ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

ದೊಡ್ಮನೆಯಲ್ಲಿ ಮತ್ತೆ ಮಾತಿನ ಕಲಹ ಪ್ರಾರಂಭವಾಗಿದೆ. ಪರಸ್ಪರ ಎದುರಾಳಿಗಳಾಗಿ ಟಾಸ್ಕ್ ಗಳಲ್ಲಿ ಆಡುತ್ತಿರುವ ಅರವಿಂದ್ ಮತ್ತು ನಿಧಿ ಸುಬ್ಬಯ್ಯ ಒಬ್ಬರಿಗೊಬ್ಬರು ಮಾತನಾಡದೆ ಇರುವಷ್ಟರ ಮಟ್ಟಿಗೆ ಜಗಳವಾಡಿಕೊಂಡು ಮನೆಯಲ್ಲಿ ಕುತೂಹಲ ಮೂಡಿಸಿದ್ದಾರೆ.

ಅರವಿಂದ್ ಮತ್ತು ನಿಧಿ ಜಗಳದ ಬಳಿಕ ಅರವಿಂದ್ ಬಳಿ ಬಂದ ಶುಭಾ ಪೂಂಜಾ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಈ ವೇಳೆ ಅರವಿಂದ್, ನನಗೆ ನಿಧಿ ಯಾರು ಅಂತಾನೆ ಗೊತ್ತಿರಲಿಲ್ಲಾ ಬಿಗ್‍ಬಾಸ್ ಮನೆಗೆ ಬಂದ ನಂತರ ಗೊತ್ತಾಗಿದ್ದು, ನಾನು ಅವಳ ಬಗ್ಗೆ ಕೆಟ್ಟದಾಗಿ ಏನು ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಶುಭಾ ನನಗೆ ನೀವಿಬ್ಬರು ಚೆನ್ನಾಗಿ ಗೊತ್ತು ನೀವಿಬ್ಬರು ಕೂಡ ನನ್ನ ಉತ್ತಮವಾದ ಸ್ನೇಹಿತರು. ಇದೀಗ ನೀವು ಹೀಗೆ ಜಗಳ ಮಾಡಿಕೊಂಡರೆ ನಾನು ಏನು ಮಾಡೋದು. ನನಗೆ ಇಲ್ಲಿ ಇರುವವರೆಲ್ಲಾ ಸ್ನೇಹಿತರೆ. ನಾನೀಗ ಯಾರ ಪರ ನಿಲ್ಲುವುದು ಎಂದು ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

ನಾನು ಮತ್ತು ಮಂಜು ಮಾತನಾಡುತ್ತಿರುವಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಮುಚ್ಚು ಎಂದಿದ್ದೆ ಅದರಲ್ಲಿ ಏನು ತಪ್ಪು ಎಂದು ಅರವಿಂದ್ ಶುಭಾಗೆ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶುಭಾ ನೀನು ಎಲ್ಲರ ಮುಂದೆ ಆ ರೀತಿ ಹೆಳಿದರೆ ಅವಳಿಗೂ ನೋವಾಗಲ್ವ ಎಂದಿದ್ದಾರೆ. ಬಳಿಕ ಅರವಿಂದ್ ಅವಳು ನನಗೆ ಏನೇನೊ ಹೇಳಿದ್ದಾಳೆ ನನಗೆ ಹೇಗೆ ಅನಿಸಬೇಕು. ನಾನು ಉದ್ದೇಶಪೂರ್ವಕವಾಗಿ ಕಟ್ಟ ಪದ ಬಳಸಿಲ್ಲ. ಅವಳು ದೊಡ್ಡ ಫಿಗರ್ ಆದರೆ ನಾನು ಕೂಡ ಫಿಗರ್. ನನಗೆ ಇಲ್ಲಿ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಈ ಬಗ್ಗೆ ನಾನು ಇನ್ನೂ ಅವಳೊಂದಿಗೆ ಏನು ಮಾತನಾಡೊದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

blank

ಅರವಿಂದ್ ಮತ್ತು ನಿಧಿ ಜಗಳದ ಮಧ್ಯೆ ಇದೀಗ ಶುಭಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಅರವಿಂದ್ ಮತ್ತು ನಿಧಿ ನಡುವೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಸರಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

The post ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ appeared first on Public TV.

Source: publictv.in

Source link