ಧವನ್​​ ಜೋಡಿಯಾಗಲು 4 ಮಂದಿ ಓಪನರ್ಸ್​ ಫೈಟ್! -ಅವಕಾಶದ ನಿರೀಕ್ಷೆಯಲ್ಲಿ ಕನ್ನಡಿಗ ಪಡಿಕ್ಕಲ್​

ಧವನ್​​ ಜೋಡಿಯಾಗಲು 4 ಮಂದಿ ಓಪನರ್ಸ್​ ಫೈಟ್! -ಅವಕಾಶದ ನಿರೀಕ್ಷೆಯಲ್ಲಿ ಕನ್ನಡಿಗ ಪಡಿಕ್ಕಲ್​

ಮೂರು ಟಿ 20, ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಟೀಮ್​ ಇಂಡಿಯಾ ಯುವ ಪಡೆ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಅನುಭವಿಗಳ ಅಲಭ್ಯತೆಯಲ್ಲಿ ಆಯ್ಕೆಯಾಗಿರುವ ಯುವ ಆಟಗಾರರ ಪಾಲಿಗೆ ಇದು ಗೋಲ್ಡನ್​ ಚಾನ್ಸ್​ ಎಂದೇ ಹೇಳಲಾಗ್ತಿದೆ. ಆದ್ರೆ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಯಾರಿಗೆ ಚಾನ್ಸ್​​ ಸಿಗುತ್ತೆ ಅನ್ನೋದೇ ಈಗ ಕುತೂಹಲ ಮೂಡಿಸಿರುವ ವಿಚಾರ. ಅದರಲ್ಲೂ ಆರಂಭಿಕ ಸ್ಲಾಟ್​ನ ಪೈಪೋಟಿ ಮ್ಯಾನೇಜ್​ಮೆಂಟ್​ ಅನ್ನ ಇಕ್ಕಟ್ಟಿಗೆ ಸಿಲುಕಿದೆ.

ವಿರಾಟ್​​ ಕೊಹ್ಲಿ ನೇತೃತ್ವದ ಸೀನಿಯರ್​ ಆಟಗಾರರ ತಂಡ ಆಂಗ್ಲರ ನಾಡಲ್ಲಿ ಬೀಡು ಬಿಟ್ಟಿದ್ರೆ, ಶಿಖರ್​ ಧವನ್​ ನೇತೃತ್ವದಲ್ಲಿ ಯುವ ಆಟಗಾರರ ಪಡೆ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. 20 ಯುವ ಆಟಗಾರರನ್ನೊಳಗೊಂಡ ತಂಡ ಶ್ರೀಲಂಕಾ ತಲುಪುತ್ತಿದ್ದಂತೆ ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಳ್ಳೋದ್ಯಾರು ಎಂಬ ಚರ್ಚೆ ಆರಂಭವಾಗಿದೆ. ಈಗಾಗಲೇ ಹೆಡ್​​ ಕೋಚ್​​​ ರಾಹುಲ್​ ದ್ರಾವಿಡ್​ ಎಲ್ಲರಿಗೂ ಅವಕಾಶ ಸಿಗೋದು ಕಷ್ಟಸಾಧ್ಯ ಎಂದು ನೇರವಾಗಿಯೇ ಹೇಳಿದ್ದಾರೆ. ಹೀಗಾಗಿ ಅಂತಿಮ ಹನ್ನೊಂದರ ಬಳಗದ ಸ್ಥಾನಕ್ಕಾಗಿ ಫೈಟ್​​ ಆರಂಭವಾಗಿದೆ.

blankಕುತೂಹಲ ಕೆರಳಿಸಿದ ಓಪನಿಂಗ್​​ ಸ್ಲಾಟ್​ ಫೈಟ್​​!
ಲಂಕನ್ನರ ಬೇಟೆಗೆ ಧವನ್ ಜೋಡಿ ಯಾರು?

ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ತಂಡದಲ್ಲಿ ಪ್ರತಿಯೊಂದು ಸ್ಲಾಟ್​​ಗೂ ತೀವ್ರವಾದ ಪೈಪೋಟಿಯಿದೆ. ಆದ್ರೆ ಆರಂಭಿಕರ ಸ್ಥಾನಕ್ಕಿರುವ ಪೈಪೋಟಿ ಉಳಿದೆಲ್ಲಾ ಸ್ಲಾಟ್​ಗಳಿಗಿಂತ ಹೆಚ್ಚು ಕುತೂಹಲವನ್ನ ಕೆರಳಿಸಿದೆ. ಒಂದು ಸ್ಥಾನದಲ್ಲಿ ನಾಯಕ ಶಿಖರ್​ ಧವನ್​ ಕಣಕ್ಕಿಳಿಯೋದು ಕನ್​ಫರ್ಮ್​​ ಆಗಿದೆ. ಹೀಗಾಗಿ ಉಳಿದ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

