ಕೋವಿನ್ ಆ್ಯಪ್​ ಬಳಸಲು ಮುಂದೆ ಬಂದ 50 ದೇಶಗಳು: ಉಚಿತವಾಗಿ ಬಳಸೋದಕ್ಕೂ ಸಿಕ್ತು ಅನುಮತಿ

ಕೋವಿನ್ ಆ್ಯಪ್​ ಬಳಸಲು ಮುಂದೆ ಬಂದ 50 ದೇಶಗಳು: ಉಚಿತವಾಗಿ ಬಳಸೋದಕ್ಕೂ ಸಿಕ್ತು ಅನುಮತಿ

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಲಸಿಕಾ ಅಭಿಯಾನ ಬೇರೆಲ್ಲಾ ದೇಶಗಳಿಗಿಂತ ಒಂದ್​ ಕೈ ಜಾಸ್ತಿನೇ ಇದೆ. ಅಲ್ಲದೇ ಅತೀ ಹೆಚ್ಚು ಜನರನ್ನ ಈ ಲಸಿಕೆ ತಲುಪಿದೆ. ಇದರಲ್ಲಿ ಕೋವಿನ್ ಆ್ಯಪ್ ಹಾಗೂ ಪೋರ್ಟಲ್ ಪಾಲು ಹೆಚ್ಚಾಗಿದೆ. ಕೋವಿನ್​ ಆ್ಯಪ್​ ಮೂಲಕ ಭಾರತದಲ್ಲಿ ಲಸಿಕಾಭಿಯಾನ ಸಕ್ಸಸ್​ ಕೂಡ ಆಗಿದೆ. ಭಾರತದ ಕೋವಿನ್ ಆ್ಯಪ್​ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಇದೀಗ 50ಕ್ಕೂ ಹೆಚ್ಚು ದೇಶಗಳು ಕೋವಿನ್ ಬಳಸಿಕೊಳ್ಳಲು ಆಸಕ್ತಿ ತೋರಿಸುತ್ತಿವೆ.

ಪ್ರಧಾನಿ ನರೇಂದ್ರ ಮೋದಿ, ಕೋವಿನ್ ಪೋರ್ಟಲ್ ತಂತ್ರಜ್ಞಾನವನ್ನು ಓಪನ್ ಸೋರ್ಸ್ ವರ್ಷನ್​ನ್ನಾಗಿ ನೀಡಲು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಉಚಿತವಾಗಿ ನೀಡಲು ಸೂಚಿಸಿದ್ದಾರೆ. ಈ ಮೂಲಕ ಕೋವಿನ್ ಬಳಸಲು ಇಚ್ಛಿಸೋ ದೇಶಗಳು ಸುಲಭವಾಗಿ, ಯಾವುದೇ ಅಡೆ ತಡೆ ಇಲ್ಲದೆ ಈ ಆ್ಯಪ್ ಬಳಕೆ ಮಾಡಿಕೊಳ್ಳಬಹುದು ಅಂತ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಡಾ. ಆರ್.ಎಸ್.ಶರ್ಮಾಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ.

The post ಕೋವಿನ್ ಆ್ಯಪ್​ ಬಳಸಲು ಮುಂದೆ ಬಂದ 50 ದೇಶಗಳು: ಉಚಿತವಾಗಿ ಬಳಸೋದಕ್ಕೂ ಸಿಕ್ತು ಅನುಮತಿ appeared first on News First Kannada.

Source: newsfirstlive.com

Source link