ಮಾಡ್ಬೇಡ ಅಂತಾ ಕಡ್ಡಿಮುರಿದಂತೆ ಹೇಳಿಬಿಟ್ಟರು. ಕೊನೆಗೆ ಶುಭಾ ಸುಮ್ಮನಾದರು.

ಹೀಗೇ ಅರವಿಂದ್ ಹಾಗೂ ನಿಧಿ ನಡುವೆ ದೊಡ್ಡ ವಾಕ್ಸಮರವೇ ನಡೆದು ಬಿಟ್ಚಿತು. ಇದು ಲ್ಯಾಗ್ ಮಂಜು ಹಾಗೂ ಚಂದ್ರಚೂಡ್‌ ನಂತರ ಬಿಗ್‌ಬಾಸ್ ಮನೆಯಲ್ಲಿ ನಡೆದ ಎರಡನೇ ದೊಡ್ಡ ವಾಕ್ಸಮರ.

The post ನಿಧಿ ಅರವಿಂದ್ ನಡುವೆ ಕ್ಯಾರೆಕ್ಟರ್ ವಾರ್‌! ಇದು ಎರಡನೇ ವಾಕ್ಸಮರ! appeared first on News First Kannada.

Source: newsfirstlive.com

Source link