‘ಭವಿಷ್ಯದ ತೆಂಡುಲ್ಕರ್​​’ ಪೃಥ್ವಿ ಷಾಗೆ ಸಿಗುತ್ತಾ ಚಾನ್ಸ್​..?
ಆರಂಭದಲ್ಲಿ ಭವಿಷ್ಯದ ತೆಂಡುಲ್ಕರ್​​ ಎಂದೇ ಗುರುತಿಸಕೊಂಡಿದ್ದ ಪೃಥ್ವಿ ಷಾ ಕರಿಯರ್​​ ಇದೀಗ ರೋಲರ್​ ಕೋಸ್ಟರ್​ ರೈಡ್​ನಂತಾಗಿರೋದು ತಿಳಿದ ಸಂಗತಿಯೇ. ಇದೀಗ ಲಂಕಾ ಸರಣಿಯ ಟಿಕೆಟ್​ಗಿಟ್ಟಿಸಿಕೊಂಡಿರುವ ಪೃಥ್ವಿಗೆ ಟೀಮ್​ ಇಂಡಿಯಾಗೆ ಉತ್ತಮ ಸ್ಟಾರ್ಟ್​​ ಕೊಡಬಲ್ಲ ಸಾಮರ್ಥ್ಯ ಇದೆ. ಜೊತೆಗೆ ಧವನ್​ ಜೊತೆ ಡೆಲ್ಲಿ ಕ್ಯಾಪಿಟಲ್ಸ್​ ಪರ ಇನ್ನಿಂಗ್ಸ್​ ಆರಂಭಿಸಿದ ಅನುಭವವೂ ಇದೆ. ಇದೆಲ್ಲದರ ಜೊತೆಗೆ ಭವಿಷ್ಯದ ದೃಷ್ಠಿಯಿಂದ ಈ ಪ್ರವಾಸ ಪೃಥ್ವಿ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.

blankಅವಕಾಶದ ನಿರೀಕ್ಷೆಯಲ್ಲಿ ಕನ್ನಡಿಗ ಪಡಿಕ್ಕಲ್​
ಐಪಿಎಲ್​ ಟೂರ್ನಿಯಲ್ಲಿ ಆರ್​​ಸಿಬಿ ಪಾಲಿನ ದೇವದೂತ ದೇವದತ್​ ಪಡಿಕ್ಕಲ್​ ಕೂಡ ಚೊಚ್ಚಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ರಣಜಿ ಹಾಗೂ ಸೈಯದ್​ ಮುಷ್ತಾಕ್​ ಅಲಿ ಟೂರ್ನಿಗಳಲ್ಲಿ ಆರಂಭಿಕನಾಗಿ ಮ್ಯಾಜಿಕ್​ ಮಾಡಿರುವ ಪಡಿಕ್ಕಲ್​ ಐಪಿಎಲ್​ ಟೂರ್ನಿಯಲ್ಲೂ ಮಿಂಚು ಹರಿಸಿದ್ದಾರೆ. ಆಡಿದ 21 ಐಪಿಎಲ್ ಪಂದ್ಯಗಳಲ್ಲಿ 668 ರನ್​ ಕಲೆ ಹಾಕಿರುವ ಪಡಿಕ್ಕಲ್​ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಬೇಕು ಅನ್ನೋ ಕೂಗು ಕಳೆದ ವರ್ಷವೇ ಕೇಳಿ ಬಂದಿತ್ತು. ಇದೀಗ ತಂಡದಲ್ಲಿ ಸ್ಥಾನ ಸಿಕ್ಕಿದೆ. ಆದ್ರೆ, ಆಡೋ ಅವಕಾಶ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಋತುರಾಜ್​ ಗಾಯಕ್ವಾಡ್​ಗೆ ಸಿಗುತ್ತಾ ಟಿಕೆಟ್​​​..?
ಆರ್​​ಸಿಬಿ ಪಾಲಿಗೆ ದೇವದತ್ತ್​ ಪಡಿಕ್ಕಲ್​ ಆದ್ರೆ, ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಆರಂಭಿಕನ ಸ್ಥಾನಕ್ಕೆ ಸಿಕ್ಕ ಸೊಲ್ಯೂಷನ್​ ರುತುರಾಜ್​ ಗಾಯಕ್ವಾಡ್​. ಚೆನ್ನೈ ಸೂಪರ್​ ಕಿಂಗ್ಸ್​​​ ಪರ ಆಡಿದ 13 ಪಂದ್ಯಗಳಲ್ಲೇ 5 ಅರ್ಧಶತಕಗಳ ಸಹಿತ 400 ರನ್​ ಸಿಡಿಸಿರುವ ಗಾಯಕ್ವಾಡ್​ ಸಾಮರ್ಥ್ಯವನ್ನೂ ಅಲ್ಲಗಳೆಯುವಂತಿಲ್ಲ. ಐಪಿಎಲ್​ನಲ್ಲಿ 124.61ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​​ ಬೀಸಿರುವ ಋತುರಾಜ್​ ಕೂಡ ಧವನ್​ ಜೊತೆ ಇನ್ನಿಂಗ್ಸ್​ ಆರಂಭಿಸೋ ತವಕದಲ್ಲಿದ್ದಾರೆ.

ಈಡೇರುತ್ತಾ ಬಹುಕಾಲದ ರಾಣಾ ಕನಸು?
ರುತುರಾಜ್​, ಪಡಿಕ್ಕಲ್, ಪೃಥ್ವಿ.. ಈ ಮೂವರು ಯಂಗ್​ ಸ್ಟರ್​​ಗಳ ಜೊತೆಗೆ 27 ವರ್ಷದ ನಿತೀಶ್​ ರಾಣಾ ಕೂಡ ಆರಂಭಿಕ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಲಿಸ್ಟ್​​ ಎ ಕ್ರಿಕೆಟ್​​ನಲ್ಲಿ 41.27ರ ಸರಾಸರಿಯಲ್ಲಿ ಬ್ಯಾಟ್​ ಬೀಸಿರುವ ರಾಣಾ, ಐಪಿಎಲ್​ನಲ್ಲಿ 133.82ರ ಸ್ಟ್ರೈಕ್​​ರೇಟ್​ ಹೊಂದಿದ್ದಾರೆ. ಹಲವು ವರ್ಷಗಳಿಂದ ದೇಶಿ ಹಾಗೂ ಐಪಿಎಲ್​ ಟೂರ್ನಿಗಳಲ್ಲಿ ಬೆವರುಹರಿಸಿರುವ ನಿತೀಶ್​ ರಾಣಾಗೆ ಕೊನೆಗೂ ಆಯ್ಕೆ ಸಮಿತಿ ಮಣೆ ಹಾಕಿದೆ. ಆದ್ರೆ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿರುವ ಪ್ರಶ್ನೆಯಾಗಿದೆ.

ಪೃಥ್ವಿ ಷಾ ಈಗಾಗಲೇ ವಿದೇಶಿ ಪಿಚ್​ಗಳಲ್ಲಿ ಟೀಮ್​ ಇಂಡಿಯಾ ಪರ ಆಡಿರುವ ಅನುಭವ ಹೊಂದಿದ್ರೆ, ಯುವ ಆಟಗಾರರಾದ ​ ಪಡಿಕ್ಕಲ್​, ಗಾಯಕ್ವಾಡ್ ಐಪಿಎಲ್​ನಲ್ಲಿ ಸಾಮರ್ಥ್ಯ ಹೊರಹಾಕಿದ್ದಾರೆ. ಇನ್ನು ನಿತೀಶ್​ ರಾಣಾಗೆ ಸುದೀರ್ಘ ಕ್ರಿಕೆಟ್​​ ಆಡಿದ ಅನುಭವವಿದೆ. ಈ ನಾಲ್ವರಿಗೆ ಸಮರ್ಥವಾಗಿ ಓಪನಿಂಗ್​ ನೀಡೋ ಸಾಮರ್ಥ್ಯವಿದೆ ಅನ್ನೋದನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗಿ ಬೆಸ್ಟ್​ ಆಫ್​​ ಪೋರ್​​ನಲ್ಲಿ ಯಾರು ದಿ ಬೆಸ್ಟ್​​ ಎಂದು ಮ್ಯಾನೇಜ್​ಮೆಂಟ್​​ ಮಣೆ ಹಾಕುತ್ತೇ ಅನ್ನೋದನ್ನ ಕಾದು ನೋಡಬೇಕಿದೆ.

The post ಧವನ್​​ ಜೋಡಿಯಾಗಲು 4 ಮಂದಿ ಓಪನರ್ಸ್​ ಫೈಟ್! -ಅವಕಾಶದ ನಿರೀಕ್ಷೆಯಲ್ಲಿ ಕನ್ನಡಿಗ ಪಡಿಕ್ಕಲ್​ appeared first on News First Kannada.

Source: newsfirstlive.com

Source link